BIG BREAKING NEWS
ರಾಜ್ಯ ರಾಜಕೀಯ ಪ್ರಕೃತಿ ವಿಕೋಪದ ಬಗ್ಗೆ ಸ್ಫೋಟಕವಾದ ಭವಿಷ್ಯವನ್ನು ಕೋಡಿ ಮಠದ ಸ್ವಾಮೀಜಿ ನುಡಿದ್ದಿದ್ದಾರೆ.
ಹಿಂದಿನ ಅನೇಕ ಬಾರಿ ಕೋಡಿ ಮಠದ ಶ್ರೀಗಳು ನುಡಿದಿರುವ ಭವಿಷ್ಯಗಳು ಬಹುತೇಕ ಸತ್ಯವಾಗಿವೆ. ಇದೀಗ ರಾಜ್ಯ ರಾಜಕೀಯ ಹಾಗೂ ಪ್ರಕೃತಿ ವಿಕೋಪದ ಬಗ್ಗೆ ಈಗ ಭವಿಷ್ಯವನ್ನು ಹೇಳಿದ್ದಾರೆ.
ಹಾಸನ ಜಿಲ್ಲೆ ಅರಸಿಕೆರೆಯ ಕೋಡಿಮಠದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿ ಶುಭಕೃತ ನಾಮ ಸಂವತ್ಸವರದ ಫಲವಾಗಿ ಮಳೆ ಗುಡುಗು ಮಿಂಚಿನ ಮೂಲಕ ಅಲ್ಲೋಲ ಕಲ್ಲೋಲವನ್ನು ಉಂಟು ಮಾಡಲಿದೆ. ಬಯಲು ಸೀಮೆ ಮಲೆನಾಡು, ಮಲೆನಾಡು ಬಯಲು ಸೀಮೆ ಮಲೆನಾಡಾಗಲಿದೆ ಎಂದು ಭವಿಷ್ಯ ಹೇಳಿದ್ದಾರೆ. ಭೂಮಿ ಕಂಪಿಸಲಿದೆ. ಗುಡ್ಡಗಳು ಕುಸಿಯಲಿವೆ, ಹಿಂಗಾರು ಮಳೆ ಕಡಿಮೆಯಾಗಲಿದೆ. ಇದು ಈ ಸಂವತ್ಸರದ ಕಡೆಯವರೆಗೂ ಇರಲಿದೆ. ದೇಶಕ್ಕೆ ಕಷ್ಟ ಉಂಟಾಗಲಿದೆ. ರೋಗ ರುಜಿನೆಗಳು ಹೆಚ್ಚಾಗಲಿವೆ. ಕಳ್ಳರ ಕಾಟಗಳು, ಅಪಮತ್ಯುಗಳು ಮತೀಯ ಗಲಭೆಗಳು ರಾಜಕೀಯ ಕಲಹಗಳು ಆಗಲಿವೆ. ಸಾವು ನೋವಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಭವಿಷ್ಯ ಹೇಳಿದ್ದಾರೆ.
ಸುದ್ದಿ ಜಾಹೀರಾತಿಗಾಗಿ ಸಂಪರ್ಕಿಸಿ: 8660924503