ಮೌನ ಮುರಿದ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ: ಶರಣರ ರಾಜೀನಾಮೆ ಸನ್ನಿಹಿತ

ದೇಶ

ಚಿತ್ರದುರ್ಗದ ಪ್ರತಿಷ್ಠಿತ ಮುರುಘಾ ಮಠದ ಡಾ. ಶಿವಮೂರ್ತಿ‌ ಮುರುಘಾ ಶರಣರ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಇಷ್ಟು ದಿನಗಳು ಮೌನಕ್ಕೆ ಶರಣಾಗಿದ್ದ ಜಿಲ್ಲಾ ಲಿಂಗಾಯಿತ ವೀರಶೈವ ಮಹಾ ಸಭಾವೂ ಮೌನ ಮುರಿದು ಶರಣರ ರಾಜೀನಾಮೆಗೆ ಆಗ್ರಹಿಸಿ ಸಭೆಯಲ್ಲಿ‌ ನಿರ್ಣಯವನ್ನು ತೆಗೆದುಕೊಂಡಿದೆ. ಈ‌ ವಿಷಯವನ್ನು ಜಿಲ್ಲಾಧ್ಯಕ್ಷ ಮಹಡಿ‌ ಶಿವಮೂರ್ತಿ ಮತ್ತು ಪ್ರಧಾನ ಕಾರ್ಯದರ್ಶಿ ಮಹೇಶ್ ಹಂಚಿಕೊಂಡಿದ್ದಾರೆ.
ಮುರುಘಾ ಶರಣರ ಮೇಲೆ ಅತ್ಯಾಚಾರ ಹಾಗೂ ದೌರ್ಜನ್ಯದ ಆರೋಗಳು ಕೇಳಿ‌ ಬಂದಾಗ ಅವರು ಪೀಠಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಆದರೆ ಅವರು ಕೊಡದೆ ಹೋಗಿದ್ದಾರೆ. ಇದರಿಂದ ಮಠದ ಆಡಳಿತಕ್ಕೆ ಹಿನ್ನೆಡೆಯುಂಟಾಗಿದೆ. ಇನ್ನು ಯಾವುದೇ ಒಂದು ಸ್ವಾಮೀಜಿ ಅವರುಗಳನ್ನು ಆಯ್ಕೆ ಮಾಡುವಾಗ ಮಠದ ಪರಂಪರೆಯಂತೆ ಸಮಾಜದವರು ಕುಳಿತು ನಿರ್ಣಯ ತೆಗೆದುಕೊಂಡು ಅದನ್ನು ಅಧಿಕೃತ ಮಾಡುತ್ತೇವೆ.‌ಆದರೆ ಇದ‌ನ್ನು ಮಾಡಲಾಗಿಲ್ಲ.ನಾವು ಅವರ ರಾಜೀನಾಮೆಗೆ ಆಗ್ರಹಿಸಿ ನಿರ್ಣಯ ತೆಗೆದುಕೊಂಡಿದ್ದು, ರಾಷ್ಟ್ರ ಮತ್ತು ರಾಜ್ಯ ಸಭಾಗಳಿಗೂ ಕಳುಹಿಸಲಾಗಿದ್ದು, ಸರ್ಕಾರದ ಸಿಎಂ ಬಸವರಾಜ ಬೊಮ್ಮಾಯಿಯವರಿಗೂ ಮನವಿಯ‌ನ್ನು ನೀಡಿದ್ದೇವೆ ಅವರೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.‌ಕಾನೂನಾತ್ಮಕವಾಗಿ ಎಲ್ಲವೂ ನಡೆಯಲಿದೆ. ಇನ್ನೆರಡು ಮೂರು‌ ದಿನಗಳಲ್ಲಿ‌ ಪೀಠಾಧ್ಯಕ್ಷರ ರಾಜೀನಾಮೆ ಹಾಗೂ ಆಯ್ಕೆ ಬಗ್ಗೆ ಸಕಾರಾತ್ಮಕವಾದ ಫಲಿತಾಂಶ ಹೊರಬೀಳಲಿದೆ ಎಂದು ಶಿವಮೂರ್ತಿ ತಿಳಿಸಿದ್ದಾರೆ

 

 

 


 

Leave a Reply

Your email address will not be published. Required fields are marked *