ಚಿತ್ರದುರ್ಗ ಸೇರಿ ರಾಜ್ಯದಲ್ಲಿ 28 ರಲ್ಲಿ 20 ಸ್ಥಾನಗಳು ಗೆಲ್ಲುತ್ತೇವೆ

ರಾಜ್ಯ

ಜಿಲ್ಲೆ ಜನತೆ ಕೈ ಹಿಡಿದರೆ ಜ್ವಲಂತ ಸಮಸ್ಯೆ ಪರಿಹರಿಸುತ್ತೇವೆ

ರಾಜ್ಯದಲ್ಲಿ 28 ರಲ್ಲಿ 20 ಸ್ಥಾನ ಗೆಲ್ಲುತ್ತೇವೆ

 

 

 

ಹಿಂದಿನ ಡಬಲ್ ಇಂಜಿನ್ ಸರ್ಕಾರ ಏನು ಕೊಟ್ಟಿದೆ ಎಂದು ಜನ ಚಿಂತಿಸಬೇಕು

ಜಿಲ್ಲೆಯ ಜನ ಆಶೀರ್ವಾದ ಮಾಡಿದರೆ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಜೊತೆ ಮಾತಾಡಿ ನಿವಾರಿಸುವ ಕೆಲಸ ಮಾಡುತ್ತೇವೆ ಎಂದು ಚಿತ್ರದುರ್ಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಹೇಳಿದರು. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.ಜಿಲ್ಲೆಯ ಜ್ವಲಂತ ಸಮಸ್ಯೆಗೆ ಪರಿಹಾರ ವಾಗಿರುವ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಬಿಡುಗಡೆ ಮಾಡುತ್ತೇವೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಹೇಳಿ ಬಿಡುಗಡೆ ಮಾಡಲಿಲ್ಲ ಯಾಕೆ ಎಂದು ಸಂಸದರಾಗಲಿ ಮುಖ್ಯ ಮಂತ್ರಿಯಾಗಲಿ ಕೇಳಲಿಲ್ಲ, ಮೆಡಿಕಲ್ ಕಾಲೇಜ್ ಮಂಜೂರಾಗಿದೆ ಎಂದು ಸಿಹಿ ಹಂಚಿದರು, ಯಾವುದೇ ಹಣ ಬಿಡುಗಡೆ ಮಾಡಲಿಲ್ಲ, ಸಿದ್ದರಾಮಯ್ಯ ಬಂದ ಮೇಲೆ ಹಣ ಬಿಡುಗಡೆ ಮಾಡಿದ್ದಾರೆ. ಇದರ ಬಗ್ಗೆ ಡಬಲ್ ಇಂಜಿನ್ ಸರ್ಕಾರ ಏನು ಕೊಟ್ಟಿದೆ ಎಂದು ಜನ ಯೋಚಿಸಬೇಕೆಂದರು. ಇದಕ್ಕೂ ಮುನ್ನ ಮಾತಾಡಿದ ಮಾಜಿ ಸಚಿವ ಹೆಚ್. ಆಂಜನೇಯ,ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಿತ್ರದುರ್ಗದ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ನೇತೃತ್ವದಲ್ಲಿ‌ 4 ರಂದು‌ ನಾಮಪತ್ರ ಸಲ್ಲಿಸುತ್ತೇವೆ ಮತ್ತು ಕ್ಷೇತ್ರದಲ್ಲಿ‌ ಗೆಲ್ಲುತ್ತೇವೆ ಎಂದರು. ನಾಮಪತ್ರದ ದಿನ ನೀಲ ಕಂಠೇಶ್ವರ ದೇವಸ್ಥಾನದಿಂದ ಸಾವಿರಾರು ಕಾರ್ಯಕರ್ತರ ಜೊತೆ ಬಂದು ನಾಮಪತ್ರ ಸಲ್ಲಿಸುತ್ತೇವೆ. ಕಾಂಗ್ರೆಸ್ ಎಂಟು ಕ್ಷೇತ್ರಗಳ ಎಲ್ಲಾ ಶಾಸಕರುಗಳು ಆಯಾಯಾ ಕ್ಷೇತ್ರದ ಜವಾಬ್ದಾರಿ ತೆಗೆದುಕೊಂಡು ಒಟ್ಟಾಗಿ ಕೆಲಸ ಮಾಡಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಇಂದು ಭಾಗ್ಯಗಳು ನಮ್ಮ ಕೈ ಹಿಡಿದಿವೆ.