ರೋಗಿಗಳನ್ನು ಸುಖಾ ಸುಮ್ಮನೆ ಸ್ಥಳಾಂತರಿಸಿದರೆ ಪರಿಣಾಮ ನೆಟ್ಟಗಿರಲ್ಲ

ರಾಜ್ಯ

ನಮ್ಮ ಜಿಲ್ಲೆ ಹಿಂದುಳಿದ ಜಿಲ್ಲೆ,ಅತಿ ಹೆಚ್ಚು  ಬಡವರಿದ್ದು ಬಡ ರೋಗಿಗಳಿಂದ ಹಣ ವಸೂಲಿ ಮಾಡುವುದು ಕಡಿಮೆ ಮಾಡಿ ಇದೇ ರೀತಿ  ಸಾರ್ವಜನಿಕರಿಂದ ದೂರು ಹೆಚ್ಚಿದರೆ ಹಣ ಪಡೆಯುವ  ಡಾಕ್ಟರ್ ಗಳ ವಿರುದ್ದ ಸೂಕ್ತ  ಕ್ರಮ ಜರುಗಿಲಾಗವುದು ಎಂದು ಡಾಕ್ಟರ್ ಗಳಿಗೆ ಮತ್ತು ಡಿಎಸ್ ಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಖಡಕ್  ಎಚ್ಚರಿಕೆ ನೀಡಿದರು. 
ಇಂದು ನಗರದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ  ಸಾರ್ವಜನಿಕರ ದೂರುಗಳ ಮಾಹಿತಿ ಮತ್ತು ಖುದ್ದಾಗಿ ರೋಗಿಗಳ ಸಮಸ್ಯೆ ಆಲಿಸಿ ಮಾಹಿತಿ ಪಡೆದು ಮಾತನಾಡಿದರು.
ಜಿಲ್ಲಾಸ್ಪತ್ರೆಗೆ ಜಿಲ್ಲೆಯ  ಇತರೆ  ತಾಲ್ಲೂಕಿನ ಗ್ರಾಮಗಳಿಂದ  ಸಾವಿರಾರು  ರೋಗಿಗಳು ಬರುತ್ತಾರೆ. ಅವರು ಸಾಕಷ್ಟು ಹಣ ನೀಡಬೇಕು ಇಲ್ಲದಿದ್ದರೆ ಸರಿಯಾಗಿ ಚಿಕಿತ್ಸೆ ನೀಡಲ್ಲ  ಎಂದು  ದೂರು ಹೇಳಿದ್ದಾರೆ.
ಕೀಲು ಮೂಳೆ ಮತ್ತು ಹೆರಿಗೆ ವಿಭಾಗಗಳಲ್ಲಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ.ಒಂದು ಅಪರೇಷನ್ ಗೆ   ಕನಿಷ್ಟ  5 ರಿಂದ 10 ಸಾವಿರ ಹಣ ಪಡೆಯುತ್ತಾರೆ ಎಂಬ ದೂರುಗಳಿವೆ.ಬಡವರ ಬಳಿ ಹಣ ವಸೂಲಿ ಮಾಡಬೇಡಿ, ಸರ್ಕಾರ ಸಂಬಳ ನೀಡುತ್ತದೆ. ಬಡವರು ಸಾಲ ಮಾಡಿ ನಿಮಗೆ ಹಣ ನೀಡುತ್ತಾರೆ. ನೀವು ಏನೆಲ್ಲಾ ಬಿಸಿನೆಸ್ ಮಾಡುತ್ತಿರ  ಅಂತ ನನಗೆ ಗೊತ್ತು ಆದರೆ ಬಡವರಿಗೆ ತೊಂದರೆ ಆಗಬಾರದು.ಡಾಕ್ಟರ್ ಗಳು ಹೊಂದಾಣಿಕೆ ಮಾಡಿಕೊಂಡು ರೋಗಿಗಳ‌ ಕಷ್ಟವನ್ನು ಆಲಿಸಬೇಕು.ರೋಗಿಗಳಿಗೆ ಇಲ್ಲೇ ಚಿಕಿತ್ಸೆ ನೀಡದೇ ಸಬೂಬು ಹೇಳಿ ಬೆಂಗಳೂರು,ಮಣಿಪಾಲ್ ಇತರೆ ಹೊರ ಜಿಲ್ಲೆಗೆ ಕಳಿಸಿ ಕೈ ತೊಳೆದುಕೊಂಡರೆ ಗ್ರಾಹಚಾರ ನೆಟ್ಟಗಿರಲ್ಲ, ಇಲ್ಲೇ ಮೊದಲು ಪ್ರಯತ್ನ ಮಾಡಿ ರೋಗಿಗಳಿಗೆ ಉಳಿಸುವ ಕೆಲಸ ಮಾಡುವುದು ಬಿಟ್ಟು ಹೊರ ಜಿಲ್ಲೆಗೆ ಕಳಿಸುತ್ತಿರಾ ಎಂದು ಕಿಡಿಕಾರಿದರು. 
