ಮಾನವ ಅಂತರಂಗದಿಂದಲೂ ಶುದ್ಧಿಯಾಗಿರಬೇಕು

ಜಿಲ್ಲಾ ಸುದ್ದಿ

ಮಾನವ ಬರಿ ಬಾಹ್ಯದಿಂದ ಮಾತ್ರ ಶುದ್ದಿಯಾಗಿರದೇ ಸಾಲದು ಅಂತರಂಗದಿಂದಲೂ ಶುದ್ದಿಯಾಗಿರಬೇಕಿದೆ. ಇದರಿಂದ ಉತ್ತಮವಾದ ಸಂಸ್ಕಾರವನ್ನು ಪಡೆಯುವ ಅಗತ್ಯ ಇದೆ ಎಂದು ಸಾಣೆಹಳ್ಳಿಯ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ತಿಳಿಸಿದರು.
ನಗರದ ಶ್ರೀ ಕಬೀರಾನಂದಾಶ್ರಮದವತಿಯಿಂದ ನಡೆಯುವ ಶಿವನಾಮ ಸಪ್ತಾಹದ ಅಂಗವಾಗಿ 93ನೇ ಮಹಾ ಶಿವರಾತ್ರಿ ಮಹೋತ್ಸವ 2023ರ ಮೂರನೇ ದಿನದ ಸಾನಿದ್ಯವನ್ನು ವಹಿಸಿ ಮಾತನಾಡಿ, ಮಾನವ ಶಾಂತಿ,ಸಹನೆ, ತಾಳ್ಮೆಯಿಂದ ಬದುಕನ್ನು ನಡೆಸಬೇಕಿದೆ. ಮಾನವನಿಗೆ ಸಂಸ್ಕಾರವನ್ನು ನೀಡಿದರೆ ಅವನು ಮಹಾದೇವನಾಗುತ್ತಾನೆ. ನಿಮ್ಮ ಸ್ವಭಾವಗಳು ಪರಿವರ್ತನೆಯಾದಾಗ ಉತ್ತಮ ವ್ಯಕ್ತಿಗಳಾಗಲು ಸಾಧ್ಯವಿದೆ. ಭಗವಂತ ಬಾಹ್ಯ ಮೂರ್ತಿಗಳಲ್ಲಿ ಇಲ್ಲ ಆತನು ನಮ್ಮ ಅಂತರಂಗದಲ್ಲಿಯೇ ಇದ್ದಾನೆ. ಭಗವಂತ ಜಡವಾದ ವಸ್ತುವಲ್ಲ ಆತನಿಗ ಚೈತನ್ಯಯಿದೆ ಅರಿವುಯಿದೆ ಆನಂದಯಿದೆ ಆದರೆ ನೀವು ನೋಡುವ ಯಾವುದೇ ದೇವರಿಗೆ ಅರಿವು ಇಲ್ಲ, ಚೈತನ್ಯ ಇಲ್ಲ ಆನಂದ ಇಲ್ಲವಾಗಿದೆ. ದೇವರನ್ನು ಸಹಾ ರಿಚಾರ್ಜ ಮಾಡುವ ಅಗತ್ಯ ಇದೆ, ಮಾನವ ಮಹಾದೇವ ಬೇರೆ ಅಲ್ಲವೇ ಅಲ್ಲ ಮನವ ಸಹಾ ಶ್ರೇಷ್ಠವಾದವರು ಯಾವಾಗ ಎಂದರೆ ನಿಮ್ಮ ಸ್ವಬಾವ ಪರಿವರ್ತನೆ ಮಾಡುತ್ತಾ ಹೊಂದಾಗ ಮಾತ್ರ ಎಂದರು.
ಮಾನವನಿಗೆ ವಿಘ್ನಗಳು ಬರುತ್ತವೆ ಇದರಿಂದ ತಾಳ್ಮೆಯನ್ನು ಕಳೆದು ಕೊಳ್ಳಬಾರದು. ಜೀವನದಲ್ಲಿ ಒಳ್ಳೆಯರ ಬಡನಾಟವನ್ನು ಇಟ್ಟುಕೊಂಡಿರಬೇಕಿದೆ. ಇದರಿಂದ ಉತ್ತಮವಾದ ಬದುಕನ್ನು ನಡೆಸಲು ಸಾಧ್ಯವಿದೆ. ಶಿವರಾತ್ರಿ ಎಂದರೆ ಒಂದು ದಿನ ಮಾತ್ರ ಶಿವನಾಮ ಸ್ಮರಣೆಯನ್ನು ಮಾಡುವುದಲ್ಲ ಪ್ರತಿ ದಿನವೂ ಸಹಾ ಶಿವನಾಮ ಸ್ಮರಣೆಯನ್ನು ಮಾಡಬೇಕಿದೆ. ಉಸಿರಾಟದಲ್ಲೂ ಸಹಾ ಶಿವ ಸ್ಮರಣೆ ಇರಬೇಕಿದೆ. ಶಿವಲಿಂಗಾನಂದ ಶ್ರೀಗಳು ಸಂಸ್ಕಾರವನ್ನು ನೀಡುತ್ತಾ ಬಂದಿದ್ದಾರೆ ಈ ಸಂಸ್ಕಾರವನ್ನು ಉಪಯೋಗ ಮಾಡಿಕೊಂಡರೆ ಉತ್ತಮವಾದ ಜೀವನವನ್ನು ಸಾಗಿಸಲು ಸಾಧ್ಯವಿದೆ ಎಂದು ಪಂಡಿತಾರಾಧ್ಯ ಶ್ರೀಗಳು ತಿಳಿಸಿದರು.
ಸೊಲ್ಲಾಪುರದ ಶ್ರೀ ರಾಮಚಂದ್ರಣ್ಣ ಮೇತ್ರೇ ತಮ್ಮ ಆರ್ಶೀವಚನದಲ್ಲಿ ಮಾನವನಿಗೆ ಭಗವಂತ ಹೃದಯವನ್ನು ನೀಡಿದ್ಧಾನೆ. ಇದರಿಂದ ಪ್ರೀತಿ, ಪ್ರೇಮದಿಂದ ಇರಲು ಸಾಧ್ಯವಿದೆ. ಪ್ರೇಮದಿಂದ ಪರಮಾತ್ಮ ಪ್ರಾಪ್ತಿಯಾಗಲು ಸಾಧ್ಯವಿದೆ. ಯಾವುದೇ ಸುಖ ಸಂತೋಷಗಳಿಗೆ ಭಗವಂತ ಒಲಿಯುವುದಿಲ್ಲ ಇದರ ಬದಲಿಗೆ ಸಾಮಾನ್ಯ ವ್ಯಕ್ತಿಯ ಭಕ್ತಿಗೆ ಒಲಿಯುತ್ತಾನೆ, ಜೀವನಕ್ಕೆ ಗುರುವಿನ ಅಗತ್ಯ ಇದೆ. ಪರಮಾತ್ಮನ ದರ್ಶನ ಪ್ರೇಮದಿಂದ ಮಾತ್ರ ಪಡೆಯಲು ಸಾಧ್ಯವಿದೆ. ತತ್ವಜ್ಞಾನಿ ಗುರುವಿನ ಸಂಸ್ಕಾರದ ಅವಶ್ಯಕತೆ ಇದೆ. ಇಲ್ಲವಾದಲ್ಲಿ ಜೀವನ ವ್ಯರ್ಥವಾಗುತ್ತದೆ. ಮಾನವ ಜೀವನದಲ್ಲಿ ಗುರುವಿಗೆ ಪ್ರಮುಖವಾದ ಸ್ಥಾನವನ್ನು ನೀಡಬೇಕಿದೆ. ಸತ್ ಪುರುಷರ ಸಂಘದಿಂದ ಜೀವನ ಸಂತೋಷವಾಗಿರಲು ಸಾಧ್ಯವಿದೆ ಎಂದರು.
ಸೊಲ್ಲಾಪುರದ ಶ್ರೀ ಗುರುನಾಥ್ ಮಹಾರಾಜ್ ಮಾತನಾಡಿ, ಶಿವರಾತ್ರಿ ಮತ್ತು ನವರಾತ್ರಿಗಳು ಮಾನವನಿಗೆ ಪವಿತ್ರವಾದ ರಾತ್ರಿಗಳಾಗಿವೆ. ನರ ಜನ್ಮ ಶ್ರೇಷ್ಠವಾಗಿz. ಬದುಕಿನಲ್ಲಿ ಮಾರ್ಗದರ್ಶಕರಾಗಿ ಗುರುಗಳ ಅಗತ್ಯ ಇದೆ. ಗುರುವಿಲ್ಲದ ಜೀವನ ವ್ಯರ್ಥವಾಗುತ್ತದೆ. ಮಾನವ ಬದುಕಿಗೆ ಮುಕ್ತಿಯ್ನನು ಕರುಣಿಸುವುದು ಗುರುವಿನ ಕೆಲಸವಾಗಿದೆ. ಪಶು ಪಕ್ಷಗಳಿಗೆ ಮಾನವನ ಬದಕು ಇಲ್ಲವಾಗಿದೆ ಅದೇ ರೀತ ದೇವತೆಗಳಿಗೂ ಸಹಾ ಮಾನವನ ಬದುಕು ಇಲ್ಲವಾಗಿದೆ ನಮಗೆ ಸಿಕ್ಕಿರುವ ಮಾನವ ಬದುಕನ್ನು ಉತ್ತಮ ಪಡಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಚಳ್ಳಕೆರೆಯ ಶ್ರೀಸದ್ಗುರು ನರಹರಿ ಪೀಠದ ಸದ್ಗುರು ಶ್ರೀ ರಾಜಾರಾಮ ಶ್ರೀಗಳು ಸೊಲ್ಲಾಪುರದ ಶ್ರೀ ರಾಮಚಂದ್ರಣ್ಣ ಮೇತ್ರೇ, ಸಂಗದರಿಯ ಶ್ರೀ ಗುರುನಾಥ್ ಮಹಾರಾಜ್ ಬಾಗಲಕೋಟೆಯ ಶ್ರೀ ಕೌದಿಶ್ವರ ಮಹಾಸಂಸ್ಥಾನದ ಶ್ರೀ ಮಾಧವಾನಂದ ಶ್ರೀಗಳು ಸಾನಿಧ್ಯವಹಿಸಿದ್ದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಭೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು, ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಂಸದರಾದ ಜನಾರ್ಧನ ಸ್ವಾಮಿ, ನಗರಸಭಾ ಸದಸ್ಯರಾದ ಶಶಿಧರ್, ನಾಮ ನಿರ್ದೇಶನ ಸದಸ್ಯರಾದ ನಾಗರಾಜ್, ರಮೇಶ್ ಆಚಾರ್, ಕೃಷ್ಣಮೂರ್ತಿ, ಡಿಸಿಸಿ ಅಧ್ಯಕ್ಷರಾದ ತಾಜ್‍ಪೀರ್, ಮದಕರಿ ನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಸಂದೀಪ್ 93ನೇ ಶಿವನಾಮ ಸಪ್ತಾಹದ ಸಮಿತಿಯ ಅಧ್ಯಕ್ಷರಾಧ ಅನಿತ್ ಕುಮಾರ್, ಸಿದ್ದೇಶ್ ಯಾದವ್, ಶ್ರೀಮತಿ ಆಶಾ ರಘುಆಚಾರ್ ಭಾಗವಹಿಸಿದ್ದರು.
ಜೀಕನ್ನಡ ವಾಹಿನಿಯ ಸರಿಗಮಪದ ಜಿ.ಮೆಹಬೂಬ್, ಕುಮಾರಿ ದಿವ್ಯ ರಾಮಚಂದ್ರರವರಿಂದ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಜೈ ವಾಸವಿ ಮಿತ್ರ ವೃಂದದಿಂದ ಭಜನಾ ಕಾರ್ಯಕ್ರಮ ನಡೆಯಿತು.
ಸುಬ್ರಾಯಭಟ್ ವೇದ ಘೋಷವನ್ನು ಮಾಡಿದರೆ, ಪ್ರಜ್ವಲ್ ಪ್ರಾರ್ಥಿಸಿದರೆ, ಪ್ರಶಾಂತ್ ಸ್ವಾಗತಿಸಿದರು. ನಿವೃತ ಮುಖ್ಯ ಉಪಾಧ್ಯರಾದ ಹುರಳಿ ಬಸವರಾಜ್ ಹಾಗೂ ಮುರುಗೇಶ್ ಕಾರ್ಯಕ್ರಮ ನಿರೂಪಿಸಿದರು.

 

 

 

Leave a Reply

Your email address will not be published. Required fields are marked *