ಉಚಿತ ಶಿಕ್ಷಣ ನೀಡಿ, ಉತ್ತಮ ಫಲಿತಾಂಶ ಪಡೆದು ಮಾದರಿಯಾದ ಶ್ರೀ ನೂತನ್ ಶಿಕ್ಷಣ ಸಂಸ್ಥೆ

ರಾಜ್ಯ

ಕೊಟ್ಟ ಮಾತಿನಂತೆ ಉಚಿತ ಶಿಕ್ಷಣ ನೀಡಿ, ಉತ್ತಮ ಫಲಿತಾಂಶ ಪಡೆದು ಮಕ್ಕಳ ಭವಿಷ್ಯ ರೂಪಿಸಿದ ಶ್ರೀ ನೂತನ್ ವಿಜ್ಞಾನ ಪಿಯು ಕಾಲೇಜು ಕರ್ನಾಟಕ ರಾಜ್ಯದಲ್ಲೇ ಮಾದರಿ ಸ್ಥಾನದಲ್ಲಿ ನಿಲ್ಲುತ್ತದೆ. ಇಂದು ಶಿಕ್ಷಣವನ್ನೇ ಒಂದು ವ್ಯಾಪಾರ ಮಾಡಿಕೊಂಡಿರುವ ಶಿಕ್ಷಣ ಸಂಸ್ಥೆಗಳು, ಉತ್ತಮ ತರಬೇತಿ ನೀಡುವುದರ ಜೊತೆಗೆ ಫಲಿತಾಂಶವನ್ನು ನೀಡುತ್ತಿವೆ. ಚನ್ನಾಗಿ ಓದುವವರನ್ನು ಗುರುತಿಸಿ ಅವರಿಗೆ ಹೆಚ್ಚಿನ ತರಬೇತಿ ನೀಡಿ ಶಿಕ್ಷಣ ಸಂಸ್ಥೆ ಹಾಗೂ ಪೋಷಕರಿಗೂ ಕೀರ್ತಿ ತರುತ್ತಿವೆ. ಆದರೆ ಚಿತ್ರದುರ್ಗದ ಸಿದ್ದಾಪುರ ಗ್ರಾಮದಲ್ಲಿರುವ ಶ್ರೀ ನೂತನ್ ಎಜುಕೇಷನ್ ಅಂಡ್ ರೂರಲ್ ಡೆವಲಪ್ಮೆಂಟ್ ಸೊಸೈಟಿ ಹಾಗು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ. ರಾಘವೇಂದ್ರ ಅವರು,
ತಂದೆ ಅಥವಾ ತಾಯಿ ಕಳೆದುಕೊಂಡ ಅನಾಥ ಮಕ್ಕಳು ಮತ್ತು ಕಡು ಬಡತನದಿಂದ ಶಿಕ್ಷಣ ವಂಚಿತರಾಗುತ್ತಿದ್ದ ಮಕ್ಕಳನ್ನು ಗುರುತಿಸಿ,
ಎರಡು ವರ್ಷಗಳ ಕಾಲ ಎಲ್ಲಾ ಪಿಯು ಮಕ್ಕಳಿಗೂ ಸಿ.ಇ.ಟಿ. ನೀಟ್, ಜೆ ಇ ಇ. ಒಳಗೊಂಡಂತೆ ಸಂಪೂರ್ಣ ಉಚಿತ ಶಿಕ್ಷಣ ನೀಡಿ ಮಕ್ಕಳಿಂದ ಉತ್ತಮ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

 

 

 


ಉಚಿತ ಶಿಕ್ಷಣ ನೀಡಿ ಮಕ್ಕಳಿಗೆ ದಾರಿ ದೀಪವಾಗಿದ್ದಾರೆ. ಈ ಸಾಲಿನ ಪಿಯುಸಿಯಲ್ಲಿ 17 ವಿದ್ಯಾರ್ಥಿಗಳಲ್ಲಿ, ಕಾರ್ತೀಕ್ 515 ಮತ್ತು ಸಹನ ಜೆ ಡಿ ಅತ್ಯುತ್ತಮ ಶ್ರೇಣಿ ಪಡೆದುಕೊಂಡಿದ್ದಾರೆ. 14 ಪ್ರಥಮ ಶ್ರೇಣಿ ಹಾಗೂ 1 ದ್ವಿತೀಯ ಶ್ರೇಣಿ ಪಡೆದುಕೊಂಡಿದ್ದಾರೆ. ಇದು ಕರ್ನಾಟಕ ರಾಜ್ಯಕ್ಕೆ ಮಾದರಿಯಾಗಿದೆ

Leave a Reply

Your email address will not be published. Required fields are marked *