ಸಿ ಡಿ ಸಂಪತ್ ಕುಮಾರ್ ಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಗೌರವ

ಜಿಲ್ಲಾ ಸುದ್ದಿ

ವಿದ್ಯಾ ವಿಕಾಸ ಸಂಸ್ಥೆಯ ಮುಖ್ಯ ಶಿಕ್ಷಕರಾದ ಸಿ ಡಿ ಸಂಪತ್ ಕುಮಾರ್ ಗೆ ಅತ್ಯುತ್ತಮ ಶಿಕ್ಷಕ‌ ಪ್ರಶಸ್ತಿ ಗೌರವ

 

 

 

ಚಿತ್ರದುರ್ಗದ ಬೊಮ್ಮೇನಹಳ್ಳಿಯಲ್ಲಿ ಯೋಗಿ ನಾರೇಯಣ ಯತೀಂದ್ರ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರು ನ್ಯೂ ಬಾಲ್ಡವಿನ್ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಟಿ.ವೇಣುಗೋಪಾಲ್, ಯಾವುದೇ ವಿದ್ಯಾ ಸಂಸ್ಥೆಗಳು ಆದರ್ಶಗಳನ್ನು ಇಟ್ಟುಕೊಂಡು ಸಮಾಜಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕು,ಶಿಕ್ಷಣ ವ್ಯಾಪಾರವಾಗಬಾರದು, ಮಕ್ಕಳಲ್ಲಿ ದೇವರನ್ನು ಕಾಣಬೇಕು,ಮಕ್ಕಳ ಹಾಗೂ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ, ಶಿಕ್ಷಕರೇ ನಮ್ಮ ಬಲಿಷ್ಠ ರಾಷ್ಟ್ರದ ನಿರ್ಮಾತೃಗಳು, ಅವರ ನಿಸ್ವಾರ್ಥ ಅತ್ಯುತ್ತಮ‌ ಸೇವೆಯನ್ನು ಸ್ಮರಿಸಿ ಅವರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ಇದೇ ಸಮಯದಲ್ಲಿ 22 ವರ್ಷಗಳಿಂದ ಶಿಕ್ಷಕರಾಗಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಸಿ ಡಿ ಸಂಪತ್ ಕುಮಾರ್ ಅವನ್ನು ಸನ್ಮಾನಿಸಿ ಗೌರವಿಸಲಾಯಿತು. ೨೧-೨೨ ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಅತ್ಯುತ್ತಮ ಅಂಕಗಳನ್ನಯ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನೂ ಗೌರವಿಸಿ ಸನ್ಮಾನಿಸಲಾಯಿತು‌.ಇದರ ಜೊತೆಯಲ್ಲಿ ಶ್ರೀ ಯೋಗಿ ನಾರೇಯಣ ಯತೀಂದ್ರ ವಿದ್ಯಾ ಸಂಸ್ಥೆಯ ಎಲ್ಲಾ ಶಿಕ್ಷಕರಿಗೂ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಯತೀಂದ್ರ ನಾರೇಯಣ ವಿದ್ಯಾ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಜಿಟಿ ಕಿರಣ್ ಕುಮಾರ್, ಮಾಜಿ ಕಾರ್ಯದರ್ಶಿಗಳಾದ ಶ್ರೀಕಾಂತ್, ಅಧ್ಯಕ್ಷರಾದ ಜಿ ಟಿ ನಾಗರಾಜ್, ಸಲಹೆಗಾರರಾದ ಬಿಎಸ್ ಶ್ರೀನಿವಾಸ್,ಮತ್ತು ಜಿಲ್ಲಾ ಬಲಿಜ ಜನಾಂಗದ ಅಧ್ಯಕ್ಷರಾದ ಎಂ ಎ ಸೇತೊರಾಂ, ದಾವಣಗೆರೆ ಬಲಿಜ ಜನಾಂಗದ ಜಿಲ್ಲಾ ಸಂಘದ ಅಧ್ಯಕ್ಷರಾದ ಎಸ್ ನರಸಿಂಹ ಮೂರ್ತಿ, ಚಿತ್ರದುರ್ಗದ ಇಸಿಓ ನಾಗರಾಜ್,ಯೋಗಿ ನಾರೇಯಣಬಲಿಜ ಸೌಹಾರ್ಧ ಪತ್ತಿನ ಸಹಕಾರ ನಿಯಮಿತದ ಅಧ್ಯಕ್ಷ ಎಂಕೆ ಪ್ರಹ್ಲಾದ್ ಭಾಗವಹಿಸಿದ್ದರು

Leave a Reply

Your email address will not be published. Required fields are marked *