ಎಸ್ ಎಸ್ ಎಲ್ ಸಿಯಲ್ಲಿ ಚಳ್ಳಕೆರೆ ಮೊದಲ ಸ್ಥಾನದಲ್ಲಿದೆ

ಜಿಲ್ಲಾ ಸುದ್ದಿ

ಹಿಂದುಳಿದ ತಾಲೂಕುಗಳಲ್ಲಿ ಶಿಕ್ಷಣಕ್ಕೆ ಪೂರಕವಾಗುವ ಚಟುವಟಿಕೆಗಳಲ್ಲಿ ಸರ್ಕಾರದ ಎಲ್ಲಾ ಇಲಾಖೆ ಅಧಿಕಾರಿಗಳು ನೆರವಾಗಿ ಶೈಕ್ಷಣಿಕ ನೆಲೆಗಟ್ಟು ಭದ್ರಗೊಳಿಸಲು ಸಹಕಾರಿಯಾಗಬೇಕೆಂದು ತಹಶೀಲ್ದಾರ್ ರಘು ಮೂರ್ತಿ ಹೇಳಿದರು.

 

 

 

ಅವರು ಚಳ್ಳಕೆರೆ ನಗರದಲ್ಲಿ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘ ಜಿಲ್ಲಾ ಪ್ರಗತಿಪರ ಶಿಕ್ಷಕರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ ತಾಲೂಕಿನಲ್ಲಿ ಮಂತ್ರಿಗಳ ಮತ್ತು ಶಾಸಕರ ದೂರ ದೃಷ್ಟಿಯಿಂದ ಸರ್ಕಾರಿ ಶಾಲೆಗಳಿಗೆ ಈಗಾಗಲೇ ಗರಿಷ್ಠ ಪ್ರಮಾಣದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಇದರ ಜೊತೆಯಲ್ಲಿ ಶಿಕ್ಷಣ ಇಲಾಖೆ ಮತ್ತು ಕಂದಾಯ ಇಲಾಖೆಯ ಆಯೋಗದಲ್ಲಿ ಹಲವಾರು ದಾನಿಗಳನ್ನು ಒಪ್ಪಿಸಿ 9 ಸ್ಮಾರ್ಟ್ ಕ್ಲಾಸ್ ಗಳನ್ನಾಗಿ ಪರಿವರ್ತಿಸಲಾಗಿದೆ. ಇನ್ನು ಶಿಕ್ಷಣಕ್ಕೆ ಪೂರಕವಾಗಿ ದಿನಪತ್ರಿಕೆಯವರೊಂದಿಗೆ ವಿಶೇಷ ಸಂಚಿಕೆಗಳ ಮೂಲಕ ಉತ್ತಮ ಪಠ್ಯವನ್ನು ಕೂಡ ಒದಗಿಸಲಾಗಿದೆ. ಹಲವಾರು ಶಾಲೆಗಳಿಗೆ ಅಗತ್ಯವಿರುವ ಶುದ್ಧ ಕುಡಿಯುವ ನೀರಿನ ಘಟಕದ ವ್ಯವಸ್ಥೆಯನ್ನು ಮಾಡಲಾಗಿದೆ ಇದೆಲ್ಲಾ ಇಲ್ಲಿನ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ದೂರದರ್ಶಿತ್ವ ತಾಲೂಕು ಆಡಳಿತದ ವತಿಯಿಂದ ಶಿಕ್ಷಕರುಗಳಿಗೆ ಶಿಕ್ಷಣಕ್ಕೆ ಪೂರಕವಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಕಟಿ ಬದ್ಧರಾಗಿದ್ದೇವೆ ಎಂದು ಹೇಳಿದರು ಚಳ್ಳಕೆರೆ ಕ್ಷೇತ್ರದ ಶಾಸಕರಾದ ಟಿ ರಘುಮೂರ್ತಿ ಮಾತನಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಶಿಕ್ಷಕರುಗಳ ಪರಿಶ್ರಮದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಚಳ್ಳಕೆರೆ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ ಉಳಿದಂತೆ ಇನ್ನಿತರ ಶೈಕ್ಷಣಿಕ ಹಂತದಲ್ಲೂ ಇದೇ ರೀತಿ ಪ್ರಗತಿ ಸಾಧಿಸುವುದು ಅವಶ್ಯಕತೆ ಇದೆ ಶೈಕ್ಷಣಿಕ ಪ್ರಗತಿಗೆ ನನ್ನ 19 ವರ್ಷ ಅವಧಿಯಲ್ಲಿ ಸಾಕಷ್ಟು ಆದ್ಯತೆಯನ್ನು ನೀಡಲಾಗಿದೆ ಎಂದು ಹೇಳಿದರು ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತೇಶ್ ಚಂದ್ರಶೇಖರ್ ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಮತ್ತು ಜಿಲ್ಲಾ ಮತ್ತು ತಾಲೂಕು ಮಟ್ಟದ ಶಿಕ್ಷಕರ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *