ಶ್ರೀಗಂಧ ಬೆಳೆ ಮತ್ತು ಬೆಳೆಗಾರರಿಗೆ ರಕ್ಷಣೆ ನೀಡಲು ಆಗ್ರಹ

ರಾಜ್ಯ

ಶ್ರೀಗಂಧ ಬೆಳೆಗೆ ಮತ್ತು ಬೆಳೆದಂತ ಬೆಳೆಗಾರರಿಗೆ ಸರ್ಕಾರ ರಕ್ಷಣೆಯನ್ನು ನೀಡುವಂತೆ ಸರ್ಕಾರವನ್ನು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಆಗ್ರಹಿಸಿದೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷರಾದ ಯು.ಶರಣಪ್ಪ, ಸರ್ಕಾರ ಶ್ರೀಗಂಧವನ್ನು ಬೆಳೆಯುವಂತೆ ಪ್ರೋತ್ಸಾಹವನ್ನು ನೀಡುತ್ತಿದೆ ಆದರೆ ಬೆಳೆಯನ್ನು ಬೆಳೆಯುವಾಗ ನೀಡಬೇಕಾದ ರಕ್ಷಣೆಯನ್ನು ನೀಡುತ್ತಿಲ್ಲ ಇದರಿಂದ ಬೆಳೆಗಾರರು ನೊಂದು ಹೋಗಿದ್ದಾರೆ, ಸಣ್ಣ ಸಸಿಯಿಂದ ಹಿಡಿದು ಒಂದು ಹಂತಕ್ಕೆ ಬರುವವರೆಗೂ ಕಾಯುತ್ತೇವೆ ಆದರೆ ಬೇರೆ ಯಾರೂ ಒಂದು ಅದನ್ನು ಕಟ್ಟ್ ಮಾಡಿಕೊಂಡು ಹೋಗುತ್ತಾರೆ ಇದರ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದರೆ ಅವರು ಪೋಲಿಸ್ ಇಲಾಖೆಗೆ ಹೋಗಿ ಎನ್ನುತ್ತಾರೆ ಪೋಲಿಸ್ ಇಲಾಖೆಗೆ ಹೋದರೆ ಇದು ನಮಗೆ ಬರುವುದಿಲ್ಲ ಎನ್ನುತ್ತಾರೆ ಈ ಇಬ್ಬರ ಮಧ್ಯದಿಂದ ಬೆಳೆಗಾರ ಸಂಕಷ್ಠಕ್ಕೆ ಈಡಾಗಿದ್ದಾನೆ ಎಂದರು.
ಸರ್ಕಾರ ಶ್ರೀಗಂಧವನ್ನು ಬೆಳೆಯಿರಿ ನಾವು ಪ್ರೋತ್ಸಹ ನೀಡುತ್ತೇವೆ ಎಂದು ಹೇಳಿದೆ ಆದರೆ ಬೆಳೆಯುವಾಗ ಆಗುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಕೊಂಡಿಲ್ಲ, ಕಷ್ಟಪಟ್ಟು ಬೆಳೆದ ನಮಗೆ ಕಳ್ಳರ ಕಾಟ ಹೆಚ್ಚಾಗಿದೆ ಕಳ್ಳರು ಸಹಾ ಯಾವುದೇ ಭಯ ಇಲ್ಲದೆ ಸಣ್ಣ-ದೂಡ್ಡ ಮರ ಎನ್ನದೆ ಎಲ್ಲವನ್ನು ಸಹಾ ಕಡಿಯುತ್ತಿದ್ದಾರೆ. ಇದರಿಂದ ನಮಗೆ ನಷ್ಠವಾಗುತ್ತಿದೆ, ಇತ್ತಲಾಗಿ ಮರವೂ ಇಲ್ಲದೆ ಹಣವೂ ಇಲ್ಲದ ರೀತಿಯಲ್ಲಿ ಆಗಿದೆ ಎಂದ ಅವರು, ಶ್ರೀಗಂದ ಮರವನ್ನು ಕಳ್ಳತನ ಮಾಡಿದವರಿಗೆ ಬೇರೆ ಬೇರೆ ಕಾನೂನುಗಳನ್ನು ಹಾಕುತ್ತಿದ್ದಾರೆ ಇದರ ಬದಲಿಗೆ 1963 ಕಲಂ 86ರ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಬೇಕಿದೆ ಇದರಿಂದ ಮಾತ್ರ ಕಳ್ಳರಿಗೆ ಶಿಕ್ಷೆಯನ್ನು ಕೂಡಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಶ್ರೀಗಂಧವನ್ನು ಬೆಳೆದಾಗ ಅದಕ್ಕೆ ರಕ್ಷಣೆ ಇಲ್ಲ, ವಿಮೆಯನ್ನು ಮಾಡಿಸಲು ಹೋದಾಗ ಅವರ ಬರುವುದಿಲ್ಲ ಇದರ ಮೇಲೆ ಸಾಲವು ಸಹಾ ಸಿಗುವುದಿಲ್ಲ ಇದರ ಬಗ್ಗೆ ನರ್ಬಾಡ್ ಅಧಿಕಾರಿಗಳೊಂದಿಗೆ ಮಾತನಾಡಲಾಗಿದೆ ಸಾಲವನ್ನು ನೀಡುವಂತೆ ಮನವಿ ಮಾಡಲಾಗಿದೆ ಅದಕ್ಕೆ ಅವರು ಸಮ್ಮತಿಸಿದ್ದಾರೆ ಎಂದು ತಿಳಿಸಿ, ಶ್ರೀಗಂಧ ಮರಗಳಿಗೆ ಸೇರಿದಂತೆ ಇತರೆ ಗಿಡಗಳಿಗೆ ಸರ್ಕಾರ ಭೂ ಸ್ವಾಧೀನ ಮಾಡಿಕೊಂಡಾಗ ನೀಡುವಂತ ಪರಿಹಾರದ ಮೊತ್ತ ಏರುಪೇರಾಗಿದೆ ಮೈಸೂರಿನಲ್ಲಿ ಉತ್ತಮವಾದ ಪರಿಹಾರವನ್ನು ನೀಡಿದರೆ ನಮ್ಮಲ್ಲಿ ಕನಿಷ್ಠ ಮೊತ್ತದ ಪರಿಹಾರವನ್ನು ಮಾತ್ರ ನೀಡಲಾಗಿದೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ರಕ್ಷಣಾಧಿಕಾರಿಗಳನ್ನು ಬೇಟಿ ಮಾಡಿ ಮನವಿ ಸಲ್ಲಿಸಲಾಗುತ್ತದೆ ಎಂದರು.
ಶ್ರೀಗಂಧ ಕಳ್ಳತನದ ದೂರು ಬಂದಾಗ ತಕ್ಷಣ ಆಯಾ ವ್ಯಾಪ್ತಿಯ ಪೋಲಿಸ್ ಠಾಣೆಯಲ್ಲಿ ವಿಳಂಭ ಇಲ್ಲದೆ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಮಾಡಬೇಕು, ಕಳ್ಳತನ ಪತ್ತೇಯಾದಾಗ ಡಿ.ಎನ್.ಎ ಪರೀಕ್ಷೆಯನ್ನು ಮಾಡಬೇಕು, ಶ್ರೀಗಂಧ ಬೆಳೆಗಾರರಿಗೆ ಬೆಳೆ ರಕ್ಷಣೆ, ಪ್ರಾಣ ರಕ್ಷಣೆಗಾಗಿ ಬಂದೂಕು ತರಬೇತಿಯನ್ನು ನೀಡಿ ಪರವಾನಿಗೆ ಪಡೆಯಲು ಕ್ರಮ ಜರುಗಿಸಬೇಕು, ಕಳ್ಳತನದ ಶ್ರೀಗಂಧವನ್ನು ಖರೀದಿ ಮಾಡಿದವರಿಗೂ ಸಹಾ ಆರೋಪಿಯನ್ನಾಗಿಸಿ, ಬಂಧಿಸಿ ವಿಚಾರಣೆಗೆ ಒಳಪಡಿಸಿ ಶಿಕ್ಷೆಯನ್ನು ಕೂಡಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಆಯಾ ಠಾಣಾ ವ್ಯಾಪ್ತಿಯಲ್ಲಿ ಶ್ರೀಗಂಧ ಬೆಳೆಗಾರರ ಸಂಘದ ಸಭೆಯನ್ನು ನಡೆಸಿ ಸಮಸ್ಯೆಯನ್ನು ಆಲಿಸಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಶ್ರೀಗಂಧವನ್ನು ಕಳ್ಳತನ ಮಾಡಿದವರಿಗೆ ಆಧುನಿಕ ತಂತ್ರಜ್ಞಾನ ಬಳಸಿ ತನಿಖೆಯನ್ನು ಮಾಡಿ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷಯಾಗುವಂತೆ ಮಾಡಬೇಕು, ರಾಜ್ಯ ಮಟ್ಟದಲ್ಲಿ ಶ್ರೀಗಂಧ ಕಳ್ಳತನ ಪ್ರಕರಣಗಳನ್ನು ಮೇಲುಸ್ತುವಾರಿ ಮಾಡಲು ವಿಶೇóವಾದ ತಂಡವನ್ನು ರಚನೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. \
ಗೋಷ್ಟಿಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಮಹಾಲಿಂಗಪ್ಪ, ದಿನೇಶ್ ಕೆ.ಸಿ. ದಯಾನಂದ, ಸತೀಶ್, ಚೌಡಯ್ಯ, ರಾಮಣ್ಣ, ಪ್ರಕಾಶ್, ಸೇರಿದಂತೆ ಇತರರು ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *