ಮುರುಘಾ ಶರಣರ ಪೀಠ ತ್ಯಾಗಕ್ಕೆ ವೀರ ಶೈವ ಮಹಾ ಸಭಾದ ಸಭೆಯಲ್ಲಿ ಒತ್ತಾಯದ ನಿರ್ಣಯ

ರಾಜ್ಯ

ಚಿತ್ರದುರ್ಗದ ಜಿಲ್ಲಾ ವೀರಶೈವ ಮಹಾಸಭಾವು ಇಂದು ಪೀಠ ತ್ಯಾಗದ ವಿಷಯಕ್ಕೆ ಸಭೆಯನ್ನು ನಡೆಸಿ ಮುರುಘಾ ಶರಣರು ಕೂಡಲೇ ಪೀಠ ತ್ಯಾಗ ಮಾಡಬೇಕು, ಈಗಾಗಲೇ ಮಠದ ಮೇಲೆ ಕಟ್ಟ ಪರಿಣಾಮ ಬೀರಿದೆ.ಇನ್ನು ಮುರುಘಾ ಶರಣರನ್ನು ಮುಂದುವರೆಸಲು ಸಾಧ್ಯವಿಲ್ಲ ಕಾರಣ ಅವರೇ ಅರ್ಥ ಮಾಡಿಕೊಂಡು ಪೀಠ ತ್ಯಾಗ ಮಾಡಬೇಕು, ಮುರುಘಾ ಮಠವು ಐತಿಹಾಸಿಕ ಪರಂಪರೆಯನ್ನು ಹೊಂದಿದ್ದು, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಸಾಮಾಜಿಕವಾಗಿ ಹೆಸರಾಗಿದೆ.ಮಠದ ಇಂದಿನ ಪೀಠಾಧಿಕಾರಿಗಳು ಲೈಂಗಿಕ ಕಿರುಕುಳದ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿದ್ದಾರೆ‌.ಮುರುಘಾ ಮಠವು ಸುಮಾರು ಶಾಖಾ ಮಠಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿದೆ. ಈ ಎಲ್ಲಾ ಧಾರ್ಮಿಕ‌ ಆಚರಣೆಗಳು ಮತ್ತು ವಿದ್ಯಾ ಸಂಸ್ಥೆಯ ಎಲ್ಲಾ ವ್ಯವಹಾರಗಳನ್ನು ಸ್ವಾಮೀಜಿಗಳೇ ನೋಡಿಕೊಳ್ಳುತ್ತಿದ್ದರು. ಈಗ ನ್ಯಾಯಾಂಗ ಬಂಧನದಲ್ಲಿರುವುದರಿಂದ ಆಡಳಿತ ಸಂಪೂರ್ಣ ಹದಗೆಟ್ಟಿದೆ. ಶ್ರೀಗಳು ಮಠದ ಆಡಳಿತವನ್ನು ನೋಡಿಕೊಳ್ಳಲು‌ ಹೆಬ್ಬಾಳು ಮಠದ ಶ್ರೀಗಳಿಗೆ ಮೌಖಿಕವಾಗಿ‌ ಹೇಳಿದ್ದರೂ ಲಿಖಿತವಾಗಿ ನೀಡಿರುವುದಿಲ್ಲ, ಹೀಗಾಗಿ ಮಹಾ ಸಭಾದ ಸದಸ್ಯರು, ಸಮಾಜ ಬಾಂಧವರು ಜಿಲ್ಲಾ ಪದಾಧಿಕಾರಿಗಳು, ನೀವೇಕೆ ಸುಮ್ಮನಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಕಳೆದ. ೨೯ ರಂದು ಏಕಾಂತಯ್ಯ ಅವರು ಕರೆದ ಸಭೆಯಲ್ಲಿ ಎಲ್ಲರೂ‌ ನಿರ್ಣಯಿಸಿದಂತೆ ಪೀಠ ತ್ಯಾಗ ಮಾಡಬೇಕು ಎಂದು ತೀರ್ಮಾನ ತೆಗೆದುಕೊಳ್ಳಲಾಗಿತ್ತು.‌ಆದರಂತೆ ಶ್ರೀಗಳು ಪೀಠ ತ್ಯಾಗ ಮಾಡಬೇಕು ಎಂದು ಒತ್ತಾಯಿಸಲಾಗಿದೆ ಎಂದು ವೀರಶೈವ ಮಹಾಸಭೆಯಲ್ಲಿ ಒತ್ತಾಯಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಮಹಡಿ‌ ಶಿವಮೂರ್ತಿ ತಿಳಿಸಿದ್ದಾರೆ

 

 

 

Leave a Reply

Your email address will not be published. Required fields are marked *