ರೈತರ ಬೆಳೆ ಪರಿಹಾರವನ್ನು ಸಾಲಕ್ಕೆ ಹೊಂದಾಣಿಕೆ ಮಾಡಬೇಡಿ

ಜಿಲ್ಲಾ ಸುದ್ದಿ

ಸಾಮಾಜಿಕ ಭದ್ರತಾ ಪಿಂಚಣಿ ಮತ್ತು ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಬಿಡುಗಡೆ ಯಾಗುವ ಅನುದಾನದ ಹಣವನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತಿತ್ತು. ಈ ಹಣವನ್ನು ಈ ಬ್ಯಾಂಕ್ ಗಳು ಇದನ್ನು ರೈತರ ಸಾಲಕ್ಕೆ ಮರು ಹೊಂದಾಣಿಕೆಮಾಡಿಕೊಳ್ಳ ಕೂಡದೆಂದು ತಹಶೀಲ್ದಾರ್ ರಘುಮೂರ್ತಿ‌ಸೂಚಿಸಿದರು, ಅವರು ಪರಶುರಾಮಪುರ ಹೋಬಳಿಯ ಜಾಜೂರು ಪ್ರಗತಿ ಗ್ರಾಮೀಣ ಬ್ಯಾಂಕಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ದಿನಂಪ್ರತಿ ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರು ಸರ್ಕಾರದಿಂದ ಈ ರೀತಿ ಬಿಡುಗಡೆಯಾದ ಜೀವನ ನಿರ್ವಹಣೆಗೆ ಇರುವ ಈ ಹಣವನ್ನು ಬ್ಯಾಂಕಿನ ಸಾಲಕ್ಕೆ ಜಮಾ ಮಾಡಿಕೊಳ್ಳಲಾಗುತ್ತಿದೆ ಇದರಿಂದ ಜೀವನ ನಿರ್ವಹಣೆ ಕಷ್ಟಸಾಧ್ಯವೆಂದು ತಮ್ಮ ಅಳಲನ್ನು ತೋಡಿಕೊಂಡ ಹಿನ್ನೆಲೆಯಲ್ಲಿ ಜಾಜೂರು ಪ್ರಗತಿ ಗ್ರಾಮೀಣ ಬ್ಯಾಂಕಿಗೆ ಭೇಟಿ ನೀಡಿ ಬ್ಯಾಂಕಿನ ಪ್ರಬಂಧಕರಾದ ವಿಜಯ ಭಾಸ್ಕರ್ ಮತ್ತು ಸಾರ್ವಜನಿಕರೊಂದಿಗೆ ಸಂವಾದಕಾರ್ಯಕ್ರಮವನ್ನು ಏರ್ಪಡಿಸಿ ಬ್ಯಾಂಕಿನ ಮ್ಯಾನೇಜರ್ ಮತ್ತು ಸಿಬ್ಬಂದಿಗಳಿಗೆ ಮನವಿ ಮಾಡಿದರು, ಕಷ್ಟದಲ್ಲಿ ರುವ ಈ ಜನರ ಜೀವನ ನಿರ್ವಹಣೆಗೆನೀಡಿರುವ ಹಣವನ್ನು ಹಿಂದಿನ ಸಾಲಕ್ಕೆ ಜಮೆ ಮಾಡಿಕೊಳ್ಳಕೂಡದು, ತಾಲೂಕಿನಲ್ಲಿರುವ ಬಹುತೇಕ ರೈತರಬದುಕಿಗೆ ಈ ಹಣ ಆಶ್ರಯವಾಗುತ್ತದೆ ಬ್ಯಾಂಕಿನ ಸಿಬ್ಬಂದಿಗಳು ಇದನ್ನು ಗಮನಿಸಿ ರೈತರುಗಳಿಗೆ ಆತ್ಮಸ್ಥೈರ್ಯ ತುಂಬಬೇಕು ರೈತರುಗಳು ಕೂಡ ಬ್ಯಾಂಕ್ ನೊಂದಿಗೆ ಸೌಹಾರ್ಧಯುತವಾಗಿ ವ್ಯವಹಾರಮಾಡಿಕೊಳ್ಳಬೇಕೆಂದು ಮನವಿ ಮಾಡಿದರು, ಇದೇ ಸಂದರ್ಭದಲ್ಲಿ ಗ್ರಾಮದ ವೈದ್ಯಾಧಿಕಾರಿಗಳಾದ ಡಾಕ್ಟರ್ ಬಸವರಾಜು ಪ್ರಗತಿ ಗ್ರಾಮೀಣ ಬ್ಯಾಂಕಿನ ಪ್ರಬಂಧಕರಾದ ವಿಜಯ ಭಾಸ್ಕರ ಮುಖಂಡರಾದ ಹೊನ್ನೂರ್ ಗೋವಿಂದಪ್ಪ ಗ್ರಾಮ ಲೆಕ್ಕಾಧಿಕಾರಿ ಉಮೇಶ್ ಮತ್ತಿತರು ಉಪಸ್ಥಿತರಿದ್ದರು

 

 

 

Leave a Reply

Your email address will not be published. Required fields are marked *