ಆರು ವರ್ಷಗಳ ಬಳಿಕ ಗುರು ಶಿಷ್ಯರ ಭೇಟಿ

ರಾಜ್ಯ

ಆರು ವರ್ಷಗಳ ಬಳಿಕ ರಾಜಕೀಯ ಗುರು ಶಿಷ್ಯರು ಒಬ್ಬರಿಗೊಬ್ಬರ ಭೇಟಿ: ದೇವೇಗೌಡರ ಮನೆಗೆ ಭೇಟಿ ನೀಡಿದ ಸಿದ್ದರಾಮಯ್ಯ

 

 

 

 

ಬೆಂಗಳೂರಿನ ಪದ್ಮ ನಾಭ ನಗರದ ದೇವೇಗೌಡರ ಮನೆಗೆ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದರು, ದೇವೇ ಗೌಡರ ಆರೋಗ್ಯ ವಿಚಾರಿಸಲು ಆಗಮಿಸಿದ್ದರು. ಆರು ವರ್ಷಗಳ ನಂತರ ಭೇಟಿಯಾದ ಗುರು ಶಿಷ್ಯರು ದೇವೇಗೌಡರ ಮನೆಗೆ ಪ್ರವೇಶಿಸುತ್ತಿದ್ದಂತೆ ಸಿದ್ದರಾಮಯ್ಯ ಅವರು ಹೇಗಿದ್ದೀರಿ ಸರ್ ಎಂದು‌ ಮಾತಿಗೆ ಕುಳಿತರು, ಸಿದ್ದರಾಮಯ್ಯ ಜೊತೆ ಆರ್ ವಿ ದೇಶಪಾಂಡೆ, ಜಮೀರ್ ಆಹ್ಮದ್, ಅಜಯ್ ಸಿಂಗ್ ಕೂಡ ದೇವೇಗೌಡರನ್ನು ಭೇಟಿಯಾದರು. ಹಲವು ಭಾರಿ ಸಿದ್ದರಾಮಯ್ಯ ದೇವೇಗೌಡರ ಜೊತೆ ವೇದಿಕೆ ಹಂಚಿಕೊಂಡಿದ್ದರೂ ಕೂಡ ಆರು ವರ್ಷಗಳಿಂದ ಮನೆಗೆ ಭೇಟಿ‌ ನೀಡಿರಲಿಲ್ಲ, ಸಿಎಂ ಆದಾಗ ಹೆಚ್ ಡಿ ದೇವೇಗೌಡರ ಮನೆಗೆ ಬಂದಿದ್ದ ಸಿದ್ದರಾಮಯ್ಯ ಆರ ವರ್ಷಗಳಿಂದ ಅವರ ಮನೆಗೆ ಬಂದಿರಲಿಲ್ಲ, ಇಂದು ಅವರ ಆರೋಗ್ಯ ವಿಚಾರಿಸಲೆಂದೇ ಅವರ ಮನೆಗೆ ಭೇಟಿ‌ ನೀಡಿದ್ದಾರೆ.
ದೇವೇಗೌಡರ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ ಬಹಳ ಹೊತ್ತು ಅವರ ಜೊತೆ ಮಾತನಾಡಿದ್ದಾರೆ. ಇದೇ ವೇಳೆ ಜಮೀರ್ ಅಹ್ಮದ್ ದೇವೇಗೌಡರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು, ದೇವೇಗೌಡರ ಭೇಟಿ‌ ಬಳಿಕ‌ ಹೊರ ಬಂದು‌ ಮಾತನಾಡಿದ ಸಿದ್ದರಾಮಯ್ಯ, ಗುರು ಶಿಷ್ಯ ಅಂತ ಎಲ್ಲಾ ಏನಿಲ್ಲ‌ ರಾಜಕೀಯದಲ್ಲಿ ಬಹಳ ಅನುಭವವುಳ್ಳವರು ನಮ್ಮ ಪಕ್ಷ ಬೇರೆ ಅವರದ್ದು ಬೇರೆ ಎಲ್ಲದಕ್ಕಿಂತ ಮನುಷ್ಯತ್ವ ಮುಖ್ಯ ಅಲ್ವ ಎಂದರು. ರಾಜಕೀಯ ವಿಚಾರ ಏನೂ‌ ಮಾತನಾಡಿಲ್ಲ, ಅವರಿಗೆ ಬಹಳ‌ ಮಂಡಿ‌ ನೋವು ಎನ್ನುತ್ತಿದ್ದರು., ನಾನು ಸಿಎಂ ಆಗಿದ್ದಾಗ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಆ ವೇಳೆ ‌ಭೇಟಿಯಾಗಿದ್ದೆ, ಟಿವಿಯಲ್ಲಿ ಮಾತನಾಡ್ತಾ ಇರ್ತಿರಾ ನೋಡ್ತಾ ಇರ್ತಿನಿ ಎಂದರು, ರೇವಣ್ಣ ಬರುವ ವಿಚಾರ ಗೊತ್ತಿಲ್ಲ ಎಂದು‌ ಹೇಳಿದರು.

Leave a Reply

Your email address will not be published. Required fields are marked *