Chitradurga swamiji taken in front of minister

ಸಮಾಜ ಕಲ್ಯಾಣ ಸಚಿವರ ಎದುರಲ್ಲೆ ವಿಷ ಕುಡಿದ ಸ್ವಾಮೀಜಿ

ಜಿಲ್ಲಾ ಸುದ್ದಿ

ಚಿತ್ರದುರ್ಗ:ಇತ್ತಿಚ್ಚಿಗಷ್ಠೆ ಯೋಗವನ ಬೆಟ್ಟಗಳ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಲಿಂಕೈಕ್ಯರಾಗಿದ್ರು. ಶ್ರೀಗಳ ನಿಧನದ ಬಳಿಕ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಾರಿ ಪೈಪೋಟಿ ನಡೆದಿತ್ತು. ಪೈಪೋಟಿ ಮಧ್ಯೆ  ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು  ಸ್ವಾಮೀಜಿಯೊಬ್ಬರು ಇಂದು  ಸಮಾಜ ಕಲ್ಯಾಣ ಮಂತ್ರಿಗಳಿಗೆ ಮನವಿ ನೀಡಲು ಬಂದಿದ್ರು. ಸಚಿವರಿಗೆ ಮನವಿ ಪತ್ರ ನೀಡ್ತಿದ್ದಂತೆ ಏಕಾಏಕಿ ಸಚಿವ ಎದುರಲ್ಲೇ ವಿಷ ಸೇವಿಸಿದ್ದು, ಸ್ವಾಮೀಜಿಗಳ ಸ್ಥಿತಿ ಗಂಭೀರವಾಗಿದೆ.

Chitradurga swamiji taken in front of  minister
ಹೀಗೆ ಸಮಾಜ ಕಲ್ಯಾಣ ಮಂತ್ರಿಗೆ ಮನವಿ ನೀಡ್ತಿರೋ ಸ್ವಾಮೀಜಿ… ನೋಡು ನೋಡುತ್ತಿದ್ದಂತೆ ಸಚಿವರ ಎದುರಲ್ಲೇ ವಿಷ ಸೇವಿಸಿದ ಶ್ರೀಗಳು ಈ ಹೈಡ್ರಾಮ ನಡೆದಿದ್ದು. ಚಿತ್ರದುರ್ಗದ ಬಿಜೆಪಿ ಕಚೇರಿ ಮುಂಭಾಗದಲ್ಲಿ. ಹೌದು ಚಿತ್ರದುರ್ಗದ ಬಿಜೆಪಿ ಕಚೇರಿಯಲ್ಲಿ ಇಂದು ಪಕ್ಷದ ಕಾರ್ಯಕಾರಣಿ ಸಭೆ ನಡೆಯುತ್ತಿತ್ತು. ಸಭೆ ಮುಗಿಯುತ್ತಿದ್ದಂತೆ ಸಚಿವ ಬಿ.ಶ್ರೀರಾಮುಲು ಸಾರ್ವಜನಿಕರ ಅಹವಾಲು ಸ್ವೀಕರಿಸಲು ಆಗಮಿಸಿದ್ರು. ಇದೇ ಸಂದರ್ಭದಲ್ಲಿ ಮನವಿ ಪತ್ರ ನೀಡಲು ಚಿತ್ರದುರ್ಗ ತಿಪ್ಪೇರುದ್ರಸ್ವಾಮಿ ಯೋಬ್ಬರ ಆಗಮಿಸಿದ್ರು. ಸಚಿವರಿಗೆ ಮನವಿ ಪತ್ರ ನೀಡುತ್ತಿದ್ದಂತೆ ಜೇಬಿನಲ್ಲಿ ಇದ್ದ ವಿಷದ ಬಾಟಲಿ ತೆಗೆದು ಸಚಿವರ ಎದುರಲ್ಲೇ ವಿಷ ಸೇವಿಸಿದ್ರು. ಇನ್ನೂ ವಿಷ ಕುಡಿಯುತ್ತಿದ್ದಂತೆ ಸ್ಥಳದಲ್ಲೇ ಇದ್ದ ಶ್ರೀರಾಮುಲು ಬಿಡಿಸಲು ಮುಂದಾದ್ರು. ಘಟನಾ  ಸ್ಥಳಕ್ಕೆ ಆಗಮಿಸಿದ ಬಡಾವಣೆ ಠಾಣೆ ಪೊಲೀಸರು ಸ್ವಾಮೀಜಿಗಳನ್ನ ಕೂಡಲೇ ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಿದ್ರು. ಇನ್ನೂ ಸ್ವಾಮೀಜಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆ ವೈಧ್ಯ ರಂಗೇಗೌಡ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ರವಾನೆ ಮಾಡಿದ್ರು.ಇನ್ನೂ ಈ ಹೈಡ್ರಾಮದ ಬಳಿಕ ತಿಪ್ಪೇರುದ್ರಸ್ವಾಮೀಜಿ ಬಳಿ ಇದ್ದ ಡೆತ್ ನೋಟ್ ಪತ್ತೆಯಾಗಿದ್ದು,

 

 

 

Chitradurga swamiji taken in front of  minister

ಯೋಗವನ ಬೆಟ್ಟದ ಸಿದ್ದಲಿಂಗ ಸ್ವಾಮೀಜಿ ಕಳೆದ ಜನವರಿಯಲ್ಲಿ ಲಿಂಗೈಕ್ಯ ರಾಗಿದ್ರು. ಸಿದ್ದಲಿಂಗ ಶ್ರೀ ಲಿಂಗೈಕ್ಯರಾದ ಬಳಿಕ ಅಧ್ಯಕ್ಷ ಸ್ಥಾನದ  ವಿಚಾರದಕ್ಕೆ ಬಾರಿ ಪೈಪೋಟಿ ನಡೆದಿತ್ತು. ಆದ್ರೆ ರಾಜ್ಯದ ನಾಲ್ಕು ಯೋಗವನ ಬೆಟ್ಟಗಳಿಗೆ   ಅಧ್ಯಕ್ಷರಾಗಿ  ಬಸವಕುಮಾರ ಸ್ವಾಮೀಜಿ ಆಯ್ಕೆ ಯಾಗಿದ್ರು. ಇದ್ರಿಂದ ಅನ್ಯಾಯ ವಾಗಿದೆ ಎಂದು ಆರೋಪಿಸಿ ಇಂದು ತಿಪ್ಪೇರುದ್ರಸ್ವಾಮಿ ಸ್ವಾಮೀಜಿ ಹಾಲಿ ಅಧ್ಯಕ್ಷ ಬಸವಕುಮಾರ ಸ್ವಾಮೀಜಿ ಹಾಗೂ ಮಾಜಿ ಶಾಸಕ, ಟ್ರಸ್ಟಿ ಖಜಾಂಚಿ ಎಸ್‌.ಕೆ ಬಸವರಾಜನ್  ಅಧ್ಯಕ್ಷ ಸ್ಥಾನದಲ್ಲಿ ವಂಚನೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೇ ಇದೇ ವಿಚಾರಕ್ಕೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದು, ನನ್ನ ಸಾವಿಗೆ ನ್ಯಾಯ ಒದಗಿಸುವಂತೆ ಸ್ವಾಮೀಜಿಗಳು ಡೆತ್ ನೋಟ್ ನಲ್ಲಿ ಬರೆದಿದ್ದು ಘಟನೆಗೆ ಕಾರಣ ಎನ್ನಲಾಗಿದೆ. ಇನ್ನೂ ಈ ಸಂಬಂಧ ಮಾತ್ನಾಡಿರುವ ಮಾಜಿ ಶಾಸಕ ಎಸ್.ಕೆ ಬಸವರಾಜನ್ ಈ ಪ್ರಕರಣದಲ್ಲಿ ಯಾವುದೇ ಪಾತ್ರ ಇಲ್ಲ, ಯಾಕೆ ಹೀಗೆ ಮಾಡಿದ್ದಾರೆಂದು ಗೊತ್ತಿಲ್ಲ ಎಂದು ಆರೋಪ ತಳ್ಳಿ ಹಾಕಿದ್ದಾರೆ.
ವನಮೂಲಿಕೆ ಔಷಧಿಗಳ ಕೇಂದ್ರ ಸ್ಥಾನವಾಗಿರುವ ಯೋಗವನ ಬೆಟ್ಟಗಳ ಅಧ್ಯಕ್ಷ ಸ್ಥಾನದ ವಿಚಾರ ಬೀದಿಗೆ ಬಂದಂತಾಗಿದೆ. ಅಲ್ದೆ ವಿಷ ಸೇವಿಸಿದ  ತಿಪ್ಪೇರುದ್ರಸ್ವಾಮೀಜಿಗಳು  ಸಾವು ಬದುಕಿನ ನಡುವೆ ಹೋರಾಟ ನಡೆಸ್ತಿದ್ದಾರೆ. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆಯ ಬಳಿಕ ಈ ಹೈಡ್ರಾಮದ ಸತ್ಯಾಸತ್ಯತೆ ಹೊರಬರಬೇಕಿದೆ.
ಸಂಯುಕ್ತವಾಣಿ

Leave a Reply

Your email address will not be published. Required fields are marked *