ಶಾಕ್ ಮೇಲೆ ಶಾಕ್ ಕೊಡುತ್ತಿರುವ ಕೆಂಪು ಸುಂದರಿ

ರಾಜ್ಯ

ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ‌ ಇನ್ನು  ಆರಿಲ್ಲ ಆಗಲೇ ಜನರಿಗೆ  ಮತ್ತೊಂದು ಶಾಕ್  ಎದುರಾಗಿದೆ. ಟೊಮಾಟೋ ಬೆಲೆ ಮತ್ತಷ್ಟು ಏರಿಕೆಯಾಗುವ  ಮೂಲಕ ಶಾಕ್ ಮೇಲೆ ಶಾಕ್ ನೀಡಿದೆ.

 

 

 

 

ರಾಜ್ಯದ ಜನರಿಗೆ  ಟೊಮಾಟೋ ಬೆಲೆ ಮತ್ತೆ ಶಾಕ್ ನೀಡಿದೆ. ಕಳೆದ ವಾರದಲ್ಲಿ 60 ರಿಂದ 100 ರೂಗಳಿಗೆ ಒಂದು ಕೇಜಿ‌ ಇದ್ದರೆ, ಇಂದು 130 ರೂಪಾಯಿಗೆ ಒಂದು  ಕೇಜಿ ಬೆಲೆ ಏರಿಕೆಯಾಗಿದೆ.ಇದರಿಂದ ಕೋಟೆ ನಾಡಿನಲ್ಲಿಯೂ ಕೂಡ ಟೊಮಾಟೋ ಬೆಲೆ ಇತಿಹಾಸವನ್ನು ಬರೆದಿದೆ. ರಾಜ್ಯದಲ್ಲಿ ಮಳೆ ಹೀಗೆ ಮುಂದುವರೆದರೆ ಟೊಮಾಟೋ ಬೆಳೆಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಇ‌ನ್ನೆರಡು ವಾರಗಳಲ್ಲಿ ಟೊಮಾಟೋ ನ ಹೊಸ ಬೆಳೆಯು ಕಟಾವಿಗೆ ಬರಲಿದೆ. ಆದರೆ ಮಳೆಯ ಆರ್ಭಟ ಜೋರಾಗಿರುವುದರಿಂದ ಬೆಳೆಯು ನಾಶವಾಗುವ ಆತಂಕ ಎದುರಾಗಿದೆ.  ಈಗಾಗಲೇ ಉತ್ತಮ ಗುಣಮಟ್ಟದ ಟೊಮಾಟೋ ಒಂದು ಕ್ವಿಂಟಾಲ್ ಗೆ 8000 ರೂಪಾಯಿ ಇದೆ. ಈಗಿನ ಬೆಲೆಯು 120 ರಿಂದ 135 ಇದ್ದು, ಹೊಸ ಟೊಮಾಟೋ ಮಾರುಕಟ್ಟೆಗೆ ಬರಲು ಇನ್ನು ಎರಡು ವಾರ ಬಾಕಿ‌ ಇದೆ. ಆದರೆ ಸುರಿಯುತ್ತಿರುವ ಮಳೆಯಿಂದಾಗಿ ಟೊಮಾಟೋ ಮಾರುಕಟ್ಟೆಗೆ ಬರುವುದು ಕಷ್ಟವಾಗುತ್ತದೆ. ಹೀಗೆನಾದರು ಆದರೆ ಟೊಮಾಟೋ ಗಗನ ಕುಸುಮವಾಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *