Chitrarurga namma made tyajya mukta kade

ನಮ್ಮ ನಡೆ ತ್ಯಾಜ್ಯ ಮುಕ್ತ ಕಡೆ

ಜಿಲ್ಲಾ ಸುದ್ದಿ

ಚಿತ್ರದುರ್ಗ: ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಗ್ರಾಮೀಣ ಜನರಲ್ಲಿ ತ್ಯಾಜ್ಯ ವಿಂಗಡಣೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ನಮ್ಮ ನಡಿಗೆ-ತ್ಯಾಜ್ಯ ಮುಕ್ತ ಕಡೆಗೆ ಎಂಬ ಘೋಷ ವಾಕ್ಯದಡಿಯಲ್ಲಿ ತ್ಯಾಜ್ಯ ವಿಂಗಡಣೆ, ವೈಜ್ಞಾನಿಕ ವಿಲೇವಾರಿ ಬಗ್ಗೆ ಅರಿವು ಮೂಡಿಸಲು ವಿಶೇಷ ಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿದೆ.

 

 

 

Chitrarurga  namma made tyajya mukta kade
ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಜನರು ಸ್ವಯಂ ಪ್ರೇರಿತರಾಗಿ ತ್ಯಾಜ್ಯ ವಿಂಗಡಣೆಯ ಅಭ್ಯಾಸವನ್ನು ರೂಢಿಸಿಕೊಳ್ಳಲು ಪ್ರೇರೇಪಣೆ ನೀಡುವುದು ಹಾಗೂ ಜನರಲ್ಲಿರುವ ವರ್ತನೆಯನ್ನು ಬದಲಾವಣೆ ಮಾಡುವ ಉದ್ದೇಶದಿಂದ 2021ರ ಜನವರಿ 30 ರಿಂದ ಮಾರ್ಚ್ 31 ರವರೆಗೆ ಮೂಲದಲ್ಲಿಯೇ (ಮನೆಯ ಹಂತದಲ್ಲಿ) ತ್ಯಾಜ್ಯ ವಿಂಗಡಣೆ ಕುರಿತು ವಿಶೇಷ ಜಾಗೃತಿ ಅಂದೋಲವನ್ನು ಆಯೋಜಿಸಲಾಗಿದೆ.
ಜನವರಿ 31ರಂದು ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ ಅಂದೋಲನಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಗುವುದು. ಈ ಅಂದೋಲವನ್ನು ಹಂತ ಹಂತವಾಗಿ ಎಲ್ಲಾ ಗ್ರಾಮ, ಗ್ರಾಮ ಪಂಚಾಯಿತಿಗಳಲ್ಲಿ ಆಯೋಜಿಸುವ ಮೂಲಕ  ತ್ಯಾಜ್ಯ ವಿಂಗಡಣೆ, ಸಂಸ್ಕರಣೆ ಮತ್ತು ವಿಲೇವಾರಿ ಹಾಗೂ ಶೌಚಾಲಯ ಬಳಕೆ ಕುರಿತು ವ್ಯಾಪಕವಾದ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ.
ಪ್ಲಾಸ್ಟಿಕ್‍ನ್ನು ಪ್ರತಿನಿತ್ಯ ಯಥ್ಥೇಚ್ಛವಾಗಿ ಬಳಕೆ ಮಾಡುತ್ತಿರುವ ಪರಿಣಾಮ ಪರಿಸರದ ಮೇಲೆ ದುಷ್ಪಾರಿಣಾಮ ಬೀರುತ್ತದೆ. ಗ್ರಾಮಗಳಲ್ಲಿ ವ್ಯವಸ್ಥಿತ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ವ್ಯವಸ್ಥೆಯನ್ನು ಕಲ್ಪಿಸಿದರೆ ಮಾತ್ರ ತ್ಯಾಜ್ಯವನ್ನು ಸೂಕ್ತವಾಗಿ ನಿರ್ವಹಣೆ ಮಾಡಿ ಸ್ವಚ್ಛ ಸ್ವಸ್ಥ ಗ್ರಾಮಗಳನ್ನು ರೂಪಿಸಿ ಸಧೃಡ ಸಮಾಜವನ್ನು ರೂಪಿಸಬಹುದಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛ ಗ್ರಾಮ ಸ್ವಚ್ಛ ಪರಿಸರ ರೂಪಿಸುವುದು ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ನೇತೃತ್ವದಲ್ಲಿ ಪ್ರತಿಯೊಂದು ಗ್ರಾಮವನ್ನು ಕಸ ಮುಕ್ತವಾಗಿಸುವುದು ಇಲಾಖೆಯ ಧ್ಯೇಯೋದ್ದೇಶವಾಗಿದೆ. ಈ ನಿಟ್ಟಿನಲ್ಲಿ ಇಲಾಖೆ ಮುಂದಾಗಿದ್ದು, ಪ್ರತಿಯೊಂದು ಗ್ರಾಮವು ಕಸ ಮುಕ್ತವಾಗಿಸುವ ಉದ್ದೇಶ ಹೊಂದಲಾಗಿದೆ.
ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕಾಪಾಡುವುದು: ಈ ಮಾಸಾಚರಣೆಯ ಅವಧಿಯಲ್ಲಿ ಗ್ರಾಮಸ್ಥರು ಕಡ್ಡಾಯವಾಗಿ ಶೌಚಾಲಯವನ್ನು ಬಳಸುವ ಬಗ್ಗೆ ಬಯಲು ಬಹಿರ್ದೆಸೆಯನ್ನು ತಡೆಗಟ್ಟುವುದು, ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುವುದು, ಕಸ ವಿಲೇವಾರಿಯ ಸಮರ್ಪಕ ನಿರ್ವಹಣೆ, ಚರಂಡಿಗಳ ಸ್ವಚ್ಛತೆ, ಬೀದಿಗಳ ಸ್ವಚ್ಛತೆ, ಬಸ್ ನಿಲ್ದಾಣಗಳ ಸ್ವಚ್ಛತೆ, ನೀರಿನ ಸದ್ಭಳಕೆ ಹಾಗೂ ನೀರಿನ ಮೂಲಗಳ ಸ್ವಚ್ಛತೆ, ಅಂಗನವಾಡಿಗಳಿಗೆ ನಲ್ಲಿ ಸಂಪರ್ಕ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಆವರಣದ ಸ್ವಚ್ಛತೆ, ಶೌಚಾಲಯಗಳ ಸ್ವಚ್ಛತೆ, ಧಾರ್ಮಿಕ ಸ್ಥಳ ಸ್ವಚ್ಛತೆಯನ್ನು ಕಾಪಾಡುವುದು, ಸ್ವಚ್ಛತೆಯ ಕುರಿತು ಡಂಗೂರ ಸಾರುವುದು, ಜಾಥಾ, ಶ್ರಮದಾನ, ಬಯಲು ಬಹಿರ್ದೆಸೆ ಕೈಗೊಳ್ಳುವಂತಹ ಕುಟುಂಬಗಳನ್ನು ಗುರುತಿಸುವುದು ಇಂತಹ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಶೌಚಾಲಯ ಬಳಸುವಂತೆ ಪ್ರೇರೇಪಿಸಲಾಗುವುದು.
ಪ್ರೋತ್ಸಾಹ ಮತ್ತು ಉತ್ತೇಜನ: ಮಾಸಾಚರಣೆಯ ಕಡೆ ವಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬಯಲು ಬರ್ಹಿದೆಸೆ ಕೈಗೊಳ್ಳುವವರ ಮೇಲೆ ನಿಗಾವಹಿಸಿ ನಿಯಾಮಾನುಸಾರ ಕ್ರಮಕೈಗೊಳ್ಳುವುದು, ಜಾಗೃತಿಯಿಂದ ಗ್ರಾಮಗಳಲ್ಲಿ ಜನರ ನಡತೆಯಲ್ಲಿ ಉಂಟಾದ ಬದಲಾವಣೆ ಬಗ್ಗೆ ದಾಖಲೆ, ಅಂಕಿ ಅಂಶಗಳನ್ನು ಕ್ರೂಢೀಕರಿಸಿ ಜಿಲ್ಲಾ ಪಂಚಾಯಿತಿಗೆ ವರದಿಯನ್ನಾಧರಿಸಿ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡರಿಗೆ, ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಗ್ರಾಮ ಸಭೆಯಲ್ಲಿ ಪ್ರಶಂಸಿಸಿ ಸತ್ಕರಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ ತಿಳಿಸಿದರು.
ಸಂಯುಕ್ತವಾಣಿ

Leave a Reply

Your email address will not be published. Required fields are marked *