ಭೂ ಕುಸಿತದಿಂದ ಕೇದಾರನಾಥದಲ್ಲಿ ಸಿಲುಕಿದ ಮೂವರು ಬಿಜೆಪಿ ಮಹಿಳಾ ಮುಖಂಡರು

ದೇಶ

ಕೇದಾರನಾಥದ ಚಾರು ಧಾಮದ ಬಳಿ ಕೋಟೆ ನಾಡಿನ ಮೂವರು ಬಿಜೆಪಿ ಮಹಿಳಾ ಮುಖಂಡರು ಸಿಲುಕಿರುವ ಘಟನೆ ನಡೆದಿದೆ.
ಬಿಜೆಪಿ ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ರತ್ನಮ್ಮ, ಜಿಲ್ಲಾ ಬಿಜೆಪಿ ಪ್ರಧಾನ‌ ಕಾರ್ಯದರ್ಶಿ ಮಲ್ಲಿಕಾರ್ಜುನ್ ಅವರ ಪತ್ನಿ ಅಂಬಿಕಾ ಮತ್ತು ಇನ್ನೊಬ್ಬ ಮುಖಂಡರಾದ ಗೀತಾ
ಕಳೆದ ಒಂದು ವಾರದ‌ ಹಿಂದೆ ಕೇದಾರನಾಥ್ ನೋಡಲು ಹೋಗಿದ್ದರು, ಮೊದಲಿಗೆ ಕಾಶ್ಮೀರ ಜಮ್ಮು,ದೆಹಲಿ ಇನ್ನಿತರೇ ಪ್ರೇಕ್ಷಣೀಯ ಸ್ಥಳಗಳನ್ನು ಭೇಟಿ‌ ನೀಡಿದ್ದು, ಇದೇ ತಿಂಗಳ 11 ರಿಂದ 13 ರವೆರೆಗೆ ಕೇದಾರ ನಾಥದ ಸುತ್ತಮುತ್ತಲು ನೋಡಿ‌ ಕೇದಾರನಾಥಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಚಾರು ಧಾಮ್ ನಲ್ಲಿ ಸಿಲುಕಿದ್ದಾರೆ. ಇಲ್ಲಿಬಳಿ ಭೂ ಕುಸಿತ ಹಾಗೂ ವಿಪರೀತ ಮಳೆಯಿಂದ ಎಲ್ಲಾ ರೀತಿಯ ಸಂಪರ್ಕ ಕಳೆದುಕೊಂಡಿದ್ದು,ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಮಳೆಯು ವಿಪರೀತವಾಗಿದ್ದು, ಯಾರೂ ಹೊರಗೆ ಬಾರದ ಸ್ಥಿತಿ‌ ಇದೆ.

 

 

 

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದ ಬಿಜೆಪಿ ಮುಖಂಡರು:
ಬಿಜೆಪಿ ಮುಖಂಡರು ಮಳೆಯಲ್ಲಿ ಸಿಲುಕಿರುವ ವಿಚಾರ ತಿಳಿಯುತ್ತಿದ್ದಂತೆ ಚಿತ್ರದುರ್ಗದ ಬಿಜೆಪಿ ಮುಖಂಡ ಮಲ್ಲಿಕಾರ್ಜುನ್ ಅವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಂಪರ್ಕಿಸಿದ್ದು, ಅವರು ಯಾರೂ ಚಾರು ಧಾಮ್ ನಲ್ಲಿಯೇ ಇರುವಂತೆ ತಿಳಿಸಿದ್ದಾರೆ.ಆದ್ದರಿಂದ ಮೂವರು ಸಮೇತ ನಲವತ್ತು ಜನರು ಕೂಡ ಅಲ್ಲಿಯೇ ಉಳಿದಿದ್ದಾರೆ. ಅವರನ್ನು ರಕ್ಷಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮತ್ತು ಕೇಂದ್ರ ಸಚಿವರೇ ಮಾಡಬೇಕಿದೆ.

ರಸ್ತೆ ವಿದ್ಯುತ್ ಸಂಪರ್ಕ ಕಡಿತ: ಕೇದಾರನಾಥಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಭೂ ಕುಸಿತ ವಾಗಿರುವುದರಿಂದ ಹಾಗೂ ವಿದ್ಯುತ್ ಸಂಪರ್ಕವೂ ಇಲ್ಲದಾಗಿರುವುದರಿಂದ ಸಂಪೂರ್ಣವಾಗಿ ಎಲ್ಲರ ಸಂಪರ್ಕವನ್ನು ಕಡಿದುಕೊಂಡಂತಾಗಿದೆ. ಮೊಬೈಲ್ ಸಂಪರ್ಕವೂ ಇಲ್ಲದಾಗಿದೆ.‌ ಇಷ್ಟೆಲ್ಲಾ ಸಮಸ್ಯೆಗಳು ಎದುರಾಗಿರುವುದರಿಂದ ಸಿಲುಕಿರುವ ಇವರನ್ನು ಹೆಲಿಕ್ಯಾಪ್ಟರ್ ಮೂಲಕವೇ ಸುರಕ್ಷಿತವಾಗಿ‌ಕರೆ ತರಬೇಕಿದೆ. ಇದರಿಂದ ಆತಂಕಕ್ಕೀಡಾಗಿರುವ ಕೋಟೆ ನಾಡಿನ ಬಿಜೆಪಿ ಮಹಿಳಾ ಮುಖಂಡರು ಹಾಗೂ ಜಿಲ್ಲಾ ಬಿಜೆಪಿ ಮುಖಂಡರು ತಕ್ಷಣವೇ ರಕ್ಷಣೆ ಮಾಡೇಕೆಂದು ಮನವಿಯನ್ನು ,ಚಿತ್ರದುರ್ಗದ ಜಿಲ್ಲಾಡಳಿತಕ್ಕೂ ಮಾಡಿದ್ದಾರೆ.

Leave a Reply

Your email address will not be published. Required fields are marked *