ಚಿತ್ರದುರ್ಗದಲ್ಲಿ ಪೆಪ್ಸ್ ಶೋ ರೂಂ ಆರಂಭ

ಜಿಲ್ಲಾ ಸುದ್ದಿ

 

ಪೆಪ್ಸ್ ಇಂಡಸ್ಟ್ರೀಸ್‌ನ 127 ನೇ ಗ್ರೇಟ್ ಸ್ಲೀಪ್ ಸ್ಟೋರ್ ಚಿತ್ರದುರ್ಗದಲ್ಲಿ ಪ್ರಾರಂಭ

 

 

 

ಚಿತ್ರದುರ್ಗ, ಸೆಪ್ಟೆಂಬರ್ 19, 2022: ಭಾರತದಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುವ ಸ್ಪ್ರಿಂಗ್ ಮ್ಯಾಟ್ರೆಸ್‌ಗಳಲ್ಲಿ ಒಂದರ ತಯಾರಕ ಸಂಸ್ಥೆಯಾದ, ಪೆಪ್ಸ್ ಇಂಡಸ್ಟ್ರೀಸ್ ಪ್ರೈ. ಲಿ., ಭಾರತದಲ್ಲಿ ಕಂಪನಿಯ ಮಾಲೀಕತ್ವದ, ಕಾರ್ಯಾಚರಣೆಯ 100ಕ್ಕೂ ಹೆಚ್ಚು ಮಳಿಗೆಗಳ ಹಾಜರಿಯೊಂದಿಗೆ ಕರ್ನಾಟಕದ ಚಿತ್ರದುರ್ಗದಲ್ಲಿ ಪೆಪ್ಸ್ ಗ್ರೇಟ್ ಸ್ಲೀಪ್ ಸ್ಟೋರ್ (ಜಿಎಸ್‌ಎಸ್) ಮತ್ತೊಂದು ಬ್ರ‍್ಯಾಂಡ್-ವಿಶೇಷ ಮಳಿಗೆ ತೆರೆದಿದೆ.

ಚಿತ್ರದುರ್ಗದಲ್ಲಿ ಈ ಮಳಿಗೆಯನ್ನು ತೆರೆಯುವುದರೊಂದಿಗೆ, ಕಂಪನಿಯು ಭಾರತೀಯ ಗ್ರಾಹಕರಿಗೆ ಉತ್ತಮ ನಿದ್ರೆ ಪಡೆಯಲು ಮತ್ತು ಉತ್ತಮ ಕನಸುಗಳನ್ನು ಕಾಣಲು ಸಹಾಯ ಮಾಡುವ ಗುರಿಗೆ ಹತ್ತಿರವಾಗಿದೆ. ಈ ಸ್ಟೋರ್‌ಗೆ ಕಾಲಿಡುವ ಪ್ರತಿಯೊಬ್ಬ ಗ್ರಾಹಕರಿಗೆ ಅನನ್ಯ ಖರೀದಿ ಅನುಭವ ಪೂರೈಸುವ ಗುರಿಯನ್ನು ಸ್ಟೋರ್ ಹೊಂದಿದೆ. ಗ್ರೇಟ್ ಸ್ಲೀಪ್ ಸ್ಟೋರ್ ಮಳಿಗೆಯನ್ನು ಪೆಪ್ಸ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜಿ.ಶಂಕರ್ ರಾಮ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಭೋವಿ ಗುರುಪೀಠ ಚಿತ್ರದುರ್ಗ – ಬಾಗಲಕೋಟೆಯ ಶ್ರೀ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರಲ್ಲದೇ, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರು ಹಾಗೂ ಚಿತ್ರದುರ್ಗ ಲೋಕ ಸಭಾ ಕ್ಷೇತ್ರದ ಸಂಸದರಾದ ಶ್ರೀ. ಎ ನಾರಾಯಣ ಸ್ವಾಮಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ. ಮಂಜುನಾಥ್, ಚಿತ್ರದುರ್ಗ ನಗರಸಭೆ ಅಧ್ಯಕ್ಷರಾದ ತಿಪ್ಪಮ್ಮ ವೆಂಕಟೇಶ್, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜಿ.ಟಿ. ಸುರೇಶ್ ಸಿದ್ದಾಪುರ ಮುಂತಾದ ಗಣ್ಯರು ಹಾಜರಿದ್ದರು.

Leave a Reply

Your email address will not be published. Required fields are marked *