ಬಣ್ಣದ ಗೋಡೆ ಬರಹಗಳಿಂದ ಕಂಗೊಳಿಸುತ್ತಿರುವ ಗೋಡೆಗಳು

ಜಿಲ್ಲಾ ಸುದ್ದಿ

ಚಿತ್ರದುರ್ಗ: ಬಯಲು ಗಣಪತಿ ಇತಿಹಾಸವಿರುವ ಹೊಳಲ್ಕೆರೆ ಪಟ್ಟಣವು ಹೊಸ ರೂಪವನ್ನು ತಾಳುತ್ತಿದೆ. ಅದೇನಂತೀರಾ ಇದೋ ನೋಡಿ, ಹೊಳಲ್ಕೆರೆ ಪಟ್ಟಣದ ಪ್ರತೀ ಗೋಡೆಗಳು ಬಣ್ಣ ಬಣ್ಣಗಳ ಚಿತ್ತಾರಗಳಿಂದ ಕಂಗೊಳಿಸುತ್ತಿವೆ. ಸ್ವಚ್ಚ ಸರ್ವೇಕ್ಷಣ ಕಾರ್ಯಕ್ರಮದಲ್ಲಿ ಸುಂದರವಾದ ಗೋಡೆ ಬರಹಗಳನ್ನು ಪಟ್ಟಣ ಪಂಚಾಯಿತಿಯಿಂದ ಬರೆಯಿಸಲಾಗುತ್ತಿದೆ.

Chitradurga colourful wall writing

 

 

 

 

ಸ್ವಚ್ಚತೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಸಂದೇಶ ನೀಡುವಂತಹ ಪ್ಲಾಸ್ಟಿಕ್ ನಿಷೇಧ, ತ್ಯಾಜ್ಯ ವಸ್ತುಗಳ ವಿಂಗಡಣೆ, ಪರಿಸರ ಸಂರಕ್ಷಣೆ, ಜಲ‌ಮೂಲಗಳ ಸಂರಕ್ಷಣೆ ರಸ್ತೆಗಳಲ್ಲಿ ಕಸ ಸುರಿಯದೇ ಇರುವಂತ ಸುಂದರ ಚಿತ್ರಗಳನ್ನು ಮೂಲಕ ಕಂಗೊಳಿಸುತ್ತಿವೆ. ಈ ಸಮಯದಲ್ಲಿ ಮಾತನಾಡಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಾಸೀಂ, ಸ್ವಚ್ಛ ಸರ್ವೇಕ್ಷಣ 2020 ರಲ್ಲಿ ಹೊಳಲ್ಕೆರೆ ಪಟ್ಟಣ ಪಂಚಾಯಿತಿಯು ಎಲ್ಲಾ ನಾಗರೀಕರ, ಸಂಘ ಸಂಸ್ಥೆಗಳ ಹಾಗೂ ಜನ ಪ್ರತಿನಿಧಿಗಳ ಸಹಕಾರದೊಂದಿಗೆ ಅಗ್ರ ಶ್ರೇಯಾಂಕ ಪಡೆದು ಪ್ರಶಸ್ತಿಗೆ ಭಾಜನವಾಗಿತ್ತು.

Chitradurga colourful wall writingChitradurga colourful wall writing

ಪ್ರಶಸ್ತಿ‌ನೀಡಬೇಕಾದಲ್ಲಿ ಕೇವಲ ಸ್ವಚ್ಛತೆ ಮಾಡಿರವುದನ್ನೆ ಮಾನದಂಡವಾಗಿ ಅಳೆಯದೆ ಸಾರ್ವಜನಿಕರ ಸಹಭಾಗಿತ್ವವನ್ನು ಸಹ ಸ್ವಚ್ಚ ಸರ್ವೇಕ್ಷಣೆಯಲ್ಲಿ ಪ್ರಮುಖ ಮಾನದಂಡವಾಗಿ ಪರಿಗಣಿಸಲಾಗಿದೆ. ಸಾರ್ವಜನಿಕರು, ಹೊಳಲ್ಕೆರೆ ಪಟ್ಟಣವನ್ನು ಸ್ವಚ್ಚವಾಗಿಟ್ಟುಕೊಂಡು ನೈರ್ಮಲ್ಯ ಕಾಪಾಡುವುದರೊಂದಿಗೆ ಮತ್ತೊಮ್ಮೆ ಹೊಳಲ್ಕೆರೆಗೆ ಪ್ರಶಸ್ತಿಯನ್ನು ತಂದುಕೊಡಬೇಕು ಎಂದರು. ಹೊಳಲ್ಕೆರೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕೆಸಿ ರಮೇಶ್ ಮಾತನಾಡಿ, ಸಾರ್ವಜನಿಕರಿಗೆ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಅದಾಗ್ಯೂ ಇನ್ನು ಮುಂದೆ ಬಯಲು ಶೌಚಾಲಯ ಮಾಡುವುದು, ಪ್ಲಾಸ್ಟಿಕ್ ಚೀಲ ಬಳಸುವುದು, ಕಂಡು ಬಂದಲ್ಲಿ ದಂಡ ವಿಧಿಸಲಾಗುತ್ತದೆ ಎಂದರು. ಸೈಯದ್ ಸಾಜೀಲ್ ಹಾಗೂ ಮನ್ಸೂರ್ ಇದ್ದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *