ಈ ಕಾರಣಕ್ಕಾಗಿಯೇ ಶೋಷಿತರ ಸಮಾವೇಶ: ಕೆ ಎಂ ರಾಮಚಂದ್ರಪ್ಪ

ರಾಜ್ಯ

 

 

 

 

ಕಾಂತರಾಜ್ ವರದಿಯನ್ನು ಬಿಡುಗಡೆ ಮಾಡಬೇಕು ಹಾಗೂ ಅಂಗೀಕಾರ ಮಾಡಬೇಕು ಇದಕ್ಕಾಗಿ ಈ ಶೋಷಿತ ವರ್ಗಗಳ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಶೋಷಿತ ವರ್ಗಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ ಎಂ ರಾಮಚಂದ್ರಪ್ಪ ಹೇಳಿದರು. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ‌ ಮಾತಾಡಿದರು. ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಹಿಂದುಳಿದ ಜಾತಿಗಳ ಒಕ್ಕೂಟದ ಸಂಯುಕ್ತಾಶ್ರಯಲ್ಲಿ ಶೋಷಿತ ವರ್ಗಗಳ ಸಮಾವೇಶವನ್ನು ಆಯೋಜಿಸಲಾಗಿದೆ.
ಸಮಾವೇಶಕ್ಕೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದೇವೆ. ಇತಿಹಾಸದಲ್ಲಿ‌ ಎಂದು ಯಾವತ್ತೂ ಸೇರದಂತಹ ಸಂಖ್ಯೆಯಲ್ಲಿ ಜನಸಾಗರ ಹರಿದು ಬರಲಿದೆ. ಸಮಾವೇಶವನ್ನು 150 ಎಕೆರೆ ಜಾಗದಲ್ಲಿ ಆಯೋಜಿಸಿದ್ದೇವೆ. ರಾಜ್ಯದ ಸಿಎಂ ಮತ್ತು ಡಿಸಿಎಂ ಇಬ್ಬರಿಗೂ ಆಹ್ವಾನ ನೀಡಿದ್ದು, ಅವರು ಬರಲಿದ್ದಾರೆ. ಶೋಷಿತ ಸಮುದಾಯದ ಮಂತ್ರಿಗಳು, ಹಾಲಿ ಮಾಜಿ ಶಾಸಕರುಗಳ ಆಗಮಿಸಲಿದ್ದಾರೆ. ಸಮಾವೇಶದಲ್ಲಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಿದ್ದೇವೆ. ಅವುಗಳ ಈಡೇರಿಕೆಗೆ ಸರ್ಕಾರದ ಒತ್ತಡ ಹೇರಲಿದ್ದೇವೆ. ಸಮಾವೇಶಕ್ಕೆ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಶಿವಮೊಗ್ಗಾ ,ತುಮಕೂರು, ವಿಜಯನಗರ, ಕೊಪ್ಪಳ, ಗದಗ ಮತ್ತು ಹಾವೇರಿ ಭಾಗದಿಂದ ಜನರು ಆಗಮಿಸಲಿದ್ದಾರೆ. 10 ಸಾವಿರಕ್ಕಿಂತ ಹೆಚ್ಚು ವಾಹನಗಳ ಬರಲಿವೆ. ಐದು ಲಕ್ಷಕ್ಕಿಂದ ಹೆಚ್ಚು ಜನರು ಭಾಗವಹಿಸುತ್ತಾರೆ. ಶೋಷಿತರ ಊಟ ಮಾಂಸಹಾರ ಹಾಗೂ ಸಸ್ಯಹಾರವನ್ನು ಕೂಡ ಮಾಡಿಸಿದ್ದೇವೆ. ರಾಜ್ಯದಲ್ಲಿ ಯಾವ ಯಾವ ಜಾತಿ ಜನ ಸಂಖ್ಯೆ ಎಷ್ಟಿದೆ ಎಂದು ಗೊತ್ತಿಲ್ಲ. ಇದೀಗ ಕಾಂತರಾಜ್ ಸಮೀಕ್ಷೆಯ ವರದಿಯಿಂದ ಎಲ್ಲಾ ಜಾತಿ ಜನಸಂಖ್ಯೆ ತಿಳಿಯಲಿದೆ. ಆದ್ದರಿಂದ ಕೂಡಲೇ ಸರ್ಕಾರ ಕಾಂತರಾಜ್ ವರದಿ ಬಿಡುಗಡೆ ಮಾಡಬೇಕು. ಚರ್ಚೆ ಆಗಬೇಕು ಅಂಗೀಕಾರ ಆಗಬೇಕು. ಕಾಂತರಾಜ್ ಸಮೀಕ್ಷೆ ವರದಿ ಬಿಡುಗಡೆ ಮಾಡುವುದರಿಂದ ಯಾರಿಗ್ಯಾಕೆ ನೋವು ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *