ಮೂವತ್ತು ವರ್ಷಗಳ ಸಮಸ್ಯೆಗಳನ್ನು‌ ಬಗೆ ಹರಿಸುವ ಭರವಸೆ ನೀಡಿದ ತಹಶೀಲ್ದಾರ್

ಜಿಲ್ಲಾ ಸುದ್ದಿ

ಚಳ್ಳಕೆರೆ ತಾಲೂಕಿನ ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಐದು ಗ್ರಾಮಗಳನ್ನ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡುವಂತೆ ಮತ್ತು ಕಂದಾಯ ಇಲಾಖೆಯ ಎಲ್ಲಾ ಸೌಲಭ್ಯಗಳನ್ನು ಗ್ರಾಮಗಳಲ್ಲಿನ ಸಾರ್ವಜನಿಕರಿಗೆ ಕಲ್ಪಿಸುವಂತೆ ಎನ್ ದೇವರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಡಾಕ್ಟರ್ ಕಾಟಂ ಲಿಂಗಯ್ಯ ಅವರು ಚಳ್ಳಕೆರೆ ತಹಶೀಲ್ದಾರ್ ಎನ್ ರಘುಮೂರ್ತಿ ಅವರನ್ನು ಆಗ್ರಹಿಸಿದರು. ದಾರಿ ವಿವಾದದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆಗಮಿಸಿದ ತಹಶೀಲ್ದಾರ್ ಅವರನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ಕಳೆದ 30 ವರ್ಷದಿಂದ ಹಂದಿ ಜೋಗಿ ಜನಾಂಗದವರು ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದು ಅಂದಾಜು ಒಂದುವರೆ ಸಾವಿರ ಜನರು ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಬದುಕುತ್ತಿದ್ದಾರೆ ಇವರಿಗೆ ಸೂರು, ಶೌಚಾಲಯಗಳು, ಸ್ನಾನದ ಗೃಹಗಳಿಲ್ಲ ಕುಡಿಯುವ ನೀರಿನ ನಲ್ಲಿಗಳಿಲ್ಲದೆ ಬದುಕುತ್ತಿದ್ದಾರೆ 30 ವರ್ಷಗಳಿಂದ ಸತತವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದರು ಕೂಡ ಯಾವುದೇ ಸೌಲಭ್ಯಗಳನ್ನು ಕಲ್ಪಿಸಿಲ್ಲ ಈ ಸಮಸ್ಯೆಗಳು ಸೇರಿದಂತೆ ಕಂದಾಯ ಇಲಾಖೆಯ ಎಲ್ಲ ಸಮಸ್ಯೆಗಳನ್ನು ಸಮಸ್ಯೆ ಮುಕ್ತ ಗ್ರಾಮ ವೆಂದು ಘೋಷಣೆ ಮಾಡಿ ಈ ಜನಾಂಗದವರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

 

 

 

ಇವರ ಮನವಿಗೆ ಸ್ಪಂದಿಸಿದ ತಹಸಿಲ್ದಾರ್ ರಘುಮೂರ್ತಿ ಈ ಕ್ಷೇತ್ರದ ಮಂತ್ರಿಗಳಾದ ಬಿ ಶ್ರೀರಾಮುಲು ರವರು ಈಗಾಗಲೇ ಈ ಗ್ರಾಮದ ಎಲ್ಲ ಜನರಿಗೂ ಇದಕ್ಕೆ ಸಂಬಂಧಿಸಿದಂತ ಮೂಲಭೂತ ಸೌಕರ್ಯ ಒದಗಿಸುವಂತೆ ಆದೇಶ ನೀಡಿದ್ದಾರೆ ಅದರಂತೆ ಈ ದಿನ ಇಲ್ಲಿ ಬಂದು ಈ ಪಂಚಾಯತಿ ವ್ಯಾಪ್ತಿಯ ಐದು ಗ್ರಾಮಗಳಲ್ಲಿನ ಸಾರ್ವಜನಿಕರ ಮನೆ ಮನೆಗೆ ಭೇಟಿ ನೀಡಿ ಕಂದಾಯ ಇಲಾಖೆಯಿಂದ ಕಲ್ಪಿಸುವಂತಹ ಎಲ್ಲ ಸೌಲಭ್ಯಗಳನ್ನು ಕಾಲಮಿತಿಯೊಳಗೆ ಗುರುತಿಸಿ ಮಂತ್ರಿಯವರಿಂದ ಈ ಗ್ರಾಮ ಪಂಚಾಯಿತಿಯನ್ನು ಸಮಸ್ಯೆ ಮುಕ್ತ ಗ್ರಾಮ ಪಂಚಾಯಿತಿ ಎಂದು ಘೋಷಿಸಲಾಗುವುದು ಹಂದಿ ಜೋಗಿ ಜನಾಂಗದವರ ಜಮೀನಿನ ವಿಚಾರ ನ್ಯಾಯಾಲಯದಲ್ಲಿದ್ದು ಆದಷ್ಟು ಬೇಗ ಇದಕ್ಕೆ ಸಂಬಂಧಿಸಿದಂತ ಭಾದಿತ ವ್ಯಕ್ತಿಗಳೊಂದಿಗೆ ಸಮಾಲೋಚನೆ ನಡೆಸಿ ನ್ಯಾಯಾಲಯದಿಂದ ಪ್ರಕರಣವನ್ನು ವಾಪಸ್ ಪಡೆದು ಆರ್ಥಿಕ ನೆಲೆಗಟ್ಟಿನಲ್ಲಿ ಸುಮ್ಮನೆ ಮಂತ್ರಿಗಳಿಂದ ಪರಿಹಾರ ಒದಗಿಸಲಾಗುವುದೆಂದು ಹೇಳಿದರು ಈ ಸಂದರ್ಭದಲ್ಲಿ ದೇವರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಡಾಕ್ಟರ್ ಕಾಟಮ್ ಲಿಂಗಯ್ಯ ಉಪಾಧ್ಯಕ್ಷ ಶಶಿರೇಖಾ ರಾಜು ಗ್ರಾಮ ಪಂಚಾಯತಿ ಎಲ್ಲ ಸದಸ್ಯರುಗಳು ರಾಜಸ್ವ ನಿರೀಕ್ಷೆಕರಾದ ಚೇತನ್ ಕುಮಾರ್ ಗ್ರಾಮ ಲೆಕ್ಕಾಧಿಕಾರಿ ಶರಣಬಸವ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *