ತ್ಯಾಜ್ಯ ವಿಂಗಡನೆ ಬಗ್ಗೆ ಜನರಿಗೆ ಅರಿವು ಮಾಡಿಸುವಲ್ಲಿ ಪಿಡಿಒಗಳ ಪಾತ್ರ ಬಹುಮುಖ್ಯ: ಜಿ. ಪಂ ಅಧ್ಯಕ್ಷೆ ಶಶಿಕಲಾ ಸುರೇಶ್‍ಬಾಬು

ಜಿಲ್ಲಾ ಸುದ್ದಿ

ತ್ಯಾಜ್ಯ ವಿಂಗಡನೆ ಬಗ್ಗೆ ಜನರಿಗೆ ಅರಿವು ಮಾಡಿಸುವಲ್ಲಿ ಪಿಡಿಒಗಳ ಪಾತ್ರ ಬಹುಮುಖ್ಯ: ಜಿ. ಪಂ ಅಧ್ಯಕ್ಷೆ ಶಶಿಕಲಾ ಸುರೇಶ್‍ಬಾಬು

ಚಿತ್ರದುರ್ಗ, ಜನವರಿ 30(ಹಿ.ಸ) : ಗ್ರಾಮೀಣ ಜನರಿಗೆ ತಾಜ್ಯ ವಿಂಗಡನೆ ಹಾಗೂ ವಿಲೆ ಮಾಡುವ ಕುರಿತು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಪಾತ್ರ ಬಹುಮುಖ್ಯವಾದದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸುರೇಶ್‍ಬಾಬು ಹೇಳಿದರು.

 

 

 

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಚ ಭಾರತ್ ಮಿಷನ್(ಗ್ರಾಮಿಣ) ಯೋಜನೆಯ “ನಮ್ಮ ನಡಿಗೆ-ತ್ಯಾಜ್ಯ ಮುಕ್ತ ಕಡೆಗೆ” ಮೂಲದಲ್ಲಿಯೇ ತ್ಯಾಜ್ಯ ವಿಂಗಡನೆಯ ಜಾಗೃತಿ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 Chitradurga namma made tyajya mukta kade
ನಮ್ಮ ಮನೆಗಳನ್ನು ಯಾವ ರೀತಿ ಸ್ವಚ್ಚವಾಗಿ ಇಟ್ಟುಕೊಳುತ್ತಿವೋ ಅದೇ ರೀತಿ ನಮ್ಮ ಗ್ರಾಮ, ಶಾಲೆ ಆವರಣ, ದೇವಸ್ಥಾನ, ರಸ್ತೆಗಳನ್ನು ಸ್ವಚ್ಚವಾಗಿ ಇಡುವುದು ನಮ್ಮೆಲ್ಲರ ಜವಾಬ್ದಾರಿ ಈ ನಿಟ್ಟಿನಲ್ಲಿ ಎಲ್ಲರಿಗೂ ಅರಿವನ್ನು ಮಾಡಿಸಬೇಕು. ಜನರು ಎಲ್ಲ ಕಸವನ್ನು ಎಲ್ಲೆಂದರಲ್ಲಿ ಹಾಕುತ್ತಾರೆ, ಆದ್ದರಿಂದ ಪಿಡಿಒಗಳು ಹಸಿ ಕಸ, ಒಣಕಸ ಮತ್ತು ಪ್ಲಾಸ್ಟಿಕ್ ಬೇರ್ಪಡಿಸುವಂತೆ ಹಾಗೂ ಸ್ವಚ್ಚತೆ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು.
ಜಿಲ್ಲಾ ಪಂಚಾಯಿತಿಯಿಂದ ಈಗಾಗಲೇ ತ್ಯಾಜ್ಯ ವಿಲೇವಾರಿ ಆಟೋಗಳು ಪ್ರತಿಯೊಂದು ಗ್ರಾಮ ಪಂಚಾಯಿತಿ, ಹಳ್ಳಿಗಳಿಗೆ ಹೋಗಿ ಪ್ರತಿಯೊಂದು ಮನೆ ಮನೆಗೆ ತೆರಲಿ ಸ್ವಚ್ಚತೆ, ಹಾಗೂ ತ್ಯಾಜ್ಯ ವಿಂಗಡನೆ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸುತ್ತಿವೆ.
ತ್ಯಾಜ್ಯ ವಿಂಗಡನೆ ಮತ್ತು ಕಸ ವಿಲೇವಾರಿ ಬಗ್ಗೆ ಪೈಪ್ ಕಂಪೋಸ್ಟ್, ಎರೆಹುಳು ಘಟಕ, ನಡಾಫ್ ಮೆತೆಡ್, ನೈಲಾನ್ ಮೆಷ್ ಮೆತೆಡ್ (ತರೆಗೆಲೆ ಗೊಬ್ಬರ), ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಮಾಡಿದ ಮಾದರಿಯನ್ನು ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಮಾಡಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿ.
ತಿಪ್ಪೆಗಳು ಊರಿನ ಅಥವಾ ಮನೆಯ ಹತ್ತಿರ ಇರುವುದರಿಂದ ಅನೇಕ ರೋಗ ರುಜನಗಳು ಹರಡುತ್ತವೆ ಎಂದು ತಿಳಿಸಿ ಪ್ರತಿಯೊಂದು ಹಳ್ಳಿಗಳಲ್ಲಿ ಇರುವ ತಿಪ್ಪೆಗಳನ್ನು ಊರಿನಿಂದ ಹೊರಗೆ ಹಾಕುವಂತೆ ಪಿಡಿಒಗಳು ಜನರಿಗೆ ಮನವರಿಕೆ ಮಾಡಿ ಕ್ರಮ ಕೈಗೊಳ್ಳಬೆಕು ಎಂದು ತಿಳಿಸಿದರು.
ಹಳ್ಳಿಗಳಲ್ಲಿ ಬಹುತೇಕ ಮಹಿಳೆಯರು ಮತ್ತು ವಯೊವೃದ್ದರು ಬಯಲು ಬಹಿರ್ದೆಸೆಗೆ ಹೊಗುತ್ತಾರೆ. ಇದರಿಂದ ಅನೇಕ ಕಾಯಿಲೆಗಳು ಹರಡುತ್ತವೆ. ಅದ್ದರಿಂದ ಜನರು ಶೌಚಾಲಗಳನ್ನು ಕಡ್ಡಾಯವಾಗಿ ಉಪಯೋಗಿಸುವಂತೆ ಮತ್ತು ಈ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಸಂಯುಕ್ತವಾಣಿ

Leave a Reply

Your email address will not be published. Required fields are marked *