ಬೆಳೆ ಪರಿಹಾರ ಆತಂಕ ಬೇಡ: ತಹಶೀಲ್ದಾರ್ ರಘುಮೂರ್ತಿ

ಜಿಲ್ಲಾ ಸುದ್ದಿ

ಚಳ್ಳಕೆರೆ ತಾಲೂಕಿನಲ್ಲಿನ ಯಾವುದೇ ರೈತರು ಬೆಳೆ ಪರಿಹಾರಕ್ಕೆ ಸಂಬಂಧಿ ಸಿದಂತೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲವೆಂದು ತಹಶೀಲ್ದಾರ್ ಎನ್ ರಘು ಮೂರ್ತಿ ಅಭಯ ನೀಡಿದರು. ಅವರು ಇಂದು ಮಲ್ಲೂರಹಳ್ಳಿ ನಾಯಕನಹಟ್ಟಿ ಗೌರಸಮುದ್ರ ಮತ್ತು ಓಬನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಿ ಮಾತನಾಡಿದರು, ಚಳ್ಳಕೆರೆ ತಾಲ್ಲೂಕು ರಾಜ್ಯದಲ್ಲೇ ಎರಡನೇ ದೊಡ್ಡ ತಾಲೂಕಾಗಿರುವುದರಿಂದ ಅತಿ ಹೆಚ್ಚು ಅಂದರೆ 46,000 ಎಕ್ಟೇರ್ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಬೆಳೆ ಪರಿಹಾರಕ್ಕೆಸಂಬಂಧಿಸಿದಂತೆ ಆನ್ಲೈನ್ ನಲ್ಲಿ ಬೆಳೆ ಪರಿಹಾರ ಸಾಫ್ಟ್ವೇರ್ ನಲ್ಲಿ ಡಾಟ ದಾಖಲಿಸಲಾಗಿದೆ. ಜಿಲ್ಲಾಧಿಕಾರಿಗಳು ಕೂಡ ಈ ಬಗ್ಗೆ ಸಂಬಂಧಿಸಿದ ಎಲ್ಲ ತಹಶೀಲ್ದಾರ್ ಗಳಿಗೆ ಸೂಚನೆ ನೀಡಿ ರೈತರ ಬೆಳೆ ಪರಿಹಾರಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣ ಕೈ ತಪ್ಪದಂತೆ ನಿಗಾ ವಹಿಸಬೇಕೆಂದು ಸೂಚನೆ ನೀಡಿದ್ದಾರೆ ಅದರಂತೆ ಈಗಾಗಲೇ ತೋಟಗಾರಿಕಾ ಬೆಳೆಗಳಿಗೆ ಸಂಬಂಧಿಸಿದಂತೆ ಶೇಕಡ 90ರಷ್ಟು ರೈತರಿಗೆ ಪರಿಹಾರಪಾವತಿಸಲಾಗಿದೆ ಉಳಿದ 10% ಪರಿಹಾರ ಕೆಲವು ನ್ಯೂನತೆಗಳನ್ನು ಸರಿಪಡಿಸಿದ ನಂತರ ಪಾವತಿಸಲಾಗುತ್ತದೆ ಉಳಿದಂತೆ ಕೃಷಿ ಬೆಳೆಗಳಿಗೆಸಂಬಂಧಿಸಿದ ಪರಿಹಾರ ಒಂದು ವಾರದಲ್ಲಿ ರೈತರ ಖಾತೆಗಳಿಗೆ ಜಮಾ ಆಗುವ ನಿರೀಕ್ಷೆ ಇದೆ ಆದ್ದರಿಂದ ಯಾವುದೇ ರೈತರು ತಮ್ಮ ಬದುಕನ್ನು ಬಿಟ್ಟು ಜಿಲ್ಲಾಧಿಕಾರಿಗಳ ಕಚೇರಿ ಉಪ ವಿಭಾಗಾಧಿಕಾರಿಗಳ ಕಚೇರಿ ಮತ್ತು ತಾಲೂಕ ಕಚೇರಿಗೆಅಲೆದಾಡುವುದನ್ನು ನಿಲ್ಲಿಸಬೇಕು. ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕುಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ,ತೋಟಗಾರಿಕೆ ಇಲಾಖೆ ಎಲ್ಲ ಅಧಿಕಾರಿ ನೌಕರರುಗಳು ರೈತರ ಬದುಕಿಗೆನೆರವಾಗುವ ಎಲ್ಲ ಕೆಲಸ ಕಾರ್ಯಗಳನ್ನುಕಾಲಮಿತಿಯೊಳಗೆ ಮಾಡಿಕೊಡ ಲಾಗುವುದೆಂದು ರೈತರಿಗೆ ತಿಳಿಸಿದರು.

 

 

 

Leave a Reply

Your email address will not be published. Required fields are marked *