ಸಿಎಂ ಸಿದ್ದರಾಮಯ್ಯ ಪಕ್ಕ ದಲಿತ ವಿರೋಧಿ ಅವರನ್ನು ನಂಬಬೇಡಿ: ಛಲವಾದಿ ನಾರಾಯಣಸ್ವಾಮಿ

ರಾಜ್ಯ

ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯನ್ನು ಅಪವಿತ್ರ ಮೈತ್ರಿ ಎಂದು ಕರೆಯುವ ಕಾಂಗ್ರೆಸ್ ನವರು ಯಾವುದು ಪವಿತ್ರ ಮತ್ತು ಅಪವಿತ್ರ ಎಂದು ಹೇಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
70 ರ‌ ದಶಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಆಗ ಎಮರ್ಜೆನ್ಸಿ ಜಾರಿಗೆ ತಂದು ಎಲ್ಲರ ಮೇಲೂ ದೌರ್ಜನ್ಯ ಮಾಡುತ್ತಾ, ಸಂವಿಧಾನವನ್ನು ತಿರುಚುವ ರೀತಿಯಲ್ಲಿ ಮಾಡಿದ್ದ ಇಂದಿರಾ ಗಾಂಧಿಯ ವಿರುದ್ದ ವಿರೋಧ ಪಕ್ಷಗಳು ಸಿಡಿದೆದ್ದು, ಎಲ್ಲಾ ಪಕ್ಷಗಳನ್ನು ಮೈತ್ರಿ ಮಾಡಿಕೊಂಡಾಗ ಹುಟ್ಟಿಕೊಂಡಿದ್ದು, ಜನತಾ ಪಕ್ಷ ಈಗ ಕಾಂಗ್ರೆಸ್ ಹೇಳಬೇಕು. ಯಾವುದು ಮೈತ್ರಿ ಮತ್ತು ಅಪವಿತ್ರ ಮೈತ್ರಿ ಎಂದು ಹೇಳಬೇಕು. 30 ರಿಂದ 40 ಸ್ಥಾನಗಳನ್ನು ಗೆಲ್ಲಲ್ಲ ಎಂದು ತಿಳಿದ ಮೇಲೆ ಮೋದಿಯವರಿಗೆ ಬಾಯಿಗೆ ಬಂದಂತೆ ಮಾತಾಡುತ್ತಾರೆ. ಗ್ಯಾರಂಟಿಗಳನ್ನು ನಾವು ವಿರೋಧ ಮಾಡುವುದಿಲ್ಲ. ಇವು ತಾತ್ಕಾಲಿಕ, ಬರುವ ಎಲ್ಲಾ ಹಣವನ್ನು ಗ್ಯಾರಂಟಿಗೆ ಕೊಡುತ್ತಾ ಅಭಿವೃದ್ದಿಯಾಗಿಲ್ಲ. ಸರ್ಕಾರ ಬರುವಾಗಲೇ ದರಿದ್ರವನ್ನು ಹೊತ್ತು ಬಂದಿದೆ. ಇಂತಹ ಸರ್ಕಾರ ಕೇಂದ್ರದ ಮೇಲೆ ಬೆರಳು ಮಾಡುತ್ತಿದೆ. ಸಿದ್ದರಾಮಯ್ಯ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು, ಯಾವುದೇ ವಿಷಯವನ್ನು ಪೂರ್ಣವಾಗಿ ಹೇಳದೆ, ಹಾರಿಕೆ ಉತ್ತರ ನೀಡಿ ಮುಂದೆ ಹೋಗುತ್ತಾರೆ. ಗ್ಯಾರಂಟಿಗಳಿಂದ ರಾಜ್ಯವನ್ನು ದಿವಾಳಿ‌ಕಡೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ದಲಿತ ವಿರೋಧಿ ಬಿಜೆಪಿ ಎಂದು ಪಟ್ಟಿ‌ಕಟ್ಟಿರುವ , ಕಾಂಗ್ರೆಸ್ ನಿಜವಾದ ದಲಿತ ವಿರೋಧಿಯಾಗಿದೆ. ಇದುವರೆಗೂ ಕಾಂಗ್ರೆಸ್ ಅವರು ದಲಿತರನ್ನು ಸಿಎಂ ಮಾಡಲಿಲ್ಲ, ಖರ್ಗೆ, ಪರಮೇಶ್ವರ್ ಹಾಗೂ ಮುನಿಯಪ್ಪ‌ಅವರ ಹೇಸರಿತ್ತು. ಆದರೆ ಯಾರನ್ನು ಸಿಎಂ ಮಾಡಲಿಲ್ಲ. ಸಿದ್ದರಾಮಯ್ಯ ಪಕ್ಕ ದಲಿತ ವಿರೋಧಿ, ದಲಿತರ ಸಮಾಧಿ‌ಮೇಲೆ ಚಕ್ರಾಧಿಪತ್ಯದ ಮೇಲೆ ಆಡಳಿತ ಮಾಡುವ ಸಿದ್ದರಾಮಯ್ಯ ಅವರ ಆಡಳಿತ ಎಷ್ಟು ದಿನ ಇರುತ್ತದೆ ಎಂದು‌ನೋಡೋಣ ಎಂದರು. ಅಂಬೇಡ್ಕರ್ ರನ್ನು ದೇವರೆಂದು‌ ನಂಬುವ ಜನ ಇನ್ನು ಕಾಂಗ್ರೆಸ್ ನಲ್ಲಿದ್ದಾರೆ. ಇದಕ್ಕೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ಎಸ್ಸಿಪಿ ಟಿಎಸ್ಪಿ ಯೋಜನೆಯಲ್ಲಿ 24 % ರಷ್ಟು ಹಣವನ್ನು ತೆಗೆದಿರಿಸಬೇಕು.‌ ಆದರೆ ಸಿದ್ದರಾಮಯ್ಯ, ಇದರಲ್ಲಿ 24 ಸಾವಿರದ ಕೋಟಿ ಹಣವನ್ನು ನುಂಗಿದ್ದಾರೆ. ಸಿದ್ದರಾಮಯ್ಯ ದಲಿತರ ವಂಚಕರು, ಮೋಸಗಾರರು ಇದಕ್ಕಾಗಿ ಅವರನ್ನು ನಂಬಬಾರದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಛಲವಾದಿ ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಮುರುಳಿ, ಮಾಧ್ಯಮ ವಕ್ತಾರ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಛಲವಾದಿ ತಿಪ್ಪೇಸ್ವಾಮಿ, ಇನ್ನಿತರರಿದ್ದರು.

 

 

 

Leave a Reply

Your email address will not be published. Required fields are marked *