ಭಾರತೀಯ ನೌಕಾಪಡೆಯ INS VIRAT ಗುಜರಿಗೆ..!

ದೇಶ

ನವದೆಹಲಿ:- ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ INS VIRAT ಕಳಚಿ ಗುಜರಿಗೆ ಹಾಕಲಾಗುತ್ತೆ ಎನ್ನಲಾಗಿದೆ. ಭಾರತೀಯ ನೌಕಾಪಡೆಯಲ್ಲಿ ಸುದೀರ್ಘವಾಗಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದೆ. 1986 ಕ್ಕೆ ಬ್ರಿಟನ್‌ನಿಂದ ಮಾರಾಟವಾದ ನೌಕಾಪಡೆ 1987 ರಿಂದ ಭಾರತೀಯ ನೌಕಾದಳದ ಸೇವೆ ಆರಂಭಿಸಿ,2017ರಲ್ಲಿ ನಿವೃತ್ತಿ ಹೊಂದಿತ್ತು.

 

 

 

ನಿವೃತ್ತಿ ಬಳಿಕ‌ ನೌಕೆಯನ್ನ ಸ್ಕ್ರ್ಯಾಪ್ ಟ್ರೇಡ್ ಕಾರ್ಪೋರೆಷನ್ ಲಿಮಿಟೆಡ್ ‌ಕಳೆದ‌ ತಿಂಗಳು‌ ಹರಾಜು ಪ್ರಕ್ರಿಯೆ ನಡೆಸಿ, ಶ್ರೀರಾಮ್ ಗ್ರೂಪ್‌ಗೆ 38 ಕೋಟಿಗೆ ಹರಾಜಿನಲ್ಲಿ ಖರೀದಿಸಿದೆ. ಭಾರತದಲ್ಲಿ ಗುಜರಿಗೆ ಸೇರುತ್ತಿರುವ ಎರಡನೇ ಯುದ್ಧ ನೌಕೆ ವಿರಾಟ್‌ ಆಗಿದೆ. ಇದಕ್ಕೂ ಮೊದಲು ಐಎನ್‌ಎ ವಿಕ್ರಾಂತ್‌ ಅನ್ನೂ ಕಳಚಿ ಗುಜರಿಗೆ ಹಾಕಲಾಗಿತ್ತು. ಬಳಿಕ ಪ್ರತಿಷ್ಠಿತ ಮೋಟಾರು ಕಂಪನಿ ಬೈಕ್ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು.

Leave a Reply

Your email address will not be published. Required fields are marked *