ಶಿಕ್ಷಕರನ್ನು ಗೌರವಿಸಿ‌ ಸನ್ಮಾನಿಸಿದ ಹಳೆ ವಿದ್ಯಾರ್ಥಿಗಳು

ಜಿಲ್ಲಾ ಸುದ್ದಿ

ಸಾಕಷ್ಟು ಸರ್ಕಾರಿ ಶಾಲೆಗಳಲ್ಲಿ ಓದಿರುವ ನಮ್ಮ ಮಕ್ಕಳು ಐಎಎಸ್, ಐಪಿಎಸ್ ಉನ್ನತ ಮಟ್ಟದ ಅಧಿಕಾರಿಗಳಾಗಿದ್ದಾರೂ ನಮ್ಮನ್ನು ಗುರುತಿಸಿ ಗೌರವಿಸಿರುವುದು ಸಂತಸ ತಂದಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕಿ ಹೆಚ್ ಡಿ. ಮಂಜುಳಾ ಅಭಿಪ್ರಾಯಪಟ್ಟರು. ಅವರು ಕೆಳಗೋಟೆ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ ಹಳೆ ವಿದ್ಯಾರ್ಥಿಗಳ ಗುರುವಂದನಾ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತಾಡಿದರು.

 

 

 

ಇದಕ್ಕೂ‌ ಮುನ್ನ ಕೆಳಗೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಸಿ.ಕೆ.ಪುರದಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಸ್ನೇಹ ಸಮ್ಮಿಲನದಲ್ಲಿ ಅಕ್ಷರದಾತರಿಗೆ ಗೌರವಿಸಿ ಸನ್ಮಾನಿಸಲಾಯಿತು. ತಿಪ್ಪಜ್ಜಿ ಸರ್ಕಲ್ ನಲ್ಲಿ ಇರುವ ವೆಂಕಟೇಶ್ವರ ದೇವಾಲಯದಿಂದ ಪಾಠ ಗುರುಗಳನ್ನು ಚಂಡೆ ಕಲಾ ವಾದ್ಯಗಳ ಮೇಳದೊಂದಿಗೆ ಹಾಗೂ ಭುವನೇಶ್ವರಿ ಭಾವಚಿತ್ರ ದೊಂದಿಗೆ ಮೆರವಣಿಗೆಯು ಬೇಡರ ಕಣ್ಣಪ್ಪ ದೇವಸ್ಥಾನ ಮೂಲಕ ಸಿ.ಕೆ.ಪುರ ಸರ್ಕಾರಿ ಶಾಲೆಗೆ ಬರಮಾಡಿಕೊಳ್ಳಲಾಯಿತು. ನಿವೃತ್ತ ಮುಖ್ಯ ಶಿಕ್ಷಕಿ ತಿಪ್ಪೇರುದ್ರಮ್ಮ ಮಾತಾಡಿ.ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳನ್ನು ಒಟ್ಟಿಗೆ ಸೇರಿಸಿ ಇಂತಹ ಕಾರ್ಯಕ್ರಮ ಮಾಡಿರುವುದು ಸಂತಸದ ವಿಷಯ ಎಂದರು.ಇಂದು ಪೋಷಕರು ಖಾಸಗಿ ಶಾಲೆಗಳ ಮೊರೆ ಹೋಗುತ್ತಾರೆ.ಆದರೆ ಸರ್ಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯಗಳು ಖಾಸಗಿ ಶಾಲೆಗಳಲ್ಲಿ ಇಲ್ಲ ಎಂದರು. ವೇದಿಕೆಯಲ್ಲಿ ನಿವೃತ್ತ ಶಿಕ್ಷಕರಾದ ಕೋದಂಡರಾಮಪ್ಪ,ನೂರ್ ಫರೀದಾ,ಭಾಗ್ಯಮ್ಮ,ವಿದ್ಯಾವತಿ,ಮೀನಾ, ಹಾಲಿ ಶಿಕ್ಷಕಕರಾದ ಗುರುಮೂರ್ತಿ, ಗೀತಾ, ಶಾಲೆ ಮುಖ್ಯ ಶಿಕ್ಷಕರಾದ ಧನಲಕ್ಷ್ಮಿ ,ರತ್ನಮ್ಮ, ಮಂಜುಳಾ, ವಿದ್ಯಾರ್ಥಿಗಳಾದ ಮಹೇಶ್ವರಪ್ಪ, ಮಾರುತಿ,ರಘು,ಸೋಮು,ಪ್ರಕಾಶ, ಸುರೇಶ್, ಶಿಲ್ಪ, ತುಳಸಿ,ಸುನೀತಾ ಮತ್ತು ತ್ರಿವೇಣಿ ಮುಂತಾದವರಿದ್ದರು.

Leave a Reply

Your email address will not be published. Required fields are marked *