ನಿರ್ಭಿತಿಯಿಂದ ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತದಾನ ಮಾಡಿ,

ರಾಜ್ಯ

ಕಳೆದ ಲೋಕಸಭಾ ಚುನಾವಣೆ ಯಲ್ಲಿ ಶೇಕಡ.70/% ರಷ್ಟು ಮತದಾನವಾಗಿದ್ದು, ಈ ಬಾರಿ ಶೇಕಡ.5% ರಷ್ಟು ಮತದಾನದ ಪ್ರಮಾಣ ಹೆಚ್ಚಾಗಲು ಪ್ರತಿಯೊಬ್ಬರು ಮತದಾನ ಮಾಡಬೇಕು ಎನ್ನುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಎಸ್ ಜೆ ಸೋಮಶೇಖರ್ ಹೇಳಿದರು. ಅವರು ಕೆಳಗೋಟೆ ಸಿ. ಕೆ ಪುರ ಬಡಾವಣೆಯ ಈಶ್ವರಿ ವಿಶ್ವವಿದ್ಯಾಲಯದಲ್ಲಿ‌ ಹಿರಿಯ ನಾಗರಿಕರಿಗೆ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದರು.
ಇದೇ 26 ರಂದು ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರು ಪಾಲ್ಗೊಂಡು, ತಮ್ಮ ಮತದಾನ ಹಕ್ಕು ಚಲಾಯಿಸಲು ಸುವರ್ಣ ಅವಕಾಶ, ಪ್ರತಿ 5 ವರ್ಷಕೊಮ್ಮೆ ಬರುವ ಈ ಹಬ್ಬದಲ್ಲಿ 18 ವರ್ಷ ತುಂಬಿದ ಪುರುಷ ಮತ್ತು ಮಹಿಳಾ ಮತದಾರರು, ಕಡ್ಡಾಯವಾಗಿ ಮತದಾನ ಮಾಡಬೇಕು, ತಾವುಗಳು ಮತ್ತು ನಿಮ್ಮ ಸ್ನೇಹಿತರು, ಬಂಧುಗಳಿಗೆ ಮತ್ತು ಕುಟುಂಬದವರಿಗೆ ಮತದಾನ ಮಾಡುವಂತೆ ತಿಳಿಸಲು ಮನವಿ ಮಾಡಿದರು. ಈ ಬಾರಿ 85 ವರ್ಷ ದಾಟಿದ ಹಿರಿಯ ನಾಗರೀಕರಿಗೆ, ಮನೆಯಿಂದಲೇ ಮತ ಚಲಾಯಿಸುವ ಹಕ್ಕುನ್ನು ನೀಡಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ದಾಟಿದ ವೃದ್ಧರಿಗೆ, ಮನೆಯಿಂದ ಮತ ಚಲಾಯಿಸುವ ಅವಕಾಶ ನೀಡಿದ್ದ ಆಯೋಗ, ಇದೀಗ ಲೋಕಸಭೆ ಚುನಾವಣೆಯಲ್ಲಿ ವಯೋಮಿತಿಯನ್ನು 85 ವರ್ಷಕ್ಕೆ ಏರಿಕೆ ಮಾಡಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 85 ವರ್ಷ ದಾಟಿದ ಹಿರಿಯ ನಾಗರಿಕರು, 11,827 ಮತದಾರರಿದ್ದಾರೆ. ನನ್ನ ಮತ, ನನ್ನ ಹಕ್ಕು ಎಂಬ ಘೋಷ ವಾಕ್ಯದೊಂದಿಗೆ ಮತದಾರರನ್ನು ಮತ ಹಾಕುವಂತೆ ಜಾಗೃತಿ ಮೂಡಿಸುವುದು ನಿಮ್ಮಂತ ಹಿರಿಯರ ಕೈಯಲ್ಲಿದೆ. ಹಾಗೂ ಯಾವುದೇ ಭಯ ಪಡೆದೇ ನಿರ್ಭಿತಿಯಿಂದ ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತದಾನ ಮಾಡಿ, ಮತ್ತು ಮತಗಟ್ಟೆ ಕೇಂದ್ರಗಳಿಗೆ ತಮ್ಮ ಪೋಷಕರು ಹಿರಿಯ ನಾಗರಿಕರನ್ನು ಕರೆದುಕೊಂಡು ಬಂದರೆ ಓಡಾಡಲು ವೀಲ್ ಚೇರ್ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಆದ್ದರಿಂದ ಯಾರು ಮತದಾನದಿಂದ ವಂಚಿತರಾಗಬಾರದೆಂದು ಜಾಗೃತಿ ಮೂಡಿಸಿದರು. ನಂತರ ಮತದಾರ ಪ್ರತಿಜ್ಞಾ ವಿಧಿ ಭೋದಿಸಿದರು. ಕಾರ್ಯಕ್ರಮದಲ್ಲಿ ಉಪ ಕಾರ್ಯದರ್ಶಿ ಕೆ. ತಿಮಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶ್ರೀಮತಿ ಭಾರತಿ, ನಗರ ಸಭೆಯ ಆಯುಕ್ತೆ ಶ್ರೀಮತಿ ರೇಣುಕಾ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಇತರೇ ಅಧಿಕಾರಿಗಳು ಮತ್ತು ಜಿಲ್ಲಾ ಸ್ವೀಪ್ ಸಮಿತಿಯ ಸಂಯೋಜಕಿ ಸುಷ್ಮಾರಾಣಿ, ಹಿರಿಯ ನಾಗರಿಕರು,ಈಶ್ವರಿ ವಿಶ್ವವಿದ್ಯಾಲಯದ ರಶ್ಮಿ ಅಕ್ಕ ನವರು ಇದ್ದರು.

 

 

 

Leave a Reply

Your email address will not be published. Required fields are marked *