ಹೊಳಲ್ಕೆರೆ ಶಾಸಕ ಚಂದ್ರಪ್ಪ, ಮಾಜಿ ಸಂಸದ ಚಂದ್ರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಎಂಎಲ್ ಸಿ ನವೀನ್

ರಾಜ್ಯ

ಕಾಂಗ್ರೆಸ್  ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಯಾರಿಂದ ಸಂವಿಧಾನಕ್ಕೆ ಅಪತ್ತಿದೆ ಎಂದು ಹೇಳಬೇಕು

ಹೊಳಲ್ಕೆರೆ ಶಾಸಕ  ಚಂದ್ರಪ್ಪ  ಯಡಿಯೂರಪ್ಪ ಕುತ್ತಿಗೆ ಕೊಯ್ದರು ಎಂದಿದ್ದು ಸರಿಯಲ್ಲ

ರಘುಚಂದನ್ ಕಳ್ಳಿ‌ನರಸಪ್ಪ‌ ಪದ ಬಳಕೆ ಸರಿಯಲ್ಲ

 

 

 

 

ಕಾಂಗ್ರೆಸ್ ಅಭ್ಯರ್ಥಿ ಸಂವಿಧಾನಕ್ಕೆ ಅಪತ್ತು ಬಂದಿದೆ ಅದಕ್ಕೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಎಂದು ಹೇಳುತ್ತಾ ಮತಯಾಚನೆ ಮಾಡುತ್ತಿದ್ದಾರೆ.ಇದು ಕಳೆದ ಹತ್ತು ವರ್ಷಗಳಲ್ಲಿ ಅಪತ್ತು ಬಂದಿದೆಯೋ ಅಥವ ನೆಹರು ಕಾಲದಿಂದ ಆಡಳಿತ ನಡೆಸಿಕೊಂಡು ಬಂದ ಕಾಂಗ್ರೆಸ್ ನಿಂದ ಅಪತ್ತು ಬಂದಿದೆಯೋ ಎಂದು ಮೊದಲು ತಿಳಿಯಬೇಕೆಂದು ವಿಧಾನ ಪರಿಷತ್ ಸದಸ್ಯ ಕೆ ಎಸ್ ನವೀನ್ ಪ್ರಶ್ನೆ ಮಾಡಿದರು.
ಅವರು ಚಿತ್ರದುರ್ಗದಲ್ಲಿ ಮಾತಾಡಿದರು. ಚುನಾವಣೆ ಗೆಲ್ಲಲು ಅಪತ್ತು ಬಂದಿದೆ ಎಂದು ಪ್ರಚಾರ ಮಾಡುತ್ತಿದ್ದೀರಿ, ನೆಹರು ಪ್ರಧಾನಿಯಾದಾಗ ರಾಜ್ಯದ ಎಲ್ಲಾ ಸಿಎಂಗಳಿಗೆ ಮೀಸಲಾತಿ ತೆಗೆದು ಹಾಕುವ ಬಗ್ಗೆ ಅಬಿಪ್ರಾಯ ತಿಳಿಸಲು ಪತ್ರ ಬರೆದಿದ್ದರು. ಇಂತಹ ಸುಳ್ಳು ಮತ್ತು ಅಪಪ್ರಚಾರ ಮಾಡುತ್ತೀರಿ, ಇದನ್ನು ಕೂಡಲೇ ನಿಲ್ಲಿಸಬೇಕು. ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವನ್ನು ಪ್ರಚಾರದಲ್ಲಿ ತಿಳಿಸುವ ಕೆಲಸ ಮಾಡುತ್ತೇವೆ. ಮತಗಳ ಆಸೆಗಾಗಿ ಸುಳ್ಳು ಪ್ರಚಾರವನ್ನು‌ನಾವು ಖಂಡಿಸುತ್ತೇವೆ. ಸಿದ್ದರಾಮಯ್ಯ ಶೋಷಿತ ವರ್ಗಗಳ ಸಮಾವೇಶದಲ್ಲಿ ಮಾಡಿ‌ ನಂತರ ಅಲ್ಪ ಸಂಖ್ಯಾತರಿಗೆ ಹಣ ಬಿಡುಗಡೆ ಮಾಡುತ್ತಾರೆ. ಹೆಜ್ಜೆ ಹೆಜ್ಜೆಗೂ ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷ ಎಸ್ಸಿಗಳನ್ನು ದಮನ ಮಾಡುವ ಕೆಲಸ ಮಾಡುತ್ತಿದೆ.‌ಇದರ ಕರಾಳ ಮುಖವನ್ನು ಬಯಲು ಮಾಡುತ್ತೇವೆ.ಎಸ್ಸಿಗಳಿಗೆ ಆಗುತ್ತಿರುವ ಅನ್ಯಾಯವನ್ನು ತಾಕಿದ್ದರೆ ಮಾತಾಡಿ ಸರಿಪಡಿಸಿ ಎಂದು ಎಚ್ಚರಿಕೆ ನೀಡಿದರು.

