ಚಿತ್ರದುರ್ಗ ಜಿಲ್ಲಾ ನೀರಾವರಿ ಅನುಷ್ಟಾನ ಹೋರಾಟ ಸಮಿತಿ ಬಂದ್ ಗೆ ವ್ಯಾಪಕ ಬೆಂಬಲ

ಜಿಲ್ಲಾ ಸುದ್ದಿ

ಜಿಲ್ಲಾ ನೀರಾವರಿ ಅನುಷ್ಟಾನ ಹೋರಾಟ ಸಮಿತಿ ಬಂದ್ ಗೆ ವ್ಯಾಪಕ ಬೆಂಬಲ

ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭ್ರದಾ ಮೇಲ್ದಂಡೆ ಯೋಜನೆ ಶೀಘ್ರ ಕಾರ್ಯಾನುಷ್ಠಾನಕ್ಕೆ ಆಗ್ರಹಿಸಿ ಜಿಲ್ಲಾ ನೀರಾವರಿ ಅನುಷ್ಟಾನ ಹೋರಾಟ ಸಮಿತಿ ಮಂಗಳವಾರ ಕರೆ ನೀಡಿರುವ ಚಿತ್ರದುರ್ಗ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

 

 

 

ಸಮಿತಿಯ ಕಾರ್ಯಾಧ್ಯಕ್ಷ ಬಿ ಎ ಲಿಂಗಾ ರೆಡ್ಡಿ ಅಧ್ಯಕ್ಷೆತೆಯಲ್ಲಿ ಸೋಮವಾರ ನಡೆದ ಬಂದ್ ಪೂರ್ವಾ ಸಿದ್ದತಾ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಆಗಮಿಸಿ ಪೂರ್ಣ ಪ್ರಮಾಣದ ಬೆಂಬಲ ಘೋಷಿಸಿದರು. ಚಿತ್ರದುರ್ಗದ ಎಲ್ಲಾ ಶಾಲಾ ಕಾಲೇಜ್ ಗಳು ಬಂದ್ ಗೆ ನೈತಿಕ ಬೆಂಬಲ ಸೂಚಿಸಿವೆ. ಬಸ್ ಆಟೋ ಟ್ಯಾಕ್ಸಿ ಸಂಚಾರ ಪೂರ್ಣ ಬಂದ್ ಆಗುವ ಹಿನ್ನೆಲೆಯಲ್ಲಿ ಶಾಲೆಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ತೊಂದರೆ ಆಗುವ ಸಾಧ್ಯತೆ ಇರುವ ಕಾರಣಕ್ಕೆ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಚಿತ್ರದುರ್ಗ, ಆಟೋ ಚಾಲಕರು, ಲಘು ವಾಹನ ಚಾಲಕರು, ಸಿನಿಮಾ ಮಂದಿರದ ಮಾಲೀಕರು ಗಾರ್ಮೆಂಟ್ಸ್, ವಾಹನ ಶೋ ರೂಂ, ಬಟ್ಟೆ ಅಂಗಡಿಗಳು, ಬಂಗಾರದ ವ್ಯಾಪಾರಿಗಳು, ಚಿತ್ರದುರ್ಗ ಜಿಲ್ಲಾ ಕಾರ್ಯನಿರತ. ಪತ್ರಿಕಾ ಹಂಚಿಕೆದಾರರ ವಿತರಕರ ಸಂಘ, ಬೀದಿ ಬದಿ ವ್ಯಾಪಾರಿಗಳು ಎಪಿಎಂಸಿ‌ ವರ್ತಕರು ಹಮಾಲರು, ಕನ್ನಡ ಪರ ಸಂಘಟನೆಗಳು, ಕಟ್ಟಡ ಕಾರ್ಮಿಕ ಸಂಘಟನೆಗಳು, ಟೈಲ್ಸ್ ಮತ್ತು ಗ್ರಾನೈಟ್ ಸಂಘಟನೆ ಮುಖ್ಯಸ್ಥರು ಹಾಗೂ ಹೊಟೇಲ್ ಮಾಲೀಕರು ಸಭೆಗೆ ಆಗಮಿಸಿ ‌ ಬೆಂಬಲ ಸೂಚಿಸಿದರು,ಖಾಸಗಿ ಮತ್ತು ರಾಜ್ಯ ಸಾರಿಗೆ ಬಸ್ ಗಳು ಊರೊಳಗೆ ಪ್ರವೇಶಿಸದೆ ಹೊರಗೆ ಸಂಚರಿಸುವುದಾಗಿ ಹೋರಾಟ ಸಮಿತಿ ಮುಖಂಡರಿಗೆ ಸ್ಪಷ್ಟಪಡಿಸಿದ್ದಾರೆ. ಏತನ್ಮಧ್ಯೆ ಕೆಪಿಸಿಸಿ‌ ಕಾರ್ಯಾಧ್ಯಕ್ಷ ಬಿ ಎನ್ ಚಂದ್ರಪ್ಪ, ಶಾಸಕ ಟಿ. ರಘುಮೂರ್ತಿ , ಮಾಜಿ ಸಚಿವ ಹೆಚ್. ಆಂಜನೇಯ, ಕೆಪಿಸಿಸಿ ಅಸಂಘಟಿತ ಕಾರ್ಯಾಧ್ಯಕ್ಷ ಜಿಎಸ್ ಮಂಜುನಾಥ್, ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.
ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಬಂದ್ ಕರೆ ನೀಡಲಾಗಿದೆ.ಮಧ್ಯಾಹ್ನ 3 ಗಂಟೆಗೆ ಗಾಂಧಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಜಿಲ್ಲಾಧಿಕಾರಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಕಚೇರಿ ಮುಂಭಾಗ ಪ್ರತಿಭಟನಾ ಸಭೆ ನಡೆಯಲಿದೆ.

ಸಭೆಯಲ್ಲಿ ನವೋದಯ ಕರ್ನಾಟಕ ಅಧ್ಯಕ್ಷ ಜೆ. ಯಾದವರೆಡ್ಡಿ, ದಯಾನಂದ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಖಜಾಂಚಿ, ಡಿ.ಕುಮಾರಸ್ವಾಮಿ ವಕ್ಪ್ ಬೋರ್ಡ್ ರಾಜ್ಯ ಅಧ್ಯಕ್ಷ ಸೈಯದ್ ಅನ್ವರ್, ಕರುನಾಡ ವಿಜಯ ಸೇನೆ ಜಿಲ್ಲಾಧ್ಯಕ್ಷ ,ಕೆ.ಟಿ.ಶಿವಕುಮಾರ್, ರಕ್ಷಣಾ ವೇದಿಕೆ ರಮೇಶ್, ಕಟ್ಟಡ ಕಾರ್ಮಿಕ ಸಂಘದ ಕುಮಾರ್ ಇದ್ದರು.

Leave a Reply

Your email address will not be published. Required fields are marked *