ಮಂಗಳೂರಿನ ಪ್ರವೀಣ್ ನೆಟ್ಟಾರು ಹತ್ಯೆಯೂ ಮುಸ್ಲಿಂ ಗೂಂಡಾಗಳಿಂದ ನಡೆದಿರುವ ದುಷ್ಕೃತ್ಯವಾಗಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಆರೋಪಿಸಿದರು.
ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಅವರು ಅವರ ಮಾನಸಿಕ ಸ್ಥಿತಿಯನ್ನು ಬದಲಾಯಿಸಿಕೊಂಡಿಲ್ಲ, ಹೇಡಿಗಳ ರೀತಿ ಹತ್ಯೆ ಮಾಡಿದ್ದಾರೆ, ಇದೇ ರೀತಿ ಹರ್ಷನ ಕೊಲೆ ಮಾಡಿದ್ದರು, ಮುಸ್ಲಿಂ ಸಮೂದಾಯದ ಮುಖಂಡರು ಗೂಂಡಾಗಳಿಗೆ ತಿಳಿ ಹೇಳಬೇಕು, ಇಡಿ ರಾಜ್ಯದ ಶಾಂತಿ ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ನಾನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆ ಮಾತನಾಡಿದ್ದೇನೆ. ಕರ್ನಾಟಕ ಶಾಂತಿ ಪ್ರಿಯ ರಾಜ್ಯವಾಗಿದ್ದು, ಕಗ್ಗೊಲೆ ನಡೆಯುತ್ತಿದೆ. ಇದರ ಸೂಕ್ತ ಕ್ರಮದ ಬಗ್ಗೆ ಚಿಂತನೆ ನಡೆಯುತ್ತಿದೆ. ಸಿಟ್ಟಿನ ಕೈಯಲ್ಲಿ ನಮ್ಮತನವನ್ನು ಕೊಟ್ಟು ರಾಜೀನಾಮೆ ನೀಡಿದರೆ ಅದು ತಪ್ಪಾಗುತ್ತದೆ. ಸರ್ಕಾರದ ವಿರುದ್ಧ ರಾಜೀನಾಮೆ ಎಂದು ವಿಪಕ್ಷಗಳು ಮಾತನಾಡಲು ದಾರಿ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಅಧ್ಯಕ್ಷ ಕಟೀಲ್ ಬಳಿ ಮಾನಾಡಿದಾಗ ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದೂ ಸಮಾಜ ಹೊಡೆತ ಕೊಟ್ಟರೆ ರಾಜ್ಯದಲ್ಲಿ ರಕ್ತದೊಕುಳಿ ನಡೆಯುತ್ತದೆ. ಹಿಂದು ಸಮಾಜ ಯಾವತ್ತೂ ಹಾಗೆ ನಡೆದುಕೊಂಡಿಲ್ಲ, ಬಹಳಸೌಹಾರ್ದತೆಯಿಂದ ನಡೆದುಕೊಳ್ಳುತ್ತಿದೆ. ರಾಜೀನಾಮೆ ಕೊಟ್ಟರೆ ಇನ್ನು ಪ್ರಭುದ್ದತೆಗೆ ಬಂದಿಲ್ಲ ಎಂದು ಆಗುತ್ತದೆ.ಆದ್ದರಿಂದ ರಾಜೀನಾಮೆ ನೀಡಬಾರದು ಎಂದರು.