ಶಿಕ್ಷಕ ವೃತ್ತಿ ಜೊತೆಗೆ ಸಮಾಜ ಸೇವೆ ಮಾಡುತ್ತಿರುವವರು‌‌ ಶಿಕ್ಷಕರು

ಆರೋಗ್ಯ

ಶಿಕ್ಷಕ ವೃತ್ತಿಯ ಜೊತೆಗೆ ನಿಜವಾದ ಸಮಾಜ ಸೇವೆಯನ್ನು ಮಾಡುತ್ತಿದ್ದೇವೆ ಎಂದು ಎಲ್ಲಿಯೂ ಹೇಳಿಕೊಳ್ಳದೆ ಮಾಡುವವರು‌ ಶಿಕ್ಷಕರು ಎಂದು ಶಾಸಕ ರಘುಮೂರ್ತಿ ಹೇಳಿದರು.

 

 

 

ಅವರು ಚಳ್ಳಕೆರೆ ತಾಲೂಕಿನ ಪರಶುರಾಮಪುರ ಗ್ರಾಮದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜಕಾರಣಿಗಳು ಸಮಾಜ‌ಸೇವೆ ಮಾಡುತ್ತಿದ್ದೇವೆ ಎನ್ನುತ್ತಾರೆ.ಆದರೆ ಶಿಕ್ಷಕರು ತಮ್ಮ ಮಕ್ಕಳ‌ ಜೊತೆಗೆ ಬೇರೆ ಮಕ್ಕಳನ್ನು ಕೂಡ ಬದಲಾಯಿಸುತ್ತಾರೆ. ಪಾಠ ಪ್ರವಚನಗಳ ಜೊತೆಗೆ ಮಕ್ಕಳಿಗೆ ಮೌಲ್ಯಗಳನ್ನು‌ಕಲಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಪೋಷಕರು ಕೂಡ ಹೇಳಿ ಕೊಡಬೇಕು. ಯಾರಾದರೂ ಸುಳ್ಳು ಹೇಳುತ್ತಾರೆ ಅಂದರೆ ಅದಕ್ಕೆ ಪೋಷಕರ ಜೊತೆಯಲ್ಲಿ ಪರಿಸರವು ಕಾರಣವಾಗುತ್ತದೆ. ಶಿಕ್ಷಣದ ಮೌಲ್ಯಗಳನ್ನು ಹೇಳಿಕೊಡುವ ಕೆಲಸ ಆಗಲಿ, ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲವೂ‌ ಕೂಡ ಮಾಡಿದ್ದೇನೆ. ಇನ್ನು ಕೆಲವುಗಳನ್ನು ಮಾಡುವುದಕ್ಕೆ ಆಗಿರಲಕ್ಕಿಲ್ಲ, ‌ನನ್ನ ಹತ್ತು ವರ್ಷಗಳ ಅವಧಿಯಲ್ಲಿ‌ಸಾಕಷ್ಟು ಕೆಲಸಗಳು ನಡೆದಿವೆ. ರೈತರಿಗೆ ನೀರಾವರಿ‌ಗೆ ಸಂಬಂಧಿಸಿದಂತೆ ಚಕ್ ಡ್ಯಾಂಗಳು,ಹಾಗು ವೇದಾವತಿ‌ ನದಿಯಿಂದ ಚಳ್ಳಕೆರೆಗೆ ನೀರು ಹರಿಸುವ ಕೆಲಸವ‌ನ್ನು‌‌ಮಾಡಿದ್ದೇನೆ ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಅನಿತಾ ವೆಂಕಟೇಶ್, ವೇದಾವತಿ ಟ್ರಸ್ಟ್ ಅಧ್ಯಕ್ಷರಾದ ನಾಗೇಶ್, ಸುಗುಣ ನಾಗೇಶ್, ನಿವೃತ್ತ ಶಿಕ್ಷಕರಾದ ರಾಮಚಂದ್ರಪ್ಪ, ನಿವೃತ್ತ ಪ್ರಾಂಶುಪಾಲರಾದ ಯಾದವರೆಡ್ಡಿ, ಮುಖ್ಯ ಶಿಕ್ಷಕರಾದ ಶ್ರೀನಿವಾಸ್ ಮೂರ್ತಿ, ಮಂಜಣ್ಣ, ಮುಖಂಡರು, ಕಾರ್ಯಕರ್ತರು ಮತ್ತು ಶಾಲೆ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *