ಕೋಟೆ ನಾಡಲ್ಲಿ ವೈದ್ಯರ ನಿರ್ಲಕ್ಷಕ್ಕೆ ನವಜಾತ ಶಿಶು ಸಾವು

ರಾಜ್ಯ

ವೈದ್ಯರ ನಿರ್ಲಕ್ಷದಿಂದಾಗಿ ನವಜಾತ ಶಿಶುವೊಂದು ಮೃತಪಟ್ಟ ಧಾರುಣ ಘಟನೆ ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಯಲ್ಲಿ‌ ನಡೆದಿದೆ.
ದಾವಣಗೆರೆಯ ಹುಚ್ಚವ್ವನಹಳ್ಳಿಯ ಕವಿತಾ ನಾಗರಾಜ್ ದಂಪತಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸಿಕೊಂಡು‌ ನಂತರ ಹೆರಿಗೆಗಾಗಿ ಕವಿತಾ ದಾಖಲಾಗಿದ್ದು, ಅವರಿಗೆ ಕಳೆದ ಮೂರು‌ ದಿನಗಳ ಹಿಂದೆ ಹೆರಿಗೆಯನ್ನು ಡಾ. ಪವಿತ್ರ ಮಾಡಿಸಿದ್ದು, ಮಗು ಆರೋಗ್ಯವಾಗಿದೆ.‌ಆದರೆ ಅಂದಿನಿಂದ ಮೂರು ದಿನಗಳು‌ ಕಳೆದರೂ ಕೂಡ ಕರ್ತವ್ಯ ನಿರತ ಮಕ್ಕಳ‌ ವೈದ್ಯರಾಗಲಿ ಅಥವ ಯಾವುದೇ ಬೇರೆ ಮಕ್ಕಳ‌ ವೈದ್ಯರಾಗಲಿ ಬಂದು‌ ನೋಡಿಲ್ಲ.‌ ಆದರೆ ಮಗುವನ್ನು ತೋರಿಸಲು ರಾತ್ರಿ ವೇಳೆಯಲ್ಲಿ ವೈದ್ಯರಿದ್ದಲ್ಲಿಯೇ ಕರೆದುಕೊಂಡು ಹೋಗುವಂತಹ ಸ್ಥಿತಿ ಇದೆ. ಪೋಷಕರು ವೈದ್ಯರಿಗಾಗಿ ತಡಕಾಡಿದರೂ ಸಕಾಲದಲ್ಲಿ ವೈದ್ಯರು ಸಿಕ್ಕಿಲ್ಲ. ಇದರಿಂದ ಮಗುವು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಆಗಮಿಸಿದ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ರವೀಂದ್ರ ಅವರು ವೈದ್ಯರ ಸಭೆ ನಡೆಸಿದ್ದು, ಕಾರಣ ಕೇಳಿದ್ದು, ನಮ್ಮ ಕಡೆಯಿಂದ ತಪ್ಪಾಗಿದೆ , ನಿರ್ಲಕ್ಷ ಮಾಡಿರುವ ಹಾಗೂ ಅಂದಿನಿಂದ ಮೂರು ದಿನಗಳ ಕಾಲ ಯಾವ ಯಾವ ವೈದ್ಯರು ಕರ್ತವ್ಯದಲ್ಲಿದ್ದರು ಅವರ ಮೇಲೆ ಶಿಸ್ತು ಕ್ರಮಕ್ಕೆ ಆರೋಗ್ಯ ಇಲಾಖೆಯ ಆಯುಕ್ತರಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಭರವಸೆ ನೀಡಿದರು.

 

 

 

Leave a Reply

Your email address will not be published. Required fields are marked *