ಜಿಲ್ಲಾ ಸುದ್ದಿ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ
ಹೆಬ್ಬಟ್ ರಾಮಕ್ಕ ತಂಡಕ್ಕೆ ಅಭಿನಂದನೆ

ಬೆಂಗಳೂರು:ಕನ್ನಡ ಚಿತ್ರ ರಂಗಕ್ಕೆ ಸದಭಿರುಚಿಯ ಉತ್ತಮ ಚಿತ್ರಗಳನ್ನು ನೀಡಲು ಮತ್ತಷ್ಟು ಪ್ರೊತ್ಸಾಹ ಅಗತ್ಯ ಎಂದು ಚಿತ್ರ ನಟಿ‌ ತಾರಾ ಅನುರಾಧ ಹೇಳಿದ್ದಾರೆ.

Chitradurga Hebbettu ramakka with kuwj

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರಿಗಾಗಿ ಏರ್ಪಡಿಸಿದ್ದ ಹೆಬ್ಬಟ್ ರಾಮಕ್ಕ ಚಿತ್ರ ಪ್ರದರ್ಶನ ಸಂದರ್ಭದಲ್ಲಿ
ಸನ್ಮಾನಿತರಾಗಿ ಮಾತನಾಡಿದರು.

ಚಿತ್ರ ನಿರ್ದೇಶಕ ಸಾಲಗಾಮೆ ನಂಜುಂಡೇಗೌಡ ಮಾತನಾಡಿ, ಪಂಚಾಯತ್ ರಾಜ್ ಚುನಾವಣೆ ಸಂದರ್ಭದಲ್ಲಿ ಈ ಚಿತ್ರ ಹೆಚ್ಚು ಪ್ರಸ್ತುವಾಗಿದೆ. ಸಾಮಾಜಿಕ ಬದಲಾವಣೆ ತರಬೇಕು ಎನ್ನುವ ನಿಟ್ಟಿನಲ್ಲಿ ಪರಿಣಾಮಕಾರಿ ಚಿತ್ರ ನೀಡುವ ಪ್ರಯತ್ನ ಮಾಡಿದ್ದೇವೆ ಎಂದರು.

ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್ ಐನಕೈ ಮಾತನಾಡಿ, ಚಿತ್ರಮಂದಿರಗಳಿಗೆ ಮತ್ತೆ ಜನರು ಬರುವಂತಾಗಲು ಈ ರೀತಿಯ ಸದಭಿರುಚಿಯ ಚಿತ್ರಗಳು ಬೇಕು. ಹಿಂದಿನ ಚಿತ್ರ ಪರಂಪರೆ ಮುಂದುವರಿಯಬೇಕು ಎಂದರು.

 

 

 

ವಿಜಯ ಕರ್ನಾಟಕ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಮಾತನಾಡಿ, ಬದಲಾವಣೆಗೆ ತುಡಿತ ತರುವ, ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಚಿತ್ರರಂಗದ ಪಾತ್ರ ಮಹತ್ವದ್ದು. ಹೆಬ್ಬಟ್ ರಾಮಕ್ಕ ಈ ನಿಟ್ಟಿನಲ್ಲಿ ಉತ್ತಮ ಚಿತ್ರ ಎಂದರು.

ವಿಜಯವಾಣಿ ಸಂಪಾದಕರಾದ ಕೆ.ಎನ್.ಚನ್ನೇಗೌಡ ಮಾತನಾಡಿ, ಹೆಬ್ಬಟ್ ರಾಮಕ್ಕ ಚಿತ್ರ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಇದರ ಭಾಗ 2 ಚಿತ್ರವನ್ನು ಮಾಡುವ ನಿಟ್ಟಿನಲ್ಲಿ ಚಿತ್ರ ತಂಡ ಪ್ರಯತ್ನಿಸಲಿ ಎಂದರು.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ‌ ಶಿವಾನಂದ ತಗಡೂರು ಮಾತನಾಡಿ, ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಪರಿಣಾಮ ಬೀರುವ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಪತ್ರಕರ್ತರಿಗಾಗಿ ಈ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಹೇಳಿದರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ನಟಿ ತಾರಾ ಅನೂರಾಧ, ನಿರ್ದೇಶಕ ಸಾಲಗಾಮೆ ನಂಜುಂಡೇಗೌಡ, ಚಿತ್ರ ನಿರ್ಮಾಪಕರಾದ ಪುಟ್ಟರಾಜು, ಕವಿತಾ ರಾಜು ಅವರನ್ನು ಸನ್ಮಾನಿಸಲಾಯಿತು.

ಹೊಸ ದಿಗಂತ ಸಂಪಾದಕ ವಿನಾಯಕ ಭಟ್, ಡೆಕ್ಕನ್ ಹೆರಾಲ್ಡ್ ಡೆಪ್ಯುಟಿ ಎಡಿಟರ್ ಬಿ.ಎಸ್.ಅರುಣ್,
IFWJ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜನಯ್ಯ, ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ‌ದೇವರಾಜು ಹಾಜರಿದ್ದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *