ಸೆ. 5 ರವರೆಗೆ ಶರಣರನ್ನು ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

ದೇಶ

ಸೆ. 5 ರವರೆಗೆ ಪೋಲಿಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

ಚಿತ್ರದುರ್ಗ: ಕಳೆದ ರಾತ್ರಿ ಪೋಕ್ಸೋ ಕೇಸ್ ನಲ್ಲಿ ಬಂಧನವಾಗಿ, ಇಂದಿನವರೆಗೆ ನ್ಯಾಯಾಂಗ ಬಂಧನದಲ್ಲಿದ್ದಂತ ಮುರುಘಾ ಶ್ರೀಗಳು ಇಂದು ಕೋರ್ಟ್ ಗೆ ಹಾಜರಾಗದ ಕಾರಣ, ಗರಂ ಆಗಿದೆ. ಹೀಗಾಗಿ ಆರೋಪಿಗಳನ್ನು ಖುದ್ದು ಕೋರ್ಟ್ ಗೆ ಹಾಜರುಪಡಿಸುವಂತೆ ಜೈಲರ್ ಗೆ ಚಿತ್ರದುರ್ಗದ ಮ್ಯಾಜಿಸ್ಟ್ರೇಟ್ ಕೋರ್ಟ್ ಸೂಚಿಸಿತ್ತು.

ಈ ಬೆನ್ನಲ್ಲೇ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ ಕೋರ್ಟ್ ಮುರುಘಾ ಶ್ರೀಗಳಿಗೆ ಸೆಪ್ಟೆಂಬರ್ 5ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.

ಇಂದಿನವರೆಗೆ ಮುರುಘಾ ಶರಣರಿಗೆ ಕೋರ್ಟ್ ನ್ಯಾಯಾಂಗ ಬಂಧನವಿಧಿಸಲಾಗಿತ್ತು. ಆದ್ರೇ ಹೃದ್ರೋಗದಿಂದ ಆಸ್ಪತ್ರೆಗೆ ದಾಖಲಾಗಿರುವಂತ ಮುರುಘಾ ಶ್ರೀಗಳನ್ನು ಜೈಲು ಅಧಿಕಾರಿಗಳು ಕೋರ್ಟ್ ಗೆ ಹಾಜರುಪಡಿಸಿರಲಿಲ್ಲ. ಈ ಹಿನ್ನಲೆಯಲ್ಲಿ ನ್ಯಾಯಾಲಯ ವಿವರಣೆ ಕೇಳಿದ ಕಾರಣ, ಜೈಲು ಅಧೀಕ್ಷಕರು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಇಂದು ದೌಡಾಯಿಸಿದ್ದರು.

 

 

 

ನಿನ್ನೆ ರಾತ್ರಿ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಮಠದ ಡಾ.ಶಿವಮೂರ್ತಿ ಶಿವಶರಣರನ್ನು ಪೊಲೀಸರು ಬಂಧಿಸಿದ್ದರು. ಅವರಿಗೆ ಇಂದಿನವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆದ್ರೇ ಬೆಳಿಗ್ಗೆ ಮುರುಘಾ ಶ್ರೀಗಳಿಗೆ ಹೃದ್ರೋಗದಿಂದ ಆಸ್ಪತ್ರೆಗೆ ದಾಖಲಾದ ಕಾರಣ, ಇಂದು ಕೋರ್ಟ್ ಗೆ ಜೈಲು ಅಧಿಕಾರಿಗಳು ಹಾಜರುಪಡಿಸಲಾಗಿರಲಿಲ್ಲ

ಈ ಹಿನ್ನಲೆಯಲ್ಲಿ ಜೈಲು ಅಧಿಕಾರಿಗಳಿಂದ ಚಿತ್ರದುರ್ಗ ಮ್ಯಾಜಿಸ್ಟ್ರೇಟ್ ಕೋರ್ಟ್ ವಿವರಣೆ ಕೇಳಿತ್ತು. ಹೀಗಾಗಿ ನ್ಯಾಯಾಲಯಕ್ಕೆ ಜೈಲು ಅಧೀಕ್ಷಕರು ಮುರುಘಾ ಶ್ರೀಗಳ ಆರೋಗ್ಯ ಮಾಹಿತಿ ನೀಡೋದಕ್ಕೆ ಆಗಮಿಸಿದ್ದಾರೆ. ವೈದ್ಯರು ಅವರ ಹೃದ್ರೋಗ ಸಮಸ್ಯೆ ಬಗ್ಗೆ ನೀಡಿದಂತ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಲಿದ್ದರು.

ಆದ್ರೇ ಇದೀಗ ಚಿತ್ರದುರ್ಗದ ಮ್ಯಾಜಿಸ್ಟ್ರೇಟ್ ಕೋರ್ಟ್ ಬಂಧಿಸ್ಪಲ್ಪಟ್ಟು ಹೃದ್ರೋಗದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವಂತ ಮುರುಘಾ ಶ್ರೀಗಳನ್ನು ಕೋರ್ಟ್ ಗೆ ಖುದ್ದು ಹಾಜರುಪಡಿಸುವಂತೆ ಜೈಲರ್ ಗೆ ಸೂಚಿಸಿದೆ. ಈ ಹಿನ್ನಲೆಯಲ್ಲಿ ಚಿತ್ರದುರ್ಗ ಜಿಲ್ಲಾ ಕಾರಾಗೃಹದ ಜೈಲು ಅಧೀಕ್ಷಕರು ಮುರುಘಾ ಶರಣರನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ.

ಇದಕ್ಕೂ ಮುನ್ನ ಈ ಸಂಬಂಧದ ಅರ್ಜಿಯ ವಿಚಾರಣೆ ನಡೆಸಿದಂತ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ ಕೋರ್ಟ್ ಮುರುಘಾ ಶರಣರಿಗೆ ಸೆಪ್ಟೆಂಬರ್ 5ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.

Leave a Reply

Your email address will not be published. Required fields are marked *