ಏಳು ಸುತ್ತಿನ ಕೋಟೆ ರೀತಿ ಜನರಿಗೆ ಬಿಜೆಪಿ ಭದ್ರತೆ ನೀಡಿದೆ: ಪ್ರಧಾನಿ ಮೋದಿ

ದೇಶ ರಾಜಕೀಯ

ಚಿತ್ರದುರ್ಗದ ಏಳು ಸುತ್ತಿನ ಕೋಟೆ ಎಷ್ಟು ಸುರಕ್ಷಿತವಾಗಿದೆಯೋ ಅದೇ ರೀತಿ ನಾಡಿನ ಜನರನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ಏಳು ಸುತ್ತಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಭದ್ರತೆಯನ್ನು ನೀಡಿದ್ದೇವೆ ಎಂದು ಪ್ರಧಾನಿ ಮೋದಿ‌ ಹೇಳಿದರು. ಬಡವರಿಗೆ ಮನೆಗಳನ್ನು, ಗ್ಯಾಸ್, ನೀರು, ದಲಿತ ಕಲ್ಯಾಣ ಯೋಜನೆಯಡಿ ಆಹಾರ ನೀಡಲಾಗುತ್ತಿದೆ. ಆಯು ಷ್ಮಾನ್ ಯೋಜನೆಯಡಿ ಜನರ ಆರೋಗ್ಯ ಕಾಪಾಡ ಲಾಗುತ್ತಿದೆ. ಮುದ್ರಾ ಯೋಜನೆಯಡಿ ಸಾಕಷ್ಟು ಜನರಿಗೆ ಸ್ವ-ಉದ್ಯೋಗ ನೀಡಿದ್ದೆವೆ.ಸಾಮಾಜಿಕ ಭದ್ರತೆಯನ್ನು ನೀಡಲಾ ಗುತ್ತಿದೆ. ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳಿಗೆ ಸಾಕಷ್ಟು ಸೌಲಭ್ಯಗಳನ್ನು‌ ನೀಡಲಾಗುತ್ತಿದೆ. ಬಂಜಾರ, ಆದಿವಾಸಿ ಸಮುದಾಯಗಳಿಗೆ ಹಕ್ಕುಪತ್ರ ನೀಡುವುದರ ಜೊತೆ‌ ಭೂಮಿ ಇಲ್ಲದವರಿಗೆ ಭೂಮಿ, ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದ್ದೆವೆ ಎಂದು ಹೇಳಿದರು.
ಕಾಂಗ್ರೇಸ್ ಹಾಗೂ ಜೆಡಿಎಸ್ ಉದ್ದೇಶ ಆತಂಕವಾದಿಗಳನ್ನು ತುಷ್ಟೀಕರಣ ಮಾಡುವು ದಾಗಿದೆ. ಇದನ್ನು ಸದೆ ಬಡೆದು ಬಿಜೆಪಿ ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿ, ಎಲ್ಲರ ಏಳ್ಗೆಗಾಗಿ ದುಡಿಯುತ್ತಿದ್ದು, ರಾಜ್ಯ ದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ‌ ಮುಂದಾಗ ಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದರು.
ನಗರದ ಶ್ರೀ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಜಿಕಲ್ ಸ್ಟ್ರೈಕ್ ಮೂಲಕ ದೇಶದಲ್ಲಿ ಯೋಧರು ಆತಂಕವಾ ದಿಗಳನ್ನು ಸದೆ ಬಡೆದರೆ, ಕಾಂಗ್ರೇಸ್ ನಾಯಕರು ಯೋಧರನ್ನೆ ಅಪಮಾನ ಮಾಡುವ ಕೆಲಸ ಮಾಡುತ್ತಾರೆ. ಅಲ್ಲದೆ ಕರ್ನಾಟಕದಲ್ಲಿ ಅತಂಕವಾದಿಗಳನ್ನು ಸೆರೆಹಿಡಿದರೆ ಅವರ ಪರವಾಗಿ ಮಾತನಾಡುವ ಮೂಲಕ ಮರುಕ ಪಡು ತ್ತಾರೆ. ಇಂತ ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷಗಳು ದೇಶಕ್ಕೆ ಮಾರಕ ವಾಗಿವೆ ಇಂತಹವರ ಬಗ್ಗೆ ಜನತೆ ಸದಾ ಜಾಗರೂಕತೆ ವಹಿಸಬೇಕು ಎಂದು ಎಚ್ಚರಿಸಿದರು.ದೇಶದ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೇಸ್ ಪಕ್ಷ ಅವನತಿ ಕಾಣುತ್ತಿದೆ. ಇನ್ನೂ ಅವರು ನೀಡುತ್ತಿರುವ ಗ್ಯಾರಂಟಿ ಕಾರ್ಡ್ ಗಳಿಗೆ ಯಾವುದೇ ಗ್ಯಾರಂಟಿ ಬೆಲೆ ಇಲ್ಲ. ಇದೇ ರೀತಿ ಗುಜರಾತ್ ರಾಜ್ಯದಲ್ಲಿ ಗ್ಯಾರಂಟಿ ಕಾರ್ಡ್ ಗಳನ್ನು ನೀಡಿತು. ಅದಕ್ಕೆ ಅಲ್ಲಿನ ಜನರು ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಅಲ್ಲದೆ ಅವರು ನೀಡುತ್ತಿರುವ ಗ್ಯಾರಂಟಿ ಗಳನ್ನು ಈಡೇರಿಸಬೇಕಾದರೆ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಬೇಕಾಗುತ್ತದೆ. ಈ ಬಗ್ಗೆ ಜನತೆ ಎಚ್ಚರ ವಹಿಸಬೇಕು ಎಂದು ಹೇಳಿದ ಅವರು, ಕಾಂಗ್ರೇಸ್ ನಾಯಕರು ಮಾತಿನ ಬರದಲ್ಲಿ ಲಿಂಗಾಯುತ ಸೇರಿದಂತೆ ಎಲ್ಲಾ ಧರ್ಮಗಳನ್ನು ಅಪಮಾನ ಮಾಡುವ ಕೆಲಸವನ್ನು ಮಾಡುತ್ತಾ, ಸಮಾಜ ಸಮಾಜಗಳ ಮಧ್ಯೆ ಬೆಂಕಿ ಹಚ್ಚಿ ಹೊಡೆಯುವ ಕೆಲಸ ಮಾಡಿ, ಜನರಲ್ಲಿ ಆತಂಕವನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಮದಕರಿನಾಯಕ, ವೀರ ವನಿತೆ ಒನಕೆ ಒಬವ್ವ ಜನತೆಗೆ ನನ್ನ ನಮಸ್ಕಾರಗ ಳನ್ನು ತಿಳಿಸಿದ ಮೋದಿ,
ಕಾಂಗ್ರೇಸ್ ಪಕ್ಷ 65 ವರ್ಷದಲ್ಲಿ ಎಷ್ಟು ವೈದ್ಯಕೀಯ ಕಾಲೇಜು ತೆರೆದಿತ್ತು ಅದಕ್ಕೆ ಡಬ್ಬಲ್ ಆಗಿ ಬಿಜೆಪಿ ಸರ್ಕಾರ ವೈದ್ಯಕೀಯ ಕಾಲೇಜು ಗಳನ್ನು ತೆರೆದು, ಬಡವರ ಮಕ್ಕಳು ಕೂಡ ವೈದ್ಯರಾ ಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.
ಕರ್ನಾಟಕ ಬಿಜೆಪಿ ಚುನಾವಣೆ ಪ್ರಣಾಳಿಕೆ ಕರ್ನಾಟಕವನ್ನು ಅಭಿವೃದ್ಧಿ ಪಥದತ್ತ ಕೊಂಡೊ ಯ್ಯಲಿದೆ. ಯುವಕರು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಮಾನ್ಯತೆ ನೀಡಿ, ಮೂಲ ಭೂತ ಸೌಕರ್ಯಗಳ ಕಲ್ಪಿಸುದರ ಜೊತೆಗೆ ಎಲ್ಲರ ಸುರಕ್ಷತೆ ಬಯಸಿ, ಸಬ್ ಕಾ ಸಾಥ್, ಸಾಬ್ ಕಾ ವಿಕಾಸ್ ಎಂಬ‌ ನೀತಿಯನ್ನು ಅನುಸರಿಸಿದೆ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಅಭಿನಂದಿಸಿದ ಅವರು, ಈ ಭಾರತೀಯ ಜನರ ನಿರ್ಧಾರ ಬಿಜೆಪಿ ಆಗಬೇಕು. ಈ ಚುನಾವಣೆ ಕರ್ನಾಟಕವನ್ನು ನಂ.1 ಮಾಡುವ ಚುನಾವಣೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಬಿಜೆಪಿ ಗೆಲ್ಲಿಸಿ, ಡಬಲ್ ಇಂಜಿನ್ ಸರ್ಕಾರವನ್ನು ಮತ್ತೊಮ್ಮೆ ತರಬೇಕು. ಅಭಿವೃದ್ಧಿಯಲ್ಲಿ ಕರ್ನಾಟಕ ನಂ.1 ಆಗಿ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ಜಿ.ಹೆಚ್‌.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್, ಎನ್.ತಿಪ್ಪೇಸ್ವಾಮಿ, ಲಿಂಗಮೂರ್ತಿ, ಅನಿಲ್ ಕುಮಾರ್, ಶೇಖರ್ ನಾಯ್ಕ್ ವಿರೇಶ್ ಅನಿಗವಾಡಿ, ಮುರುಳಿ ಸೇರಿದಂತೆ ಇತರರು ಹಾಜರಿದ್ದರು.

 

 

 

Leave a Reply

Your email address will not be published. Required fields are marked *