Bjp ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಂಸದ ಪ್ರತಾಪ್ ಸಿಂಹಗೆ ಕೈ ತಪ್ಪಿದ ಟಿಕೆಟ್

ರಾಜ್ಯ

ಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿಗಳ 2 ನೇ ಪಟ್ಟಿ ಬಿಡುಗಡೆ ಮಾಡಿದೆ. ರಾಜ್ಯದ 20 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮೈಸೂರಿನ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಕೈ ತಪ್ಪಿದೆ. ರಾಜ್ಯದಲ್ಲಿ 20 ಕ್ಷೇತ್ರಗಳಿಗೆ ಟಿಕೆಟ್ ತಪ್ಪಿದ್ದು, 9 ಜನ ಹಾಲಿ ಸಂಸದರಿಗೆ ಕೈ ತಪ್ಪಿದೆ.
ಹಾವೇರಿಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ,ಬೆಂಗಳೂರು ಉತ್ತರದಿಂದ ಶೋಭಾ ಕರಾಂದ್ಲಾಜೆ ಹೆಸರುಗಳು ಫೈನಲ್ ಆಗಿದೆ.ದಾವಣಗೆರೆ ಲೋಕಸಭಾ ಸದಸ್ಯ ಜಿಎಂ ಸಿದ್ದೇಶ್ವರ  ಅವರ ಪತ್ನಿ ಗಾಯಿತ್ರಿ ಅವರಿಗೆ ಟಿಕೆಟ್ ಘೋಷಣೆಯಾಗಿದೆ.

 

 

 

Leave a Reply

Your email address will not be published. Required fields are marked *