ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಡಿಕೆಶಿ

ಆರೋಗ್ಯ

ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು 22 ಸಾವಿರ ಕೋಟಿಯಷ್ಟು ಅಕ್ರಮ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ, ಬಿಜೆಪಿಯ ದುರಾಡಳಿತದ ಬಗ್ಗೆ ನಾವು ಪಾಪದ ಪುರಾಣ ಬಿಡುಗಡೆ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಅವರು ಹೊಸದುರ್ಗದಲ್ಲಿ ಪ್ರಜಾ ಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. 40% ಕಮಿಷನ್ ನಲ್ಲಿ ಸರ್ಕಾರ ಮುಳುಗಿದೆ. ವಿಧಾನಸೌಧ ಗೋಡೆಗಳು ಕಾಸು ಕಾಸು ಎನ್ನುತ್ತಿವೆ. ನಮ್ಮ ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ಸರ್ಕಾರ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸದೇ ಇರುವ ಯೋಜನೆಗಳ ಬಗ್ಗೆ ಕೇಳುತ್ತಾ ಬಂದಿದ್ದೇವೆ ಆದರೆ ಅವರ ಉತ್ತರ ಶೂನ್ಯವಾಗಿದೆ.
ನಾವು ಅಧಿಕಾರಕ್ಕೆ ಬಂದ ತಕ್ಷಣ ವಿವಿಧ ಬ್ಯಾಂಕುಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡುತ್ತೇವೆ ಎಂದು ಹೇಳಿದ್ದರು ಆದರೆ ಇದುವರೆಗೂ ಸಾಲ ಮನ್ನ ಇಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಮೋದಿ ಅವರು ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು. ಮಾಡಿದರಾ? ಇಲ್ಲ. ನಮ್ಮ ಕಾಲದಲ್ಲಿ ಸೋನಿಯಾ ಗಾಂಧಿ ಅವರು ಯುಪಿಎ ಅಧ್ಯಕ್ಷರಾಗಿ,ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಉದ್ಯೋಗ ಖಾತ್ರಿ ಯೋಜನೆಯಡಿ ಕನಿಷ್ಠ ವೇತನ ನಿಗದಿಗೊಳಿಸಿ ವರ್ಷದಲ್ಲಿ 100 ದಿನ ಕೆಲಸ ಸಿಗುವಂತೆ ಮಾಡಿದರು ಎಂದರು.
ನಾವು ಬಿಜೆಪಿಯವರು ಪಾಪದ ಪತ್ರ ಎಂಬುದನ್ನು ಬಿಡುಗಡೆ ಮಾಡಿದ್ದೇವೆ ಇದರಲ್ಲಿ ಎಂಬುದನ್ನು ತಿಳಿಸಲಾಗುತ್ತದೆ. ರಾಜ್ಯದಲ್ಲಿರುವ ಇದೊಂದು ಬಿಜೆಪಿ ಭ್ರಷ್ಟಾಚಾರದ ಸರ್ಕಾರವಾಗಿದೆ. ಸರ್ಕಾರದಲ್ಲಿ 40% ಕಮಿಷನ್ ತಾಂಡ ವಾಡುತ್ತಿದೆ. ಶಾಸಕರು ಬೊಮ್ಮಾಯಿ ಸರ್ಕಾರಕ್ಕೆ 23,000 ಕೋಟಿ ಅಫರ್ ಭದ್ರ ಯೋಜನೆಯಲ್ಲಿ ಹವ್ಯವ್ಯಹಾರ ನಡೆದಿದೆ ಎಂದು ಪತ್ರ ಬರೆದು ಆರೋಪಿಸಿದ್ದಾರೆ. ಇದರ ಬಗ್ಗೆ ನೀವು ಏನಾದರೂ ಕ್ರಮ ಕೈಗೊಂಡಿದ್ದೀರಾ ?. ಅಥವಾ ನಿಮ್ಮ ಪಕ್ಷದ ಶಾಸಕರಿಗೆ ನೋಟಿಸ್ ನೀಡಿದ್ದೀರಾ ?. ಅವರನ್ನು ಪಕ್ಷದಿಂದ ತೆಗೆದಿದ್ದಿರಾ ಎಂದು ಪ್ರಶ್ನೆ ಹಾಕಿದರು. ಪತ್ರದಲ್ಲಿ ಕಾಮಗಾರಿ ಮಾಡದೇ 23 ಸಾವಿರ ಕೋಟಿ ಅವ್ಯವಹಾರ ಆಗಿದೆ ಎಂದಿದ್ದಾರೆ ಇದಕ್ಕೆ ನಿಮ್ಮ ಉತ್ತರವೇನು ಎಂದರು.ಎಲ್ಲಿ ಹೋದರು ಲಂಚ, ಲಂಚ ಎಂಬ ಧ್ವನಿ ಕೇಳಿ ಬರುತ್ತಿದೆ. ಈ ಸರ್ಕಾರಕ್ಕೆ ದೊಡ್ಡ ಕಳಂಕ ಬಂದಿದೆ ಎಂದರು. ಕಮಿಷನ್ ವಿಚಾರದಲ್ಲಿ ಇದರ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡರು. ಸಚಿವ ಈಶ್ವರಪ್ಪ ತಲೆ ತಂಡವಾಗಿ ರಾಜೀನಾಮೆ ನೀಡಿದರು. ಕಾಂಗ್ರೆಸ್ ಸರ್ಕಾರದಲ್ಲಿ ಯಾರಾದರೂ ಭ್ರಷ್ಟಾಚಾರ ಮಾಡಿ ರಾಜೀನಾಮೆ ನೀಡಿದ್ದರ ಎಂದು ಪ್ರಶ್ನೆ ಹಾಕಿದರು ?. ಈ ಭ್ರಷ್ಟ ಸರ್ಕಾರ ಕಿತ್ತೊಗಿಯಬೇಕು ರೈತನನ್ನು ಬದುಕಿಸಬೇಕು ಮಹಿಳೆಯರನ್ನ ರಕ್ಷಿಸಬೇಕು ಎಂದು ಕರೆ ನೀಡಿದರು. ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಕೊಡುತ್ತೇವೆ ಎಂದಿದ್ದರು. ನಿಮ್ಮ ಖಾತೆಗೆ 15 ಲಕ್ಷ ರೂಪಾಯಿ ಬಂದಿದೆಯಾ? ಆದರೂ ನೀವು ಅವರಿಗೆ ಮತ ನೀಡಬೇಕಾ ಎಂದರು. ನಮ್ಮ ಕಾಂಗ್ರೆಸ್ ಸರ್ಕಾರದಲ್ಲಿ ನೀಡಿದ ಯೋಜನೆಗಳು ಜನರ ಬದುಕಿಗೆ ಪ್ರಯೋಜನ ವಾಗಿದ್ದವು. ಆದರೆ ಬಿಜೆಪಿಯವರು ಅಂತಹ ಯೋಜನೆಗಳನ್ನು ನೀಡಿದ್ದಾರಾ ಎಂದು ಜನರನ್ನ ಪ್ರಶ್ನಿಸಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ನಿಮ್ಮ ಮನೆ ಬೆಳಗಲು 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಪ್ರತಿ ಕುಟುಂಬದ ಗೃಹಿಣಿಗೆ ಮಾಸಿಕ 2,000 ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮ ವನ್ನು ಜಾರಿಗೆ ತರಲಾಗುತ್ತದೆ. ನಾವು ಈಗಾಗಲೇ ಗ್ಯಾರಂಟಿ ಚಕ್ಕಿಗೆ ಸಹಿ ಹಾಕುತ್ತೇವೆ ಮೇ 15ರ ನಂತರ ನಿಮ್ಮ ಕಾಂಗ್ರೆಸ್ ಸರ್ಕಾರ ವಿದ್ಯುತ್ ಹಾಗೂ ಎರಡು ಸಾವಿರರೂ ಖಚಿತ ಇವನ ಜಾರಿ ಮಾಡದಿದ್ರೆ ನಾವು ನಿಮ್ಮ ಹತ್ತಿರ ಮತ ಕೇಳಕ್ಕೆ ಬರುವುದಿಲ್ಲ ಎಂದು ಡಿಕೆ ಶಿವಕುಮಾರ್ ಭರವಸೆ ನೀಡಿದರು ನಾವು ಬಡವರಿಗೆ 7 ಕೆ.ಜಿ ಅಕ್ಕಿಯನ್ನು ಕೊಡುತ್ತಿದ್ದೆವು ಆದರೆ ಈಗಿನ ಬಿಜೆಪಿ ಸರ್ಕಾರ 2 ಕೆ.ಜಿ ಅಕ್ಕಿ ಕಡಿತಗೊಳಿಸಿ ಐದು ಕೆಜಿಗೆ ತಂದು ನಿಲ್ಲಿಸಿದ್ದಾರೆ. ನಾವು ಅಧಿಕಾರಕ್ಕೆ ಬಂದ ತಕ್ಷಣ 10 ಕೆಜಿ ಅಕ್ಕಿಯನ್ನು ನಾವು ಉಚಿತವಾಗಿ ನೀಡುತ್ತೇವೆ ಎಂದು ತಿಳಿಸಿದರು.ಬಿಜೆಪಿ ಸರ್ಕಾರಕ್ಕೆ ಮತದಾರರ ಮೇಲೆ ನಂಬಿಕೆ ಇದ್ದರೆ ತಾಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ ಮಾಡಬೇಕಿತ್ತು. ಅವರಿಗೆ ಸೋಲಿನ ಭಯ ಬಂದಿದೆ. ಈ ಸರ್ಕಾರದ ಅವಧಿ ಕೇವಲ 50 ದಿನ. ಅವರನ್ನು ಗಂಟು ಮೂಟೆ ಕಟ್ಟಿಸಿ ಮನೆಗೆ ಕಳುಹಿಸಿ ಈ ವೇದಿಕೆ ಮೇಲಿರುವವರನ್ನು ವಿಧಾನಸೌಧಕ್ಕೆ ಕಳುಹಿಸಿ ಎಂದು ಕೋರಿಕೊಂಡರು.

 

 

 

Leave a Reply

Your email address will not be published. Required fields are marked *