ಮಹಿಳೆಯರು ಹಾಗೂ ಜನತೆ ನಮ್ಮ ಪಕ್ಷವನ್ನು ಕೈ ಹಿಡಿಯುತ್ತಾರೆ. ಬಿಜೆಪಿ ಪಕ್ಷವು ಭದ್ರಾ ಮೇಲ್ದಂಡೆ ಯೋಜನೆಗೆ ವಿಧಾನ ಸಭಾ ಚುನಾವಣೆ ಮುನ್ನ 5300 ಕೋಟಿ ಹಣ ಬಿಡುಗಡೆ ಮಾಡುತ್ತೇವೆ ಎಂದಿದ್ದರು. ಆದರೆ ಇದುವರೆಗು ಬಿಡುಗಡೆಯಾಗಿಲ್ಲ. ಇದನ್ನು‌ ನಾವು ಪ್ರಶ್ನೆ ಮಾಡುತ್ತೇವೆ. ನುಡಿದಂತೆ ನಡೆದಿರುವ ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡುತ್ತೇವೆ. ರಾಜ್ಯದಲ್ಲಿ 28 ರಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ನೇತೃತ್ವದಲ್ಲಿ ಸಂಘಟನೆ ಮಾಡಿ ಮತಯಾಚನೆ ಮಾಡುತ್ತೇವೆ ಚಂದ್ರಪ್ಪ ಅವರನ್ನು ಗೆಲ್ಲಿಸುತ್ತೇವೆ ಎಂದರು. ಇದೇ ಸಮಯದಲ್ಲಿ ಮಾತಾಡಿದ ಜಿಲ್ಲಾ ಉಸ್ತುವಾರಿ ಸಚಿವರ. ಡಿ. ಸುಧಾಕರ್, ಸಿಎಂ ಡಿಸಿಎಂ ಆಗಮಿಸಲಿದ್ದಾರೆ. ರಾಜ್ಯಕ್ಕೆ ಸತತವಾಗಿ ಅನ್ಯಾಯವಾಗುತ್ತಿರುವುದನ್ನು ದೇಶ ಗಮನಿಸುತ್ತಿದೆ. ಆಂಧ್ರ, ತೆಲಂಗಾಣ ಇರಬಹುದು ಇಲ್ಲಿ ಅನುದಾನ ತಾರತಮ್ಯ ಆಗುತ್ತಿರುವುದು ಕಂಡಿದೆ. ಭದ್ರಾ ಯೋಜನೆ ಬಿಜೆಪಿ ಸರ್ಕಾರದಲ್ಲಿ‌ ಕಾಮಗಾರಿ ಕುಂಠಿತವಾಗಿತ್ತು. ಇದೀಗ ನಮ್ಮ ಸರ್ಕಾರದಲ್ಲಿ ಕಾಮಗಾರಿ ನಡೆಯುತ್ತಿದೆ. ಎಲ್ಲರೂ ನಮ್ಮ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದರು.ರಘು ಮೂರ್ತಿ ಮಾತಾಡಿ, ಎಂಟು ವಿಧಾನ ಕ್ಷೇತ್ರಗಳಲ್ಲಿ ಏಳು ಶಾಸಕರಿದ್ದೇವೆ, ನಾವು ಮತ್ತು ಆಂಜನೇಯ ಅವರು ಸೇರಿ ಹೆಚ್ಚಿನ ಮತ ಹಾಕಿಸಿ ಗೆಲ್ಲಿಸುತ್ತೇವೆ. ಕೇಂದ್ರದಿಂದ ಅನ್ಯಾಯವಾಗುತ್ತಿದೆ. ಎನ್ ಡಿ ಆರ್ ಎಫ್ ಅನುದಾನ ಬಿಡುಗಡೆಯಾಗಿಲ್ಲ. ದೆಹಲಿಯಲ್ಲಿ‌ ಇದರ ಬಗ್ಗೆ ಪ್ರತಿಭಟನೆ ಮಾಡಿದ್ದೇವೆ. ಆದರೂ ಹಣ ಬಿಡುಗಡೆ ಮಾಡುತ್ತಿಲ್ಲ. ಆದರೂ ರೈತರಿಗೆ ಹಣ, ವೇದಾವತಿ ನದಿಗೆ ನೀರು ಬಿಡುಗಡೆಯಾಗುತ್ತಿದೆ. ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಿಸುವ ಕೆಲಸ ಮಾಡುತ್ತಿದ್ದೇವೆ. ಎಂಟು ಕ್ಷೇತ್ರದ ಮತದಾರರು ಕೈ ಹಿಡಿದು ಗೆಲ್ಲಿಸುತ್ತಾರೆ ಎಂದರು.
ಹೊಸದುರ್ಗ ಶಾಸಕ ಗೋವಿಂದಪ್ಪ ಮಾತಾಡಿ, ಎಲ್ಲರೂ ಕೂಡ ಶ್ರಮ‌ ಹಾಕಿ ಪಕ್ಷದ ಹಾಗೂ ಚಂದ್ರಪ್ಪಗೆ ಗೆಲುವು ತರುತ್ತೇವೆ ಎಂದರು. ಪ್ರಚಾರವಿಲ್ಲದೆ ಕಾಂಗ್ರೆಸ್ ಸೋಲುತ್ತಿದೆಂಬ ಆರೋಪವಿದ್ದು, ಪ್ರಚಾರ ಹೆಚ್ಚು ಮಾಡುವ ಮೂಲಕ ಗೆಲ್ಲಿಸುತ್ತೇವೆ. ಈ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್, ಕಾರ್ಮಿಕ ಕಲ್ಯಾಣ ನಿಗಮದ ಉಪಾಧ್ಯಕ್ಷ ಬಿಎನ್ ಚಂದ್ರಪ್ಪ, ಮಾಜಿ ಸಚಿವ ಹೆಚ್. ಆಂಜನೇಯ, ಶಾಸಕರುಗಳಾದ ರಘು ಮೂರ್ತಿ, ಗೋವಿಂದಪ್ಪ, ಇತರರಿದ್ದರು.

Leave a Reply

Your email address will not be published. Required fields are marked *