100 ರೂಪಾಯಿಯಿಂದ 1.5 ಕೋಟಿ ರೂಪಾಯಿ ಗೆದ್ದ ಮಹಿಳೆ!

ದೇಶ

100 ರೂಪಾಯಿಯಿಂದ 1.5 ಕೋಟಿ ರೂಪಾಯಿ ಗೆದ್ದ ಮಹಿಳೆ!

ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಪ್ರಗತಿಯ ಹಾದಿ ಕಂಡುಕೊಂಡ ಆನ್‍ಲೈನ್ ಗೇಮಿಂಗ್ ಕಂಪನಿಗಳು
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಆನ್‍ಲೈನ್ ಗೇಮಿಂಗ್ ಉದ್ಯಮ ಅಭೂತಪೂರ್ವವಾದ ರೀತಿಯಲ್ಲಿ ಪ್ರಗತಿ ಸಾಧಿಸುತ್ತಿದೆ ಮತ್ತು ಈ ಪ್ರಗತಿ ಪ್ರಮಾಣ ಇಳಿಕೆಯಾಗುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಲುಮಿಕೈ ಮತ್ತು ರೆಡ್ಸೀರ್ ಸಂಸ್ಥೆಗಳು ಪ್ರಕಟಿಸಿರುವ ಭಾರತದಲ್ಲಿ ಗೇಮಿಂಗ್ ವರದಿ 2021 ರ ಪ್ರಕಾರ, ಪ್ರಸ್ತುತ ಭಾರತೀಯ ಗೇಮಿಂಗ್ ಮಾರುಕಟ್ಟೆ ವಹಿವಾಟು 2.2 ಬಿಲಿಯನ್ ಡಾಲರ್‍ನಷ್ಟಿದ್ದು, 2026 ನೇ ಹಣಕಾಸು ಸಾಲಿನ ವೇಳೆಗೆ 7 ಬಿಲಿಯನ್ ಡಾಲರ್ ತಲುಪಲಿದೆ. ಆದಾಗ್ಯೂ, ನಿಜವಾದ ಅವಕಾಶವು ಪ್ರಾದೇಶಿಕ ಗೇಮಿಂಗ್ ಸಮುದಾಯಗಳಲ್ಲಿದ್ದು, ಅಲ್ಲಿ ಅಪಾರ ಪ್ರಮಾಣದ ಪ್ರತಿಭೆ ಮತ್ತು ಕೌಶಲ್ಯವಿದೆ.

2020 ರಲ್ಲಿ ಪತಿಯಿಂದ ರಮ್ಮಿಯ ಪರಿಚಯ ಮಾಡಿಕೊಳ್ಳುತ್ತಾರೆ. ಆಕೆ ಆನ್‍ಲೈನ್‍ನಲ್ಲಿ ಜಂಗ್ಲಿ ರಮ್ಮಿಯನ್ನು ಉಚಿತವಾಗಿ ಆಟವಾಡಲು ಆರಂಭಿಸುತ್ತಾರೆ. ತದನಂತರ ನಗದು ಟೂರ್ನಮೆಂಟ್‍ಗಳಲ್ಲಿ ಕ್ರಮೇಣ ತೊಡಗುತ್ತಾರೆ ಮತ್ತು ಹಣ ಗಳಿಸುವ ವಿಶ್ವಾಸವನ್ನು ಗಳಿಸುತ್ತಾರೆ. ಸುನೀತಾ ಕೇವಲ 100 ರೂಪಾಯಿಗಳನ್ನು ಗೇಮಿಂಗ್ ವಾಲೆಟ್‍ನಲ್ಲಿ ಇಡುತ್ತಾರೆ ಮತ್ತು ಇದರಿಂದ ಆಕೆ ಬರೋಬ್ಬರಿ 1.5 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ. ತಮ್ಮ ಕೌಶಲ್ಯಗಳು ಮತ್ತು ವಿನೂತನವಾದ ಕಾರ್ಯತಂತ್ರಗಳನ್ನು ಬಳಸಿಕೊಂಡು ಆಕೆ ರಮ್ಮಿ ಪ್ರೀಮಿಯರ್ ಲೀಗ್ ಪ್ರವೇಶಿಸಿ, ಯಶಸ್ವಿಯಾಗಿ ಗ್ರ್ಯಾಂಡ್ ಫಿನಾಲೆ ತಲುಪುತ್ತಾರೆ. ಈ ವೇಳೆ ಆಕೆ ದೇಶಾದ್ಯಂತ ಆನ್‍ಲೈನ್‍ನಲ್ಲಿ ರಮ್ಮಿ ಆಡುವ ಸಾವಿರಾರು ಪ್ರತಿಸ್ಪರ್ಧಿಗಳನ್ನು ಮಣಿಸುತ್ತಾರೆ.

ಗೇಮ್‍ನಲ್ಲಿ ತನ್ನ ಪರಿಣತಿಯನ್ನು ಪ್ರದರ್ಶಿಸಿದ ಸುನೀತಾ ವಿಜಯಶಾಲಿಯಾಗುತ್ತಾರೆ ಮತ್ತು ಸಾರ್ವಕಾಲಿಕವಾಗಿ ಆಕೆ ಅತ್ಯಂತ ದೊಡ್ಡ ಮೊತ್ತದ ಬಹುಮಾನ ಗೆದ್ದು ಕರೋಡ್‍ಪತಿ ಎನಿಸಿಕೊಂಡಿದ್ದಾರೆ. ಬರೋಬ್ಬರಿ 1.5 ಕೋಟಿ ರೂಪಾಯಿ ಮೌಲ್ಯದ ಬಹುಮಾನ ಗೆದ್ದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುನೀತಾ ಮತ್ತು ಆಕೆಯ ಕುಟುಂಬಕ್ಕೆ ಈ ವಿಚಾರ ತಿಳಿದು ಕೆಲಕಾಲ ನಂಬಲು ಸಾಧ್ಯವಾಗಲೇ ಇಲ್ಲ. ನಂತರ ವಾಸ್ತವತೆಯನ್ನು ತಿಳಿದ ನಂತರ ಇಡೀ ಕುಟುಂಬ ಸಂತಸದಿಂದ ಕುಣಿದು ಕುಪ್ಪಳಿಸಿತು.

 

 

 

ಈ ಬಗ್ಗೆ ಮಾತನಾಡಿದ ಸುನೀತಾ, “ನನ್ನ ಕನಸು ನನಸಾಗಿದೆ. 1.5 ಕೋಟಿ ರೂಪಾಯಿಯನ್ನು ಗೆದ್ದಿರುವುದು ನನಗೆ, ನನ್ನ ಪತಿ ಮತ್ತು ನನ್ನ ಮಕ್ಕಳಿಗೆ ದೊಡ್ಡದಾಗಿದೆ. ಇದು ನಮ್ಮ ಜೀವನವನ್ನು ಸುಧಾರಣೆ ಮಾಡುವುದಲ್ಲದೇ, ಭವಿಷ್ಯದ ಉತ್ತಮ ಜೀವನ ರೂಪಿಸಿಕೊಳ್ಳಲು ನಮಗೆ ಅವಕಾಶ ನೀಡಿದೆ” ಎಂದರು.

ರಮ್ಮಿ, ಫ್ಯಾಂಟಸಿ ಕ್ರೀಡೆಗಳು, ಲೂಡೂ ಆ್ಯಪ್‍ಗಳು ಸೇರಿದಂತೆ ಅನೇಕ ಆನ್‍ಲೈನ್ ಸ್ಕಿಲ್ ಗೇಮಿಂಗ್ ಪ್ಲಾಟ್‍ಫಾರ್ಮ್‍ಗಳು ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಜನಪ್ರಿಯಗೊಳ್ಳುತ್ತಿವೆ. ಈ ಪ್ಲಾಟ್‍ಫಾರ್ಮ್‍ಗಳು ಸಿನೆಮಾ, ಒಟಿಟಿ ಮತ್ತು ಪಾಡ್ಯ ಕಾಸ್ಟ್ ಇತರೆ ಮಾಧ್ಯಮ ವರ್ಗಗಳನ್ನು ಹಿಂದಿಕ್ಕಿ ಮುಂದೆ ಸಾಗುತ್ತಿವೆ.

ಸುನೀತಾ ಅವರಂತಹ ಆಟಗಾರರ ದೊಡ್ಡ ಗೆಲುವುಗಳು ಮತ್ತು ಸಾಧನೆಗಳು ದೊಡ್ಡ ನಗರಗಳಲ್ಲಿ ಮಾತ್ರವಲ್ಲದೇ ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಕೌಶಲ್ಯ ಆಟಗಳು ಸಾಕಷ್ಟು ಜನಪ್ರಿಯತೆ ಗಳಿಸಿರುವುದಕ್ಕೆ ಸಾಕ್ಷಿಯಾಗಿವೆ. ಡಿಜಿಟಲ್ ಇಂಡಿಯಾ ಮತ್ತು ಇಂಟರ್ನೆಟ್ ಮೂಲಸೌರ್ಕಗಳ ಬಲವರ್ಧನೆಯಂತಹ ಉಪಕ್ರಮಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಗೇಮಿಂಗ್ ಉದ್ಯಮವು ತ್ವರತಿಗತಿಯಲ್ಲಿ ಬೆಳವಣಿಗೆಯನ್ನು ಕಂಡಿದೆ. ಈ ಮೂಲಕ ದೇಶದಲ್ಲಿ ಸಣ್ಣ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ಕಲಿಯಲು ಮತ್ತು ಬೆಳೆಯಲು ಅವಕಾಶಗಳು ಹೆಚ್ಚಿವೆ.

ಭಾರತದಾದ್ಯಂತ ಲಕ್ಷಾಂತರ ಆಟಗಾರರು ತಮ್ಮ ಕೌಶಲ್ಯಗಳನ್ನು ಬಳಸಿಕೊಳ್ಳಲು ಮತ್ತು ಮನರಂಜನೆಗಾಗಿ ಪ್ರತಿದಿನ ಆನ್‍ಲೈನ್ ಗೇಮಿಂಗ್ ಪ್ಲಾಟ್‍ಫಾರ್ಮ್‍ಗಳಲ್ಲಿ ನೋಂದಾಯಿಸಿಕೊಳ್ಳುತ್ತಿದ್ದಾರೆ. ಸುನೀತಾ ಅವರ ಸ್ಫೂರ್ತಿದಾಯಕ ಪ್ರದರ್ಶನ ಮತ್ತು ಗೆಲುವು ಆನ್‍ಲೈನ್ ಗೇಮಿಂಗ್ ಕಂಪನಿಗಳಿಗೆ ದೇಶದ ಕಡಿಮೆ -ಪರಿಶೋಧನೆಯ ಪ್ರದೇಶಗಳನ್ನು ಪ್ರವೇಶಿಸಲು ಹೊಸ ಮಾರ್ಗವನ್ನು ನೀಡಿದಂತಾಗಿದೆ. ಸರಿಯಾದ ವಿಧಾನದೊಂದಿಗೆ ಸಣ್ಣ ಪಟ್ಟಣಗಳಲ್ಲಿ ಆನ್‍ಲೈನ್ ಗೇಮಿಂಗ್ ಸರಳ ವಿನೋದ ಅಥವಾ ಮನರಂಜನೆಗಿಂತ ಹೆಚ್ಚಾಗಿದ್ದು, ಇದು ದೇಶದ ಡಿಜಿಟಲ್ ಸಾಕ್ಷರತೆಯ ಪ್ರಮಾಣವನ್ನು ಸುಧಾರಣೆ ಮಾಡುತ್ತದೆ.

ರಾಜಸ್ಥಾನದ ಸಣ್ಣ ಗ್ರಾಮದ ಸುನೀತಾ ಎಂಬ ಮಹಿಳೆ ತನ್ನ ಪತಿ ಸೀತಾರಾಂ ಶರ್ಮಾ ಅವರೊಂದಿಗೆ ಉತ್ತಮ ಅವಕಾಶವನ್ನು ಗಳಿಸಿಕೊಳ್ಳುವ ದಿಸೆಯಲ್ಲಿ ಎರಡು ದಶಕಗಳ ಹಿಂದೆ ಗುಜರಾತಿನ ಸೂರತ್‍ಗೆ ತೆರಳಿ ನೆಲೆಸುತ್ತಾರೆ. ಗೃಹಿಣಿಯಾಗಿದ್ದ ಇವರು ಐವರು ಮಕ್ಕಳ ತಾಯಿಯಾಗಿ ತನ್ನ ಪತಿಯ ಸಣ್ಣ ವ್ಯಾಪಾರಕ್ಕೆ ನೆರವಾಗುತ್ತಾ ಮಕ್ಕಳನ್ನು ಪಾಲನೆ ಮಾಡುತ್ತಿದ್ದಾರೆ

Leave a Reply

Your email address will not be published. Required fields are marked *