ಸಿಜೇರಿಯನ್ ಕಡಿಮೆ ಮಾಡಿ: ಸಿಜೇರಿಯನ್ ಮಾಡದೇ ಹೆರಿಗೆ ಮಾಡಿಸುವುದಕ್ಕೆ ಒತ್ತು ಕೊಡಬೇಕು. ನಿಮ್ಮ‌ ಹಿತಕ್ಕಾಗಿ  ಸಿಜೇರಿಯನ್ ಮಾಡಬೇಡಿ.ಅದಷ್ಟು ಸಾಮಾನ್ಯ ಹೆರಿಗೆ ಮಾಡಿಸಲು ಪ್ರಯತ್ನಿಸಿದರೆ ಮಹಿಳೆಯರಿಗೆ ಅನುಕೂಲವಾಗುತ್ತದೆ. ಪ್ರಾಣಕ್ಕೆ ಅಪಾಯ ಇದ್ದಂತಹ ಸಂದರ್ಭದಲ್ಲಿ ಅನಿವಾರ್ಯದಾಗ ಸಿಜೇರಿಯನ್ ಗೆ ಒತ್ತು ನೀಡಬೇಕು ಎಂದು ಡಾಕ್ಟರ್ ಗಳಿಗೆ ಸಲಹೆ ನೀಡಿದರು‌. 60% ಸಿಜೇರಿಯನ್ ಸುಧಾರಣೆ ಮಾಡುವುದು ಯಾವಾಗ, ಎಲ್ಲಾ ನಿಮ್ಮ ಮೇಲೆ ನಿಂತಿದೆ.ಕಡಿಮೆ ಮಾಡಲು ನಿಮಗೆ ಸಾಧ್ಯವಿದೆ. ಸ್ವಲ್ಪ ಸ್ವಾರ್ಥ ಬಿಟ್ಟು ಕೆಲಸ ಮಾಡಬೇಕು ಎಂದು ಸೂಚಿಸಿದರು.ಹೆರಿಗೆ ಮಾಡಿಸಲು ಹಣ ಪಡೆಯುತ್ತಿದ್ದಿರಾ ಎಂದು ಗೊತ್ತು ಒಂದು ಅವಕಾಶ ನೀಡುತ್ತೇನೆ.ಆ ರೀತಿ ಹಣ ಪಡೆಯುವ ಡಾಕ್ಟರ್ ತಿದ್ದಿಕೊಂಡು ಹೋದರೆ ಒಳ್ಳೆಯದು ಎಂದು ಕಿವಿ ಮಾತು ಹೇಳಿದರು. ಒಟ್ಟು 6 ಜನ ಹೆರಿಗೆ ವಿಭಾಗದ ಡಾಕ್ಟರ್ ಇದ್ದು ಸಮಯ ನಿಗದಿ ಮಾಡಿಕೊಳ್ಳದೇ ರೋಗಿಗಳಿಗೆ ತೊಂದರೆ ಆಗದಂತೆ ಕೆಲಸ ಮಾಡಬೇಕು ಎಂದರು.
ಕೀಲು ಮೂಳೆ ವಿಭಾಗದಲ್ಲಿ ಹಣ ಹಾವಳಿ ಹೆಚ್ಚಾಗಿದೆ ಎಂಬ ಮಾತಿದೆ.
ಕೀಲು ಮೂಳೆ ೫ ವೈದ್ಯರು ಇದ್ದು, ಡಿಎಂಎ ಯೂನಿಟ್ ಇಬ್ಬರು ಡಾಕ್ಟರ್ ಗೆ  ಯೂನಿಟ್  ಕೊಡಬಾರದು ಎಂದು ಕೆಲವು ಕೀಲು ಮೂಳೆ ಡಾಕ್ಟರ್  ಹೇಳುತ್ತಾರೆ ಅವರು ಯಾರು ? ರೋಗಿಗಳ ಸಂಖ್ಯೆ ಹೆಚ್ಚಾದರೆ ಸಮಸ್ಯೆ ಹೆಚ್ಚಾಗುತ್ತದೆ.ಯುನಿಟ್ ಹಂಚಿಕೆ ಸರಿಯಲ್ಲ. ಎಲ್ಲಾರೂ ಒಟ್ಟಿಗೆ ಕೆಲಸ ಮಾಡಬೇಕು ಬಡವರಿಗೆ ತುರ್ತಾಗಿ ಚಿಕಿತ್ಸೆ ನೀಡುವುದು ನನಗೆ ಮುಖ್ಯವಾಗಿದೆ. ನಿಮ್ಮಲ್ಲಿ ಸಮಸ್ಯೆ ಸರಿ ಮಾಡಿಕೊಂಡು ಕೆಲಸ‌ ಮಾಡಿ ಮತ್ತು ಡಿಎಸ್ ಅವರು ಸರಿಯಾಗಿ ಇಂತಹ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದ್ದಾರೆ ಎಂದು ಡಿಎಸ್ ವಿರುದ್ದು ಹರಿಹಾಯ್ದರು.
ಆಸ್ಪತ್ರೆ ಬೆಳವಣಿಗೆ ಮತ್ತು ಆಧುನೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು.ರೋಗಿಗಳ ಸಮಸ್ಯೆ ಏನಿದೆ ಎಂಬುದನ್ನು ತಿಳಿದು ಆದೇಶ ಮಾಡಬೇಕು. 
ಕೀಲು  ಮೂಳೆ ಸಾಮಾನುಗಳ ಖರೀದಿ
೪ ವರ್ಷಗಳ ಹಿಂದೆ ಬಿಟ್ಟರೆ ಮತ್ತೆ ಆಗಿಲ್ಲ. ಯಾರೋ  ಒಬ್ಬನ ಬಳಿ  ಚಿಕಿತ್ಸೆ ಸಾಮಾನು ಖರೀದಿ ಮಾಡುತ್ತಾರೆ. ಆ  ಸಾಮಾನುಗಳು ರೋಗಿಗಳಿಗೆ ಬಳಸಲು ಯೋಗ್ಯವಾಗಿದೆಯೇ ಎಂದು ಪರೀಕ್ಷಿಸುವವರು ಯಾರು ಎಂದು ಡಿಎಸ್ ಅವರಿಗೆ ಪ್ರಶ್ನಿಸಿದರು.
ಮಾಂಗಿಲಾಲ್ ಹುಬ್ಬಳ್ಳಿ ಕಡೆಯವರು. ಕೀಲು ಮೂಳೆ ಸಾಮಾನುಗಳನ್ನು ಹೆಚ್ಚಿನ ಬೆಲೆಗೆ ಆಸ್ಪತ್ರೆಗೆ ಮತ್ತು ರೋಗಿಗಳಿಗೆ ಹತ್ತಾರು ವರ್ಷಗಳಿಂದ ಸರಬರಾಜು ಮಾಡುತ್ತಾರೆ ಎಂದರೆ ಅ ವಸ್ತುಗಳು ಯೋಗ್ಯವಿಲ್ಲ ಎಂದರೆ ಯಾರು ಹೊಣೆ ಎಂದು ಡಿಎಸ್ ಅವರಿಗೆ ಪ್ರಶ್ನಿಸಿದರು.
ಜಿಲ್ಲಾ ಆಸ್ಪತ್ರೆಯ ಡಿಎಸ್ ಅವರು ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ.ಕೆಲವರನ್ನು ಎದುರಿಸಲು ಆಗದೇ ಇದ್ದರೆ ಜಾಗ ಖಾಲಿ ಮಾಡಿ ನಮಗೆ ಬಡವರ ಆರೋಗ್ಯ ಮುಖ್ಯ ಎಂದರು. ಕೂಡಲೇ ಜಿಲ್ಲಾಸ್ಪತ್ರೆಗೆ ಏನೆಲ್ಲಾ ವಸ್ತುಗಳು, ಉಪಕರಣಗಳು, ಚಿಕಿತ್ಸೆ ಸಾಮಾಗ್ರಿಮಗಳು ಬೇಕು  ಎಲ್ಲಾ  ಮಾಹಿತಿ ಸಿದ್ದ ಮಾಡಿ ನೀಡಬೇಕು ಜೊತೆಗೆ ಹಳೆಯ ಎರಡು ಕೋಟಿ ಬಾಕಿ‌ ನೀಡಲು ಪುನಃ ಪರಿಶೀಲಿಸಿ ಹಣ ಬಿಡುಗಡೆ ಮಾಡಬೇಕು ಸದ್ಯಕ್ಕೆ ಹಣ ನೀಡಬೇಡಿ ಎಂದು ಡಿಎಸ್ ಅವರಿಗೆ ಸೂಚಿಸಿದರು. 
ಈ‌ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಡಿಎಸ್.ಡಾ.ಬಸವರಾಜ್, ಆರ್,ಎಂ.ಓ, ಡಾ. ಆನಂದ್ ಪ್ರಕಾಶ್,  ಡಿಎನ್ ಬಿ ನೋಡಲ್ ಅಧಿಕಾರಿ ಡಾ.ಶ್ರೀರಾಮ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸುರೇಶ್,  ನಗರಸಭೆ ಸದಸ್ಯ ಹರೀಶ್, ಮುಖಂಡರಾದ ಪರಮೇಶ್, ವೀರೇಶ್, ರವಿಕುಮಾರ್ ಮತ್ತು ಹೆರಿಗೆ ಮತ್ತು ಕೀಲು ಮೂಳೆ ವಿಭಾಗದ ಡಾಕ್ಟರ್ ಗಳು  ಹಾಜರಿದ್ದರು‌.

 

 

 

Leave a Reply

Your email address will not be published. Required fields are marked *