ಕೋರೋನಾ ಎರಡನೇ ಅಲೆ ಆರ್ಭಟ ಮತ್ತೆ ಲಾಕ್ ಡೌನ್ ??

ಜಿಲ್ಲಾ ಸುದ್ದಿ

ಬೆಂಗಳೂರು: ಕೋರೋನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋರೋನಾ ಸಲಹಾ ತಜ್ಞರ ಸಮಿತಿಯೂ ಇಂದು ನಡೆದ ತುರ್ತು ಸಭೆಯಲ್ಲಿ ಬೆಂಗಳೂರನ್ನು ಹತ್ತು ದಿನಗಳ ಕಾಲ ಲಾಕ್ ಮಾಡುವಂತೆ ಬೆಂಗಳೂರಿನ ವಿಧಾನ ಸೌಧದ ಸಮ್ಮೇಳನದ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಸಲಹೆ ನೀಡಿದೆ.Chitradurga corona second wave hike can govt imposed lock down

 

 

 

ಕೋರೋನಾ ಎರಡನೆ ಅಲೆಯ ಮಹಾಮಾರಿ ರಣ ಕೇಕೆ ಹಾಕುತ್ತಿದ್ದು, ಈಗಾಗಲೇ ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಚಿಂತನೆಯನ್ನು ನಡೆಸಿದೆ. ಅದೇ ರೀತಿಯಲ್ಲಿ ನಮ್ಮ ರಾಜ್ಯದಲ್ಲೂ ಕೂಡ ಪ್ರಕರಣಗಳ ಸಂಖ್ಯೆ ಎಲ್ಲೆ ಮೀರುತ್ತಿದೆ. ಇದರಿಂದ ಇಂದು ಸಚಿವ ಡಾ. ಸುಧಾಕರ್ ನೇತೃತ್ವದಲ್ಲಿ ತಾಂತ್ರಿಕ ಸಲಹಾ ಸಮಿತಿಯ ಸಭೆಯನ್ನು ಕರೆದಿದ್ದು ಸಭೆಯಲ್ಲಿ ಸಲಹಾ ಸಮಿತಿ ಸದಸ್ಯ ಡಾ. ಗಿರಿಧರ್ ಬಾಬು ಬೆಂಗಳೂರನ್ನು 10 ದಿನಗಳ ಕಾಲ ಲಾಕ್ ನಾಡುವಂತೆ ಸಲಹೆಯನ್ನು ನೀಡಿದ್ದಾರೆ. ಆದರೆ ಸಚಿವ ಸುಧಾಕರ್ ಸರ್ಕಾರ ಲಾಕ್ ಡೌನ್ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ. ಸಿಎಂ ಕೂಡ ಲಾಕ್ ಡೌನ್ ಬಗ್ಗೆ ಒಲವು ತೋರಿಸುತ್ತಿಲ್ಲ ಎಂದಿದ್ದಾರೆ. ಲಾಕ್ ಡೌನ್ ಸಲಹೆ ಬಿಟ್ಟು ಬೇರೆ ಸಲಹೆ ಕೊಡುವಂತೆ ಕೇಳಿದ್ದು, ಉಳಿದಂತೆ ಈಗಲೂ ಎಂಟು ಜಿಲ್ಲೆ ಗಳಲ್ಲಿ ರಾತ್ರಿ ಕೋರೋನಾ ಕರ್ಫ್ಯೂ ಜಾರಿಯಲ್ಲಿದ್ದು, ಅದನ್ನು ಇನ್ನು ಕೆಲ ಜಿಲ್ಲೆಗಳಿಗೆ ವಿಸ್ತರಿಸಬೇಕು ಎಂದು ಸಲಹಾ ಸಮಿತಿ ಹೇಳಿದೆ.
ಆದರೆ ಸಲಹಾ ಸಮಿತಿಯ ಸಲಹೆಯನ್ನು ತಳ್ಳಿ ಹಾಕಿದ್ದು ಮುಂದಿನ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಾದು ನೀಡಬೇಕು.

ಸಂಯುಕ್ತವಾಣಿ

Leave a Reply

Your email address will not be published. Required fields are marked *