ಚಳ್ಳಕೆರೆಯಲ್ಲಿ ಇದೇ 24 ರಂದು ಎಸ್ಟಿ ಮು‌ನ್ನೆಡೆ ಸಮಾವೇಶ: ಮುರುಳಿ ಬಿಜೆಪಿ ಜಿಲ್ಲಾಧ್ಯಕ್ಷ

ರಾಜ್ಯ

ಚಿತ್ರದುರ್ಗದ ಚಳ್ಳಕೆರೆಯ ವಾಲ್ಮೀಕಿ ಸಮುದಾಯ ಭವನದಲ್ಲಿ‌ ಇದೇ 24 ರಂದು ಜಿಲ್ಲಾ ಪರಿಶಿಷ್ಟ ಪಂಗಡಗಳ ಮುನ್ನೆಡೆ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಮುರುಳಿ ಹೇಳಿದರು. ಅವರು ಚಿತ್ರದುರ್ಗದ ಬಿಜೆಪಿ‌ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ‌ ಮಾತಾಡಿದರು. ಈ‌ ಕಾರ್ಯಕ್ರಮವು ರಾಜ್ಯಾದಾದ್ಯಂತ ಎಲ್ಲಾ ಜಿಲ್ಲಾ ಸಮುದಾಯಗಳ ಸಮಾವೇಶಗಳು ನಡೆಯಲಿವೆ. ಅದರಂತೆ ಚಿತ್ರದುರ್ಗ ಜಿಲ್ಲಾ ಸಮಾವೇಶ ಚಳ್ಳಕೆರೆಯಲ್ಲಿ‌ ನಡೆಯಲಿದ್ದು, ಕಾರಣ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದಲ್ಲಿ ಎಸ್ಟಿ ಸಂಖ್ಯೆ ಹೆಚ್ಚಿರುವುದರಿಂದ ಚಳ್ಳಕೆರೆಯಲ್ಲಿ‌ ಮೊಳಕಾಲ್ಮೂರು ಕ್ಷೇತ್ರದ ಮಾಜಿ ಶಾಸಕ ತಿಪ್ಪೇಸ್ವಾಮಿ ಹಾಗೂ ಅನಿಲ್ ಕುಮಾರ್ ನೇತೃತ್ವದಲ್ಲಿ ಸಮಾವೇಶ ಮಾಡಲಾಗುತ್ತದೆ. ಮಾಜಿ ಸಿಎಂ ಬಸವರಾಜ‌ ಬೊಮ್ಮಾಯಿ, ಮಾಜಿ‌ ಸಚಿವ ಶ್ರೀರಾಮುಲು, ಮಾಜಿ ಶಾಸಕ ರಾಜು‌ಗೌಡ, ಎಸ್ಟಿ ಸೆಲ್ ನ ರಾಜ್ಯಾಧ್ಯಕ್ಷ ಬಂಗಾರು ಹನುಮಂತಪ್ಪ ಸಮಾವೇಶಕ್ಕೆ ಆಗಮಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಮಂಡಲದಿಂದ 200 ರಿಂದ 250 ಜನ ಆಯ್ದ ಕಾರ್ಯಕರ್ತರನ್ನು ಕರೆ ತಂದು ಸಮಾವೇಶ ಮಾಡಲಿದ್ದೇವೆ. ಒಟ್ಟಾರೆ 1250 ಜನ ಭಾಗವಹಿಸಲಿದ್ದಾರೆ.ಸಮಾವೇಶ ಗುಣಮಟ್ಟದಿಂದ ಕೂಡಿರಬೇಕೆಂಬ ಕಾರಣಕ್ಕೆ ಈ ಸಂಖ್ಯೆಯ ಕಾರ್ಯಕರ್ತರನ್ನು ಕರೆ ತರಲಾಗುತ್ತಿದೆ. ಜಿಲ್ಲೆಯಿಂದ ಸಂಸದರು‌ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ಹೊಳಲ್ಕೆರೆ ಶಾಸಕರಾದ ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ನವೀನ್, ಮಾಜಿ ಶಾಸಕ ತಿಪ್ಪಾರೆಡ್ಡಿ, ಲಿಂಗಮೂರ್ತಿ, ವೈಎ ನಾರಾಯಣಸ್ವಾಮಿ, ಚಿದಾನಂದ ಗೌಡರು ಭಾಗವಹಿಸಲಿದ್ದಾರೆ ಎಂದರು.
ಇದೇ ಸಮಯದಲ್ಲಿ ಮಾತಾಡಿದ ಮೊಳಕಾಲ್ಮೂರಿನ‌ ಮಾಜಿ‌ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ, ಸಮಾವೇಶದಲ್ಲಿ ಎಸ್ಸಿ‌ಎಸ್ಟಿಗೆ ಸರ್ಕಾರಗಳು ಏನೇನು‌ಮಾಡಿವೆ ಎಂದು‌ ತಿಳಿದು ಕೊಳ್ಳಬೇಕಿದೆ. ಹಿಂದೆ ನೆಹರು ಅವರು ಎಸ್ಸಿ‌ಎಸ್ಟಿಗಳಿಗೆ ಯಾವುದೇ ಮೀಸಲಾತಿ ಸೌಲಭ್ಯಗಳು‌ ನೀಡಬಾರದು ಎಂದು ಹೇಳಿದ್ದರು ಎಂದು‌ ಪ್ರಧಾನಿ‌ ಮೋದಿ ಅವರು ದಾಖಲೆಯನ್ನು ತೋರಿಸಿದ್ದಾರೆ ಇದರಿಂದ ನಾವೆಲ್ಲರೂ‌ ಜಾಗೃತರಾಗಬೇಕಿದೆ ಎಂದು ಹೇಳಿದರು.

 

 

 

Leave a Reply

Your email address will not be published. Required fields are marked *