ಚಿತ್ರದುರ್ಗ ಜಿಲ್ಲೆಯ ಏಕೈಕ ಜಲಾಶಯ ಜೀವನಾಡಿ ಎಂದೇ ಹೇಳಬಹುದಾದ ವಾಣಿವಿಲಾಸ ಜಲಾಶಯ ಭರ್ತಿಯಾಗಿ ಕೋಡಿ ಬೀಳಲು ಕ್ಷಣ ಗಣನೆ ಆರಂಭವಾಗಿದೆ.
ಈಗಾಗಲೇ ಜಲಾಶಯದಲ್ಲಿ ನೀರಿನಮಟ್ಟ 128.20 ಅಡಿ ಸಂಗ್ರಹವಾಗಿದೆ. ಇತಿಹಾಸ ನಿರ್ಮಿಸಲು ಕೇವಲ 1.80 ಅಡಿ ನೀರು ಮಾತ್ರ ಬೇಕಾಗಿದೆ. ಈಗಿನ ಒಳಹರಿವು 631 ಕ್ಯೂಸೆಕ್ಸ್ ಇದ್ದು, ಭರ್ತಿಯಾಗಿ ಕೋಡಿ ಬೀಳಲು ಸಜ್ಜುಗೊಂಡಿದೆ