ಇನ್ನು ಚಂದ್ರಪ್ಪ ಅವರ ಪುತ್ರ ರಘು ಚಂದನ್ ಗೆ ಟಿಕೆಟ್ ತಪ್ಪಿಸಿದ್ದಾರೆಂದು ಹೇಳುತ್ತಾರೆ. ಇದು ಸಮಾಜಿಕ‌ ನ್ಯಾಯದಡಿಯಲ್ಲಿ ಹಂಚಿಕೆಯಾಗಿರುತ್ತದೆ. ಇಲ್ಲಿ‌ಯಾರ ಕೈವಾಡವೂ ಇಲ್ಲ. ಆದರೆ ಬಿಜೆಪಿಯವರೇ ಅಲ್ಲದಿರುವವರು ಮಾಜಿ‌ ಉಪ‌ಮುಖ್ಯ ಮಂತ್ರಿ ಗೋವಿಂದ ಕಾರಜೋಳ ಅವರಿಗೆ ಕಪ್ಪು‌ಬಾವುಟ, ಮಸಿ‌ ಬಳಿಯುವ ಹಾಗು ಮೊಟ್ಟೆ ಹೊಡೆಯುವ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಎಷ್ಟು ಸರಿ ಎಂದು ಪ್ರಶ್ನಿಸಿದರು. ಚಂದ್ರಪ್ಪ ಅವರು ಹಿರಿಯ ನಾಯಕರು ಅವರ ಮೇಲೆ ಗೌರವವಿದೆ. ಆದರೆ ಚಂದ್ರಪ್ಪ ಸ್ವಾಭಿಮಾನಿ ಸಭೆ ನಡೆಸಿದ್ದಾರೆ. ಅಲ್ಲಿ ಸಾವಿರಾರು ಜನರ ಮುಂದೆ ಯಡಿಯೂರಪ್ಪ ಟಿಕೆಟ್ ತಪ್ಪಿಸಿ ಕುತ್ತಿಗೆ ಕೊಯ್ದರು ಎಂದು ಹೇಳುತ್ತಾರೆ. ಯಡಿಯೂರಪ್ಪ, ತಿಪ್ಪಾರೆಡ್ಡಿ ಹಾಗು ನಾನಾಗಲಿ ಟಿಕೆಟ್ ತಪ್ಪಿಸಿಲ್ಲ, ಕಳ್ಳಿನರಸಪ್ಪ ಎಂಬ ಪದ ಬಳಕೆ ಮಾಡುತ್ತಾರೆ. ಇದು ಸರಿಯಲ್ಲ. ನಿಮಗೆ ಟಿಕೆಟ್ ತಪ್ಪಿಸಿದ್ದರೆ ಯಡಿಯೂರಪ್ಪ ಅವರನ್ನು‌ ಕೇಳಬೇಕಿತ್ತು. ಚಂದ್ರಪ್ಪ ಅವರು ಹೊಳಲ್ಕೆರೆಯಲ್ಲಿ ಜಿಪಂ ಸದಸ್ಯರನ್ನು ಗೆಲ್ಲಿಸಿಕೊಂಡಿಲ್ಲ, ಅಭಿವೃದ್ದಿ ನಿಗಮಕ್ಕೆ ನೇಮಕ ಮಾಡಿಸಿಲ್ಲ ಎಂದರು.ಯಾವುದೇ ಬಿಜೆಪಿ ಕಾರ್ಯಕರ್ತರಾಗಲಿ ಮುಖಂಡರಾಗಲಿ ಗೋಬ್ಯಾಕ್ ಎಂಬ ಪದ ಬಳಕೆ ಪ್ರತಿಭಟನೆ ಮಾಡಿದರೆ ಅಂತವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಮುಂದುವರೆದು ಪಕ್ಷದಿಂದ ಉಚ್ಛಾಟನೆ ಮಾಡಲು ಬಹುದು ಎಂದು ಎಚ್ಚರಿಸಿದರು. ಹೊಳಲ್ಕೆರೆ ಕ್ಷೇತ್ರದಲ್ಲಿ ನಿರಂತರವಾಗಿ ಶಾಸಕ ಚಂದ್ರಪ್ಪ ಗೆಲ್ಲಲು ಯಡಿಯೂರಪ್ಪ ಅವರ ಕೃಪಾಶೀರ್ವಾದವಿದೆ. ಇದನ್ನು‌ ಮರೆಯಬಾರದು. ಚಂದ್ರಪ್ಪ ಅವರು ದೃತರಾಷ್ಟ್ರ ಪ್ರೇಮವನ್ನು ಬಿಟ್ಟು ಪಕ್ಷದ ನಿರ್ಣಯವನ್ನು ಒಪ್ಪಿಕೊಳ್ಳಬೇಕು. ಇದು‌ ಮುಂದುವರೆದರೆ ಸರಿಯರಿಲ್ಲ. ಪಕ್ಷ ಸೂಕ್ತ ತೀರ್ಮಾನ ಮಾಡುತ್ತದೆ. ಹೊಳಲ್ಕೆರೆಯಲ್ಲಿ ಇದೇ 12 ರಂದು 50ಸಾವಿರ ಸಂಖ್ಯೆ ಸೇರಿಸಿ ಸಮಾವೇಶವನ್ನು ಮಾಡುತ್ತೇವೆ. ಚಂದ್ರಪ್ಪ ಅವರ ನಡೆಯಿಂದಾಗಿ ಹೊಳಲ್ಕೆರೆ ಕ್ಷೇತ್ರದ ಜನರಿಗೆ ಬಹಳಷ್ಟು ನೋವಾಗಿದೆ ಎಂದರು. ಇಂದು ಚಂದ್ರಪ್ಪ ಶಾಸಕರಾಗಲು ರಾಜಕೀಯ ನೆಲೆ ಕಾಣಲು ಕಾರಣರಾದ ಇಬ್ಬರು ನಾಯಕರಾದ ಬಿ ಟಿ ಚನ್ನಬಸಪ್ಪ ಹಾಗೂ ಯಡಿಯೂರಪ್ಪ‌ ಅವರ  ಫೋಟೋ ಗಳನ್ನು ಮನೆಯಲ್ಲಿ ಹಾಕಿಕೊಳ್ಳಬೇಕು ಎಂದರು.ಈ ಸಮಯದಲ್ಲಿ ಜಿಲ್ಲಾಧ್ಯಕ್ಷ ಮುರುಳಿ, ಮಾಧುರಿ ಗಿರೀಶ್, ಸಿದ್ದಾಪುರ ಸುರೇಶ್, ಸಂಪತ್ ಕುಮಾರ್, ಛಲವಾದಿ ತಿಪ್ಪೇಸ್ವಾಮಿ‌ ಇತರರಿದ್ದರು.

Leave a Reply

Your email address will not be published. Required fields are marked *