ಮತ ನೀಡಿದ  ಜನರ ಋಣವನ್ನು ತೀರಿಸುವ ಕೆಲಸ ಮಾಡಿದ್ದೇನೆ

ಜಿಲ್ಲಾ ಸುದ್ದಿ

ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ  ಮೂಲಕ ನನಗೆ ಮತ ನೀಡಿದ  ಜನರ ಋಣವನ್ನು ತೀರಿಸುವ ಕೆಲಸ ಮಾಡಿದ್ದೇನೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. 
ನಗರದ ಧವಳಗಿರಿ ಬಡಾವಣೆಯ 3 ನೇ ಹಂತದಲ್ಲಿ  ಸಿ.ಸಿ.ರಸ್ತೆ ಕಾಮಗಾರಿ ಮತ್ತು  ನೂತನ ಪಾರ್ಕ್ ಉದ್ಘಾಟಿಸಿ ಮಾತನಾಡಿದರು. 
ಧವಳಗಿರಿ ಬಡಾವಣೆ ಹೊಸ ಬಡಾವಣೆಯಾಗಿದ್ದು ಎಲ್ಲಾ ಮೂಲಭೂತ ಸೌಲಭ್ಯ ಹೊಸದಾಗಿ ಮಾಡಬೇಕು. ಧವಳಗಿರಿ3 ನೇ ಹಂತದ ಬಡಾವಣೆಯ ರಸ್ತೆಗಳ ಅಭಿವೃದ್ಧಿಗೆ ಒಂದು ಕೋಟಿ ಹಣ ನೀಡಿದ್ದೇನೆ. ಉತ್ತಮ ಗುಣಮಟ್ಟದ ಸಿ.ಸಿ.ರಸ್ತೆ ಕಾಮಗಾರಿ  ಮಾಡಲು ತಿಳಿಸಿದ್ದು ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಎಲ್ಲಾ ಕಡೆ ಅನುದಾನ ವ್ಯವಸ್ಥೆ ಮಾಡಬೇಕಾಗಿದ್ದು ಈ  ಬಡಾವಣೆಗೆ ಹಂತ ಹಂತವಾಗಿ ಅನುದಾನ ನೀಡಿತ್ತೇನೆ.ಈಗಾಗಲೇ ಅವರು ನಿರೀಕ್ಷೆಗಿಂತ ಹೆಚ್ಚಿನ ಅನುದಾನ ನೀಡಿದ್ದೇನೆ.  ಈ ಭಾಗದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸುಂದರವಾದ ಪಾರ್ಕ್ ನಿರ್ಮಾಣ ಮಾಡಲಾಗಿದ್ದು ಇಂದು  ಉದ್ಘಾಟಿಸಿದ್ದೇನೆ.  ಹಿರಿಯ ನಾಗರಿಕರು , ಮಕ್ಕಳು, ಮಹಿಳೆಯರು ಬೆಳಗ್ಗೆ ಸಂಜೆ ವಾಕಿಂಗ್ ಮಾಡಲು ,ಮಕ್ಕಳು ಆಟವಾಡಲು ಮತ್ತು ಪ್ರಶಾಂತ್ ವಾದ  ವಾತವರಣ ದೃಷ್ಟಿಯಿಂದ ನಗರದ ಎಲ್ಲಾ  ಕಡೆ ಸುಮಾರು 45 ಪಾರ್ಕ್ ಅಭಿವೃದ್ಧಿ ಮಾಡಲಾಗಿದೆ. ಮುಖ್ಯಮಂತ್ರಿಗಳು ಮತ್ತೆ 9 ಕೋಟಿ ಹಣ ನೀಡಿದ್ದು 28 ಪಾರ್ಕ ಗಳ ಅಭಿವೃದ್ಧಿ ಮಾಡಲಾಗುತ್ತದೆ.
ನನ್ನ ಕ್ಷೇತ್ರದ ನಗರ ಮತ್ತು ಗ್ರಾಮೀಣ ಭಾಗದ ಎಲ್ಲಾ ಕಡೆಗಳಲ್ಲಿ.ಸಿ.ಸಿ.ರಸ್ತೆ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ , ಬೀದಿ ದೀಪ, ಚಕ್ ಡ್ಯಾಂ ಗಳ ನಿರ್ಮಾಣ ಮಾಡಿದ್ದೇನೆ. ಕಳೆದ 6 ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ಮೂಲಕ ಜನರ ಸೇವೆ ಮಾಡಲು ಅವಕಾಶ ನೀಡಿದ್ದು  ಜನರ ನಿರೀಕ್ಷೆಗಿಂತ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ‌. ಜನರ ಮುಂದೆ ಅಭಿವೃದ್ಧಿ ಕೆಲಸಗಳಿವೆ. ಕಳೆದ ಐದು ವರ್ಷದಲ್ಲಿ ಜನರು ನೀಡಿದ ಮತಕ್ಕೆ ಅವರ ಋಣ ತೀರಿಸಿದ್ದೇನೆ‌. ನನಗೆ ಜನರೇ ಸುಪ್ರೀಂ ಜನರು ಪ್ರೀತಿ ವಿಶ್ವಾಸ ಗಳಿಸಿದ್ದು ಅವರ ಕಷ್ಟದಲ್ಲಿ ಸದಾ ನಾನು ಇರುತ್ತೇನೆ ಎಂದು ತಿಳಿಸಿದರು.
ಗ್ಯಾಸ್ ಸಂಪರ್ಕ: ನಗರ ಧವಳಗಿರಿ ಬಡಾವಣೆ ಸೇರಿ ವಿವಿಧ ಭಾಗಗಳಲ್ಲಿ  ಪೈಪ್ ಲೈನ್ ಮೂಲಕ ಮನೆ ಮನೆಗೆ  ಗ್ಯಾಸ್ ಸಂಪರ್ಕ ಕೆಲಸ ನಡೆಯುತ್ತಿದ್ದು ಹಂತ ಹಂತವಾಗಿ ಎಲ್ಲಾ ಕಡೆ ಮಾಡಲಾಗುತ್ತದೆ. ರಸ್ತೆಯನ್ನು ಹಗೆದರೆ ಅವರಿಗೆ ಮರು ನಿರ್ಮಾಣಕ್ಕೆ ಸೂಚಿಸಲಾಗಿದೆ.
ನನ್ನ ಕ್ಷೇತ್ರದಲ್ಲಿ ಸುಮಾರು 583 ಕೋಟಿ ವೆಚ್ಚದಲ್ಲಿ  183 ಹಳ್ಳಿಗಳಿಗೆ ವಾಣಿ ವಿಲಾಸದಿಂದ ಕುಡಿಯುವ ನೀರಿನ ಸಂಪರ್ಕ ನೀಡುವೆ ಕೆಲಸ ಕೆಲವು ಹಳ್ಳಿಗಳಲ್ಲಿ ಪೂರ್ಣಗೊಂಡಿದೆ. ಅದು ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು ಬಡವರ ಪರ ನಮ್ಮ ಸರ್ಕಾರ ಇದ್ದು ಜಾತ್ಯತೀತವಾಗಿ ಎಲ್ಲಾ  ಕಡೆ ಅಭಿವೃದ್ಧಿ ಮಾಡಿದ್ದೇವೆ.ನಾನು ಎಂದು ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಲ್ಲ ಎಲ್ಲಾರೂ ಒಂದೇ, ಕ್ಷೇತ್ರ ಪ್ರತಿಯೊಬ್ಬರು ನನ್ನ ಮತದಾರರೇ ಎಂಬ ಭಾವನೆ ನನ್ನದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ  ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಜಿ.ಟಿ.ಸುರೇಶ್, ನಗರಸಭೆ ಸದಸ್ಯರಾದ ಶ್ರೀನಿವಾಸ್, ಜಯ್ಯಣ್ಣ, ಬಾಲಮ್ಮ, ನಗರಾಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶನ ಸದಸ್ಯರಾದ ವಿ.ಆರ್.ನಾಗರಾಜ್, ರೇಖಾ,ರೈತ   ರಾಜು,ಮುಖಂಡರಾದ ಪರಮೇಶ್, ನಿಶಾನಿ ಶಂಕರ್, ಕುರಿ ನಾಗರಾಜ್ ಮತ್ತು ಸಾರ್ವಜನಿಕರು ಇದ್ದರು.

 

 

 

Leave a Reply

Your email address will not be published. Required fields are marked *