ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಅನುಷ್ಠಾನಕ್ಕಾಗಿ ವಿಭಿನ್ನ ಪ್ರತಿಭಟ‌ನೆಗೆ ಮುಂದಾಗಿರುವ ರೈತ ಸಂಘ

ರಾಜ್ಯ

ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ 5300 ಕೋಟಿ ರೂಪಾಯಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಮತ್ತು ರಾಜ್ಯ ಸರ್ಕಾರ ಹಣವನ್ನು ಬಿಡುಗಡೆ ಮಾಡಿ ಕಾಮಗಾರಿಗೆ ವೇಗವಾಗಿ ಚಾಲನೆ ಕೊಡಬೇಕೆಂದು ಆರಂಭಿಸಿರುವ ಅನಿರ್ಧಿಷ್ಠಾವಧಿ ಧರಣಿಗೆ 18ನೇ ದಿನ ಕಳೆದಿವೆ. ಧರಣಿ ಬೆಂಬಲಿಸಿ ಇಂದು ಹಿರಿಯೂರಿನ ವಸಂತ ನಗರದ ಭಜನಾ ಮಂಡಲಿಯವರು ಭಜನೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಇದಕ್ಕೂ ಮುನ್ನ ಹರಿಯಾಣದ ಖನೌರಿ ಗಢಿಯಲ್ಲಿ ಬಿಜೆಪಿ ಸರ್ಕಾರ ರೈತರ ಮೇಲೆ ಕೈಗೊಂಡ ಕ್ರಮದಿಂದಾಗಿ ಶುಭಕರನ್ ಎಂಬ 23 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಚಳುವಳಿ ಆರಂಭದಿಂದ ಇವರಿಗೆ ಒಂದು ಹೃದಯಘಾತ ಮತ್ತು ಒಂದು ಪೊಲೀಸರ ಹತ್ಯೆಯಾಗಿದೆ. ಆ ಕಾರಣ ಅವರ ಆತ್ಮಗಳಿಗೆ ಶಾಂತಿ ಸಿಗಲಿ ಎಂದು ಮತ್ತು ಅವಿವೇಕಿ ಸರಕಾರಗಳ ವಿರುದ್ಧ ಚಳುವಳಿಗಳು ಮತ್ತಷ್ಟು ಗಟ್ಟಿಯಾಗಬೇಕೆಂದು ಹಿರಿಯೂರು ತಾಲೂಕಿನ ರೈತ ಸಂಘದ ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ‌ ಹಾಗೂ ಕಾರ್ಯದರ್ಶಿ ಸಿದ್ದರಾಮಣ್ಣ ನೇತೃತ್ವದಲ್ಲಿ ಹುತಾತ್ಮ ರೈತರಿಗೆ ಮೌನಚರಣೆ ಆಚರಿಸಿ ಭಜನಾ ಕಾರ್ಯಕ್ರಮ ಆರಂಭಿಸಲಾಯಿತು.

 

 

 

Leave a Reply

Your email address will not be published. Required fields are marked *