ಪೋಲಿಸರ ದೈಹಿಕ ಹಾಗೂ ಮಾನಸಿಕ ಸದೃಡತೆಗಾಗಿ ಯೋಗಾ, ಪ್ರಾಣಾಯಾಮದ ಪಾಠ ಎಸ್ಪಿ ರಾಧಿಕಾರಿಂದ

ಜಿಲ್ಲಾ ಸುದ್ದಿ

ಚಿತ್ರದುರ್ಗ: -ಪೋಲಿಸ್ ಎಂದರೆ ಲಾಠಿ‌ ಹಿಡಿದು ಕಾನೂನು ಪರಿಪಾಲನೆ ಮಾಡುವಂತೆ ಹೇಳುವದಲ್ಲ ಇದರ ಜೊತೆಗೆ ತಮ್ಮ ದೈಹಿಕ ಮತ್ತು ಮಾನಸಿಕ‌ ಸಾಮರ್ಥ್ಯವನ್ನು ವನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು ಎಂಬುದನ್ನು ಸ್ವತಃ ಪ್ರಾಯೋಗಿಕವಾಗಿ ಪರಿಸರದ ನಡುವೆ ತಮ್ಮ ಸಿಬ್ಬಂದಿಗೆ ಎಸ್ಪಿ ರಾಧಿಕಾ ಕಲಿಸಿಕೊಡುತ್ತಿದ್ದಾರೆ.

Chitradurga sp teaching yoga for police staff

 

 

 

ಪೋಲಿಸರು ದಿನ ನಿತ್ಯ ಕಾನೂನು, ಲಾಠಿ ಬಂದೋಬಸ್ತ್ ಹಾಗೂ ಜನರ ರಕ್ಷಣೆ ಇಷ್ಟರಲ್ಲೆ ತಮ್ಮ ಸೇವೆಯನ್ನು ಸೀಮಿತಗೊಳಿಸಿಕೊಂಡಿರುತ್ತಾರೆ. ಇದರ ನಡುವೆ ತನಗೂ ಆರೋಗ್ಯವಾಗಿ ಮಾನಸಿಕವಾಗಿ ದೈಹಿಕವಾಗಿ ನಾವು ಸದೃಢರಾಗಿರಬೇಕು ಎಂಬುದನ್ನು ದಿನನಿತ್ಯ ದ ಕರ್ತವ್ಯ ದಲ್ಲಿ ಪೋಲಿಸರು ಮರೆತೆ ಹೋಗಿರುತ್ತಾರೆ. ಇಂತಹ ಪೋಲಿಸರಿಗಾಗಿ ಕೋಟೆ ನಾಡಿನ ಎಸ್ಪಿ ಜಿ. ರಾಧಿಕಾ ಅವರು, ಪ್ರತಿ ನಿತ್ಯವೂ ಮುಂಜಾನೆಯಲ್ಲಿ ಜೋಗಿಮಟ್ಟಿಯ ಗಿರಿಧಾಮದ ಪರಿಸರದಲ್ಲಿ ಯೋಗಾಭ್ಯಾಸ, ಪ್ರಾಣಾಯಾಮ, ಸೂರ್ಯ ನಮಸ್ಕಾರ ಕಲಿಸುತ್ತಿದ್ದಾರೆ. ಇದೆಲ್ಲವು ಪೋಲಿಸರ ದೈಹಿಕ ಹಾಗೂ ಮಾನಸಿಕ ಒತ್ತಡದಿಂದ ಹೊರ ಬರಲು ಸಹಕಾರಿ ಎನ್ನುತ್ತಾರೆ‌. ಬೆಳಗಿನ ಒಂದು ಗಂಟೆಗೂ ಹೆಚ್ಚು ಕಾಲ ವಾಕಿಂಗ್ ನಂತರದಲ್ಲಿ ದೊಡ್ಡದಾದ ಹಾಸು ಬಂಡೆಯ ಮೇಲೆ ಸೂರ್ಯ ನಮಸ್ಕಾರ, ಪ್ರಾಣಾಯಾಮ, ಹಾಗೂ ಯೋಗಾಸನವನ್ನು ಹೇಳಿಕೊಡುತ್ತಾರೆ. ಸ್ವತಃ ತಾವೂ ಕೂಡ ಮಾಡಿ ತೋರಿಸುತ್ತಾರೆ. ಇದಕ್ಕೂ ಮೊದಲು ಕೋವಿಡ್ ಮೊದಲ ಅಲೆಯಲ್ಲಿ ಪೋಲಿಸರ ದೈಹಿಕ ಹಾಗೂ ಮಾನಸಿಕ ಒತ್ತಡ ಕಡಿಮೆ ಮಾಡಲು ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರದ ಜಲಾಶಯದ ಹಿನ್ನೀರಿನಲ್ಲಿ ಬೋಟಿಂಗ್, ಸರ್ಫಿಂಗ್ ವಾಟರ್ ಸ್ಪೋರ್ಟ್ ಗಳನ್ನು ಹೇಳಿಸಿಕೊಟ್ಟಿದ್ದರು. ಅದೇ ರೀತಿ ಒಂದು ಈಗ ಜೋಗಿ‌ಮಟ್ಡಿ ಅರಣ್ಯ ಧಾಮದಲ್ಲಿ ಯೋಗಾ ಮತ್ತು ಪ್ರಾಣಾಯಾಮ ಮಾಡಿಸುತ್ತಾ, ಇಲಾಖೆಯ ಇತರೆ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *