ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಬೇಡಿಕೆಗಳು ಯಾವು ಗೊತ್ತಾ?

ಜಿಲ್ಲಾ ಸುದ್ದಿ

ಸಾಹಿತ್ಯ ಪರಿಷತ್ತಿನ ಕೆಲಸ ಕೇವಲ ಸಾಹಿತ್ಯವನ್ನು ತಿಳಿಸುವಂತೆ ಆಗಿರಬಾರದು. ಇದರ ಜೊತೆಗೆ ಇತಿಹಾಸ ಮರುಕಳಿಸುವಂಥ ಕೆಲಸವಾಗಬೇಕು ಎಂದು ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಹೇಳಿದರು ಅವರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.

 

 

 

ಇತಿಹಾಸವನ್ನು ತಿರುಗಿ ನೋಡುವ ರೀತಿಯಲ್ಲಿ ಕೆಲಸವಾಗಬೇಕಿದೆ. ಜಿಲ್ಲೆಗೆ ಅಗತ್ಯವಾಗಿ ಬೇಕಿರುವಂತಹ ಅಭಿವೃದ್ಧಿ ಕೆಲಸಗಳಾಗಬೇಕು ಯಾವೆಲ್ಲಾ ಕೆಲಸಗಳು ಆಗಬೇಕು ಎಂದು ಮನವಿಯ ಮೂಲಕ ಸಲ್ಲಿಸಿದ್ದಾರೆ. ಅವುಗಳೆಂದರೆ ವಿಶ್ವವಿದ್ಯಾಲಯ ಆಗಬೇಕು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ವಿಚಾರದ ಸಂಶೋಧನಾ ಕೇಂದ್ರವಾಗಬೇಕು ಎಲ್ಲಾ ಕೆರೆಗಳಿಗೂ ನೀರು ತುಂಬಿಸುವ ಕೆಲಸವಾಗಬೇಕು. ಚಿತ್ರದುರ್ಗ ಜಿಲ್ಲೆಯು ಅತ್ಯಂತ ಹಿಂದುಳಿದಿದ್ದು ಹೈದರಾಬಾದ್ ಕರ್ನಾಟಕದ ಕಲ್ಯಾಣ ರಾಜ್ಯದ 371 ಜೆ ಅಡಿಯಲ್ಲಿ ಜಿಲ್ಲೆಯನ್ನು ಸೇರಿಸಬೇಕು ಎಂಬ ಬೇಡಿಕೆ ನೀಡಿದ್ದಾರೆ. ಈಗಾಗಲೇ 13 ರಿಂದ 18 ರವರೆಗೆ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗಿದೆ. ನಾನು ರಾಜಕಾರಣ ಮಾತನಾಡಲು ಹೋಗುವುದಿಲ್ಲ 13 ರಿಂದ 18ರ ಅವಧಿಯಲ್ಲಿ ಚಳ್ಳಕೆರೆಯ ಶಾಸಕನಾಗಿ ನಾನು ಹೇಳುವುದೇನೆಂದರೆ 13 ರಿಂದ 15ನೇ ಸಾಲಿನಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ 10ನೇ ಸಾಲಿನ ಅವಧಿಗೂ ಮುನ್ನ ಯಾವುದೇ ಕೆರೆಯನ್ನು ತುಂಬಿಸುವ ಯೋಜನೆ ಇರಲಿಲ್ಲ. ಹೊಳಲ್ಕೆರೆಯಲ್ಲಿಯೂ ಕೂಡ 20 ಕೆರೆಗಳು ಬಿಟ್ಟು ಹೋಗಿದ್ದವು. ಚಳ್ಳಕೆರೆಯಲ್ಲಿ ಒಂಬತ್ತು ಕೆರೆಯನ್ನು ಮಾತ್ರ ಸೇರಿಸಿದ್ದಾರೆ ಎಂದು ಹೇಳಿದರು. ಜಿಲ್ಲೆಯ ಎಲ್ಲಾ ರೈತರ ಜಮೀನುಗಳಲ್ಲಿ ನೀರಿನ ಅಂತರ್ಜಲ ಮಟ್ಟ ಹೆಚ್ಚಿದೆ ಚಳ್ಳಕೆರೆಯ ಪರಶುರಾಂಪುರ ಭಾಗದಲ್ಲಿ ಹೆಚ್ಚಾಗದಿದ್ದರೂ ರೈತರು ಅಡಿಕೆಯನ್ನು ಬೆಳೆಯಲು ಪ್ರಾರಂಭಿಸಿದ್ದಾರೆ. ರೈತ ಸಂಘವು ಮಾಡಿರುವಂತಹ ನಿಯಮಗಳನ್ನು ಜನಪ್ರತಿನಿಧಿಗಳಾದ ನಾವು ಪಕ್ಷ ಬೇಧ ಮರೆತು ಮಾಡಲು ಮುಂದಾಗಬೇಕು. ಮೊಳಕಾಲ್ಮೂರು ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಕೂಡ ಬರವಿತ್ತು. ಟ್ಯಾಂಕರ್ ಗಳಲ್ಲಿ ನೀರು ಕೊಡುವ ಮತ್ತು ಗೋಶಾಲೆಗಳನ್ನು ಆರಂಭಿಸುವ ಸಂದರ್ಭವಿತ್ತು. ಇಂತಹ ಸಂದರ್ಭದಲ್ಲಿ ಮಾಜಿ ಸಚಿವ ಆಂಜನೇಯ ಅವರನ್ನು ನೆನಪಿಸಿಕೊಳ್ಳಬೇಕು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿದ್ದ ಸರ್ಕಾರ ಪಾವಗಡ ಮೊಳಕಾಲ್ಮೂರು ಮತ್ತು ಕೂಡ್ಲಿಗಿ ಚಳ್ಳಕೆರೆಗೆ ಕುಡಿಯುವ ನೀರಿಗೆ ಯೋಜನೆಯನ್ನು ಮಾಡಬೇಕಾಗಿತ್ತು. ತುಂಗಭದ್ರ ಹಿನ್ನೀರಿನಿಂದ ನೀರು ತರುವ ಯೋಜನೆಯ ಸಿದ್ಧವಾಗಿತ್ತು. ಆದರೆ ಕೋರ್ಟ್ ನಲ್ಲಿ ತಂದಿದ್ದರಿಂದ ಕೆಲಸವಾಗಲಿಲ್ಲ . ಈ ಯೋಜನೆಗೆ 2, ಸಾವಿರದ 280 ಕೋಟಿ ಅನುದಾನ ಬೇಕಿತ್ತು. ಆದರೆ ಅನುದಾನದ ಕೊರತೆ ಇತ್ತು, ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಹೋಗಿ ಕೇಳಿದಾಗ, ಈ ಸಮಯದಲ್ಲಿ ಅಲ್ಲಿಯೇ ಇದ್ದ ಆಗಿನ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದ ಆಂಜನೇಯ ಅವರು ಕುಡಿಯುವ ನೀರಿನ ಯೋಜನೆಗೆ ಎಸ್ಇಪಿ ಟಿಎಸ್‌ಪಿ ಯೋಜನೆ ಅಡಿಯಲ್ಲಿ ಶೇಕಡ 50ರಷ್ಟು ಹಣವನ್ನು ನೀಡಿ ಯೋಜನೆಯನ್ನು ಮಂಜೂರು ಮಾಡಿದರು. ಆದರೆ ಯೋಜನೆ ಮಂಜೂರಾಗಿ ಬೇರೆ ಬೇರೆ ಅಡೆತಡೆಗಳು ಬಂದಿದೆ ಎಂದರು.

Leave a Reply

Your email address will not be published. Required fields are marked *