ಸುಳ್ಳು ಹಾಗೂ ಅನಾಮಧೇಯ ಪತ್ರಗಳಿಗೆ ಕಿವಿಗೊಡಬೇಡಿ

ಆರೋಗ್ಯ

ಅನಾಮಧೇಯ ಮತ್ತು ಸುಳ್ಳು ಪತ್ರದ ಬಗ್ಗೆ ಕಿವಿಗೊಡಬೇಡಿ

 

 

 

ಮುರುಘಾ ಮಠದ ಹಾಗೂ ಶರಣರ ವಿರುದ್ಧ 6 ಪುಟಗಳ ಅನಾಮಧೇಯ ಪತ್ರವೊಂದು
ಎಸ್.ಜೆ.ಎಂ. ನೌಕರರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದುಈ ಸುದ್ದಿಗೆ ಸ್ಪಷ್ಟೀಕರಣವನ್ನು ಆಡಳಿತದ ಸಿಬ್ಬಂದಿಗಳು ಒಟ್ಟಾಗಿ ನೀಡಿದ್ದಾರೆ.

ಮುರುಘಾ ಮಠದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಅವರುಗಳು,
ಇತ್ತೀಚೆಗೆ ಕೆಲವು ವ್ಯಕ್ತಿಗಳು ಎಸ್.ಜೆ.ಎಂ. ನೌಕರರು ಬರೆದಿದ್ದಾರೆ ಎನ್ನಲಾದ 6 ಪುಟುಗಳ ಪತ್ರವೊಂದನ್ನ ಸಾಮಾಜಿಮ ಜಾಲ ತಾಣಗಳಲ್ಲಿ ಹರಿ ಬಿಟ್ಟಿದ್ದಾರೆ. ಹೀಗೆ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಸರಿಯಷ್ಟೆ. ಆದರೆ ಈ ಪತ್ರವನ್ನು ನಾವುಗಳು ಯಾರೂ ಬರೆದಿರುವುದಿಲ್ಲ. ಅಂತಹ ಸಂದರ್ಭವೂ ನಮಗೆ ಒದಗಿ ಬಂದಿರುವುದಿಲ್ಲ. ಸಂಸ್ಥೆಯಲ್ಲಿ ದಾಸೋಹ ಮಾಡುತ್ತಿರುವ ನಾವುಗಳು ಶ್ರೀಮಠದ ಬಗ್ಗೆ ನಮ್ಮ ವಿದ್ಯಾಪೀಠದ ಬಗ್ಗೆ ಅಪಾರ ಭಕ್ತಿ ಮತ್ತು ಗೌರವವನ್ನು ಇಟ್ಟುಕೊಂಡಿದ್ದೇವೆ. ನಮ್ಮಂತಹ ಸಾವಿರಾರು ನೌಕರರು ಹಾಗೂ ಅವರನ್ನು ನಂಬಿದ ಕುಟುಂಬ ವರ್ಗದವರು ಶ್ರೀಮಠದ ಆಶ್ರಯದಲ್ಲಿ ಬದುಕನ್ನು ಕಟ್ಟಿಕೊಂಡಿದ್ದಾರೆ. ನಮಗೆ ಎಂತಹ ಸಂಕಷ್ಟ ಎದುರಾದರೂ ಶ್ರೀಮಠದ ಹಾಗೂ ವಿದ್ಯಾಪೀಠದ ಜೊತೆ ಇರುತ್ತೇವೆ. ಮಾತ್ರವಲ್ಲ, ಲಕ್ಷಾಂತರ ಭಕ್ತರು ಜೊತೆಗಿದ್ದಾರೆ ಎಂಬ ಅಂಶವನ್ನು ತಮಗೆ ತರಬಯಸುತ್ತೇವೆ.
ಮುರುಘಾ ಪರಂಪರೆಗೆ ಕಳಂಕ ತರುವ ಉದ್ದೇಶದಿಂದ ಈ ರೀತಿ ಮಾಡಿರುತ್ತಾರೆ. ಆಡಳಿತಾತ್ಮಕ ವಿಚಾರಗಳನ್ನು ಸಂಸ್ಥೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ಕಾರ್ಯಗತಗೊಳಿಸುತ್ತಾರೆ ಹಾಗು ಮುಕ್ತವಾಗಿ ನಮ್ಮೊಡನೆ ಚರ್ಚಿಸುತ್ತಾರೆ. ಶ್ರೀಮಠ ಮತ್ತು ಎಸ್.ಜೆ.ಎಂ. ವಿದ್ಯಾಪೀಠದ ವಿಚಾರದಲ್ಲಿ ಭಕ್ತಿಯಿಂದ ಗೌರವದಿಂದ ಅವರೊಡನೆ ಯಾವತ್ತೂ ನಾವುಗಳು ಇರುತ್ತೇವೆ. ಇಡೀ ನಮ್ಮ ಕುಟುಂಬ ಸಹಸ್ರಾರು ಭಕ್ತರು ವಿದ್ಯಾಪೀಠದ ಜತೆ ನಿಲ್ಲುತ್ತೇವೆ. ಹಾಗೂ ಇಂತಹ ಅನಾಮಧೇಯ ಪತ್ರಗಳಿಗೆ ನೌಕರರು ಹಾಗೂ ಭಕ್ತರು, ದಯವಿಟ್ಟು ಬೆಲೆ ಕೊಡಬಾರದು ಎಂದು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಸವೇಶ್ವರ ಆಸ್ಪತ್ರೆಯ ಅಧೀಕ್ಷಕರಾದ ಡಾ. ಪಾಲಾಕ್ಷಪ್ಪ, ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಆರ್. ಗೌರಮ್ಮ, ಎಸ್.ಜೆ.ಎಂ. ಫಾರ್ಮಸಿ ಕಾಲೇಜು ಪ್ರಾಂಶುಪಾಲರಾದ ಡಾ. ನಾಗರಾಜ್, ಎಸ್.ಜೆ.ಎಂ. ಕಾಲೇಜ್ ಆಫ್ ನರ್ಸಿಂಗ್ ಸೈನ್ಸಸ್‍ನ ಪ್ರಾಂಶುಪಾಲರಾದ ಡಾ. ಸವಿತಾರೆಡ್ಡಿ, ಜೆ.ಎಂ.ಐ.ಟಿ. ತಾಂತ್ರಿಕ ಕಾಲೇಜಿನ ಪ್ರಾಂಶುಪಾಲರಾದ ಡಾ. ಭರತ್, ಎಸ್.ಜೆ.ಎಂ. ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಸ್. ದಿನೇಶ್, ಎಸ್.ಜೆ ಎಂ ಇದ್ದರು.

Leave a Reply

Your email address will not be published. Required fields are marked *