ಸತಿಪತಿಗಳ ಮನೇಲಿ ಲೋಕಾಯುಕ್ತರಿಗೆ ಸಿಕ್ಕಿದ್ದು ಇಲ್ಲಿದೆ ವಿವರ

ರಾಜ್ಯ

ಚಿತ್ರದುರ್ಗದ ಲೋಕಾಯುಕ್ತ ಅಧಿಕಾರಿಗಳು ಹೊಳಲ್ಕೆರೆ ಇಂಜಿನಿಯರ್ ಮಹೇಶ್ ಮತ್ತು ಪತ್ನಿ‌ ಇಇ ಭಾರತಿ ಮನೆ ಮೇಲೆ ದಾಳಿ‌ ನಡೆಸಿ ಭರ್ಜರಿ‌ ಭೇಟೆಯಾಡಿದ್ದಾರೆ.
ನಿನ್ನೆ ಹೊಳಲ್ಕೆರೆ ದಾವಣಗೆರೆ ಮತ್ತು ಬೆಂಗಳೂರುಗಳಲ್ಲಿ ಮೂರು ತಂಡಗಳಾಗಿ ದಾಳಿ ನಡೆಸಿದ್ದ ಅಧಿಕಾರಿಗಳಿಗೆ ಬಿಬಿಎಂಪಿಯಲ್ಲಿ ಇಇ ಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹೇಶ್ ಪತ್ನಿ ಭಾರತಿ ಮನೆಯಲ್ಲಿ 1.47 ಕೋಟಿ, ಆಕ್ರಮ ಆಸ್ತಿ ಪತ್ತೆಯಾಗಿದೆ.850 ಗ್ರಾಂ ಚಿನ್ನಾಭರಣ,400ಗ್ರಾಂ ಬೆಳ್ಳಿ, 12 ಎಕರೆ ಜಮೀನು ಪತ್ತೆಯಾಗಿದೆ. 2006 ರಲ್ಲಿ ಕರ್ತವ್ಯಕ್ಕೆ ಇಇ ಭಾರತಿ ಸೇರಿದ್ದರು, 2007 ರಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿದ್ದ ಮಹೇಶ್ ಸತಿಪತಿಗಳು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ ಲೋಕಾಯುಕ್ತ ಎಸ್ಪಿ ವಾಸುದೇವ್ ಮತ್ತು ಡಿವೈಎಸ್ಪಿ ಮೃತ್ತುಂಜಯ ನೇತೃತ್ವದಲ್ಲಿ ದಾಳಿ ನಡೆಸಿದ್ದರು.

 

 

 

Leave a Reply

Your email address will not be published. Required fields are marked *