ಲಂಚ ಪಡೆಯುವಾಗ ತಹಶೀಲ್ದಾರ್ ಮತ್ತು ವಿಎ ಇಬ್ಬರು ಎಸಿಬಿ ಬಲೆಗೆ

ಕ್ರೈಂ ಜಿಲ್ಲಾ ಸುದ್ದಿ

ಚಿತ್ರದುರ್ಗ : ಗುತ್ತಿಗೆದಾರನಿಂದ 2 ಲಕ್ಷ  ಲಂಚ ಪಡೆಯುವ ವೇಳೆಯಲ್ಲಿ ಮೊಳಕಾಲ್ಮೂರು
ತಹಶೀಲ್ದಾರ್ ಹಾಗೂ ಗ್ರಾಮ‌ಲೆಕ್ಕಿಗ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

Chitradurga tahashildar and va in acb trap

 

 

 

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಹಶೀಲ್ದಾರ್ ಮಲ್ಲಿಕಾರ್ಜುನ್ ಹಾಗೂ ಗ್ರಾಮ ಲೆಕ್ಕಿಗ ಉಮೇಶ್  ಎಸಿಬಿ ಬೆಲೆಗೆ ಬಿದ್ದಿರುವ ಅಧಿಕಾರಿಗಳು.

Chitradurga tahashildar and va in acb trap
ಮೊಳಕಾಲ್ಮೂರು  ತಾಲೂಕಿನ ಬಿಜಿಕೆರೆ ಕ್ರಾಸ್ ಬಳಿ  ಉಮೇಶ್ ಎನ್ನುವವನಿಗೆ ಗುತ್ತಿಗೆದಾರ 2 ಲಕ್ಷ ಹಣ ನೀಡುವಾಗ ಉಮೇಶ್ನ ಮೇಲೆ ದಾಳಿಯನ್ನು ನಡೆಸಿದ್ದು, ಇತ್ತ ಎಸಿಬಿ ಡಿವೈಎಸ್ಪಿ  ಪರಮೇಶ್
ತಹಶೀಲ್ದಾರ್ ಕಚೇರಿ ಮೇಲೆ ದಾಳಿಯನ್ನು ಏಕ ಕಾಲದಲ್ಲಿ ನಡೆಸಿದ್ದಾರೆ.   ರಸ್ತೆ ಕಾಮಗಾರಿ ಗೆ ಎನ್ ಓಸಿ ನೀಡಲು ಗುತ್ತಿಗೆದಾರ ಪ್ರೀತಮ್ ನಿಂದ ಒಟ್ಟು 15  ಲಕ್ಷ ಬೇಡಿಕೆ ಇಟ್ಟಿದ್ದ ತಹಶೀಲ್ದಾರ್ ಮಲ್ಲಿಕಾರ್ಜುನ್ ಮೊದಲು 6 ಲಕ್ಷವನ್ನು ಪಡೆದುಕೊಂಡಿದ್ದಾರೆ.  ಉಳಿದ ಲಂಚದ ಹಣದಲ್ಲಿ‌ ಇಂದು  ಎರಡು ಲಕ್ಷ ಕೊಡುವಂತೆ ಹಾಗೂ ಇನ್ನುಳಿದ ಹಣವನ್ನು ನಾಡಿದ್ದು ಕೊಡುವಂತೆ ಹೇಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರೀತಮ್ ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಅದರಂತೆ ಎಸ್ಪಿ ಜಯರಾಮ್ ನೇತೃತ್ವದಲ್ಲಿ ದಾಳಿಯನ್ನು ಬಿಜಿಕೆರೆ ಕ್ರಾಸ್ ಹಾಗೂ ತಹಶೀಲ್ದಾರ್ ಕಚೇರಿ ಮೇಲೆ ದಾಳಿ ನಡೆಸಿದಾಗ ಅರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ವಶಕ್ಕೆ ಪಡೆದಿರುವ ಎಸಿಬಿ ಪೋಲಿಸರು ಹೆಚ್ಚಿನ ತನಿಖೆಯನ್ನು ಮಾಡುತ್ತಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *