ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಸವಿತಾ ರಘು ರನ್ನು ಪಕ್ಷದಿಂದ ಉಚ್ಛಾಟಿಸಿ:  ವಿನಯ್ ಗೋಡೆ ಮನೆ ಒತ್ತಾಯ

ರಾಜ್ಯ

ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಸವಿತಾ ರಘು ರನ್ನು ಪಕ್ಷದಿಂದ ಉಚ್ಛಾಟಿಸಿ:  ವಿನಯ್ ಗೋಡೆ ಮನೆ ಒತ್ತಾಯ

ಕಾಂಗ್ರೆಸ್ ಮುಖಂಡರಾದ ಸವಿತಾ ರಘು ಅವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡು ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದು, ಅಂತವರಿಗೆ ನಿಗಮ ಮಂಡಳಿ ಸ್ಥಾನ ನೀಡುತ್ತೇವೆ ಎಂದು ಹೆಸರು ಪಟ್ಟಿಯಲ್ಲಿದೆ ಎನ್  ಎಸ್ ಯು ಐ ರಾಜ್ಯ ಮುಖಂಡ ವಿನಯ್ ಗೋಡೆ ಮನೆ ಆರೋಪಿಸಿದರು.ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ಇಡೀ ಹೊಳಲ್ಕೆರೆಯಲ್ಲಿ ಸವಿತಾ ರಘು ಯಾರಿಗೆ ಬೆಂಬಲಿಸಿದ್ದರು ಎಂದು ಜನರೇ ಹೇಳುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿದ್ದು, ಬೇರೆ ಪಕ್ಷಕ್ಕೆ ಬೆಂಬಲಿಸುವವರನ್ನು ಪಕ್ಷದಿಂದ ಕೂಡಲೇ ಉಚ್ಛಾಟನೆ ಮಾಡಬೇಕು ಎಂದು ಒತ್ತಾಯಿಸಿದರು.

 

 

 

 

ಸವಿತಾ ರಘು ತಾಳ್ಯಾ ಕ್ಷೇತ್ರದ ಜಿಪಂ ಸದಸ್ಯರಾಗಿ ಅವರ ಕೊಡುಗೆ ಏನಿಲ್ಲ. ಅವರು ಕಾಂಗ್ರೆಸ್ ಪಕ್ಷ ಬೆಳೆಸಲು ಬಂದಿಲ್ಲ, ಆದರೆ ಅವರು ಬಿಜೆಪಿ ಪಕ್ಷ ಬೆಂಬಲಿಸಲು ಬಂದಿದ್ದಾರೋ ಎಂದು ತಿಳಿಸಬೇಕು. ಕಾಂಗ್ರೆಸ್ ಪಕ್ಷದಲ್ಲಿದ್ದು, ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವ ಪ್ರಯತ್ನ ಮಾಡುತ್ತಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡುವುದಾರೆ ಪಕ್ಷ ಬಿಟ್ಟು ಬೇರೆ ಪಕ್ಷ ಸೇರಲಿ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಬೆಳವಣಿಗೆಗಳು ಗರಿಗೆದರುತ್ತಿವೆ. ರಾಜ್ಯ ಎನ್ ಎಸ್ ಯು ಐನ ಜಿಲ್ಲಾ ಹಾಗೂ ಜನರಲ್ ಸೆಕ್ರೆಟರಿಯಾಗಿರುವ ನನನ್ನು ಡಿಸಿಸಿ ಅಧ್ಯಕ್ಷರಾದಿಯಾಗಿ ಕ್ಷೇತ್ರಗಳ ಶಾಸಕರುಗಳ ಗಮನಕ್ಕೆ ತರದೆ ಇದ್ದಕ್ಕಿದ್ದಂತೆ ಹೊಳಲ್ಕೆರೆಯ ಕಿರಣ್ ಯಾದವ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಬದಲು ಮಾಡಿಸಿಕೊಂಡು ಬಂದಿದ್ದಾರೆ. ಜಿಲ್ಲೆಯ ಶಾಸಕರ ಸಭೆ ಕರೆದು ಮಾತಾಡಬೇಕು. ನಂತರ ಡಿಸಿಸಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದು ಬದಲು ಮಾಡಬೇಕಾಗಿದೆ. ಆದರೆ ಇದ್ಯಾವುದು ಇಲ್ಲದೆ ಬದಲಾವಣೆ ಮಾಡಿದ್ದಾರೆ. ಇದನ್ನು ಮಾಡಿಸಿಕೊಂಡು‌ ಬಂದಿರುವುದು ಸವಿತಾ ರಘು ಹಾಗೂ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ್ ಪುತ್ರ ವಿನಯ್ ತಿಮ್ಮಾಪುರ್ ಎಂದು ಆರೋಪಿಸಿದರು. ಇವರು ಲೋಕಸಭಾ ಟಿಕೆಟ್ ಆಕಾಂಕ್ಷಿತ ಅಭ್ಯರ್ಥಿಯಾಗಿದ್ದು, ಎಲ್ಲರನ್ನು ತಮಗೆ ಬಂದಂತೆ ಬಳಸಿಕೊಳ್ಳುತ್ತಿದ್ದಾರೆ. ಹೊಳಲ್ಕೆರೆ ತಾಲೂಕಿನಲ್ಲಿ ಸವಿತಾ ರಘು ಯುವಕರನ್ನು‌ ಬೆಳೆಯಲು‌ ಬಿಡುತ್ತಿಲ್ಲ, ಹೊಳಲ್ಕೆರೆ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದ್ದಾರೆಯೇ ವಿನಃ ಪಕ್ಷಕ್ಕೆ ಒಳ್ಳೆಯದನ್ನು ಮಾಡುತ್ತಿಲ್ಲ.ಇಂತವರಿಗೆ ನಿಗಮ ‌ಮಂಡಳಿ ಸ್ಥಾನ ನೀಡದೆ ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ಕೊಡಲಿ ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *