ವಿಶೇಷ ಚೇತನ ಮಕ್ಕಳು ಎಂದು ಪೋಷಕರು ಕೀಳಿರಿಮೆ ತೋರಬೇಡಿ

ಆರೋಗ್ಯ

ವಿಶೇಷಚೇತನ ಮಕ್ಕಳು ಯಾವುದೇ ಹಂತದಲ್ಲೂ ಎದೆಗುಂದದೆ ಸಾಧನೆ ಮಾಡುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕರೆ ನೀಡಿದರು.
ನಗರದ ಕೋಟೆ ಶಾಲಾ ನಗರದ ಕೋಟೆ ಶಾಲಾ ಆವರಣದಲ್ಲಿ  ಜಿಲ್ಲಾ ಪಂಚಾಯತ್ , ತಾಲೂಕು ಪಂಚಾಯತ್ ,ಕ್ಷೇತ್ರ ಶಿಕ್ಷಣಧಿಕಾರಿಗಳು, ಬ್ಲಾಕ್ ಯೋಜನಾ ಸಮನ್ವಯಾಧಿಕಾರಿಗಳ  ಕಚೇರಿ, ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ  ಸಹಯೋಗದಲ್ಲಿ  ತಾಲೂಕಿನ 1 ರಿಂದ 12 ತರಗತಿ  ಮಕ್ಕಳಿಗೆ ಆಯೋಜಿಸಿದ್ದ  “ವಿಶೇಷ ಚೇತನ  ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು‌.
ಕಳೆದ 50 ವರ್ಷಗಳ ಹಿಂದೆ ಅಂಗವಿಕಲರ ಬಗ್ಗೆ ತಾತ್ಸಾರ ಮನೋಭಾವನೆ ಇತ್ತು. ಆದರೆ ಇಂದು ಅದು  ಅಂತಹ ಮನೋಭಾವ  ಬದಲಾಗಿದ್ದು, ಅಂಗವಿಕಲತೆ ಹೊಂದಿರುವವರು ಸಹ ನೂರಾರು ಜನ  ಐಎಎಸ್ ಅಧಿಕಾರಿ, ದೊಡ್ಡ ದೊಡ್ಡ ವಿಜ್ಞಾನಿಗಳು, ವ್ಯಾಪಾರಸ್ಥರು, ಉದ್ಯಮಿಗಳು, ಶಿಕ್ಷಕರು, ಬ್ಯಾಂಕ್ ಉದ್ಯೋಗಿಗಳಾಗುವ ಮೂಲಕ ವಿಕಲಚೇತನರು  ಸಾಕಷ್ಟು ಸಾಧನೆ  ಮಾಡಬಲ್ಲರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಆದ್ದರಿಂದ ಮಕ್ಕಳು ಯಾವುದೇ ಹಂತದಲ್ಲೂ ಎದೆಗುಂದಬಾರದು, ಅದೇ ರೀತಿ ಪೋಷಕರು ತಮ್ಮ ವಿಶೇಷ  ಚೇತನ ಮಕ್ಕಳನ್ನು ಬೆಳೆಸುವಲ್ಲಿ ತಾತ್ಸಾರ ತೋರದೇ ಹೆಚ್ಚನ ಗಮನ ಹರಿಸಬೇಕು ಎಂದರು.
ಸರ್ಕಾರ ವಿಕಲಚೇತನರಿಗಾಗಿ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ಅದನ್ನು ಬಳಸಿಕೊಂಡು ಎಷ್ಟೇ ಸಮಸ್ಯೆ ಆದರೂ ಕೂಡ ಮಕ್ಕಳನ್ನು ಉತ್ತಮ ರೀತಿಯಲ್ಲಿ ಶಿಕ್ಷಣ ನೀಡಿ  ಬೆಳೆಸಬೇಕು ಎಂದು ಹೇಳಿದರು.
ನಮ್ಮ ವೈದ್ಯಕೀಯ ಕ್ಷೇತ್ರ ಸಾಕಷ್ಟು ಬೆಳೆದಿದೆ.ಆಧುನಿಕ‌ ಯುಗದಲ್ಲಿ  ತಂತ್ರ ಜ್ಞಾನವನ್ನು ಬಳಸಿಕೊಂಡು ಸಾಧನಗಳನ್ನು ರೂಪಿಸಿ ಕಾಲು ಇಲ್ಲದವರಿಗೆ ಓಡಾಡುವಂತೆ, ಕೈ ಜೋಡಣೆ,ಕಿವಿ ಮಿಷನ್, ಬ್ರೈಲ್ ಕಿಟ್  ನೀಡುವುದರಿಂದ  ವಿಕಲಚೇತನರಿಗೆ ಅನುಕೂಲವಾಗುತ್ತಿದೆ.. ಇದರಿಂದ ಅವರು ಕೂಡ ಎಲ್ಲರಂತೆ ಕಾರ್ಯ ಚಟುವಟಿಕೆಯಲ್ಲಿ ತೊಡಗಲು  ಸಹಕಾರಿಯಾಗಿದೆ.
ವಿಶೇಷ ಚೇತನರಿಗಾಗಿಯೇ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಲ್ಲಿ ಸಾಧನೆಯನ್ನು ಮಾಡುತ್ತಿದ್ದಾರೆ. ಆದ್ದರಿಂದ ಪ್ರತಿ ಮಕ್ಕಳಿಗೂ ಉತ್ತಮ ಮಾರ್ಗದರ್ಶಕರ ಅವಶ್ಯಕತೆ ಇದೆ ಎಂದರು.
ಹುಟ್ಟುತ್ತಲೇ ಕಣ್ಣು ಕಳೆದುಕೊಂಡಿರುವ ಕುರಬರಹಳ್ಳಿ ಶಾಲೆಯ  ಬಾಲಕಿ ರಕ್ಷಾ  ಕಂಠವನ್ನು ಹೊಂದಿದ್ದು, ತಮ್ಮ ಸ್ವರದಿಂದ ಉತ್ತಮ ಹಾಡುಗಳನ್ನು ಹಾಡುತ್ತಿದ್ದಾರೆ. ಅವರಿಗೆ ಮೈಸೂರಿನ ತರಬೇತಿ ಕೇಂದ್ರದಿಂದ ತರಭೇತಿ ಪಡೆಯಲು ಲ್ಯಾಪ್‌ಟಾಪ್ ಸೇರಿದಂತೆ ಇತರೆ ಸಲಕರಣಿಗಳನ್ನು ಹೊದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಇಓ ತಿಪ್ಪೇಸ್ವಾಮಿ ಮಾತನಾಡಿ ತಾಲೂಕಿನಲ್ಲಿ ಒಟ್ಟು 740 ಜನ ವಿಲಚೇನರಿದ್ದಾರೆ.  40 ಜನ ಗೃಹಧಾರಿತ ಶಿಕ್ಷಣ, 46 ಶಾಲಾಧಾರಿತ ಶಿಕ್ಷಣ ಪಡೆಯುತ್ತಿದ್ದಾರೆ.  ಶಾಲೆಗೆ ಹಾಜರಾಗುವ ವಿಕಲಚೇತನ ಹೆಣ್ಣು ಮಕ್ಕಳಿಗೆ 200 ರೂ ಪ್ರತಿ ತಿಂಗಳು ನೀಡುತ್ತಾರೆ.  ಅದರ ಜೊತೆ ಸಾರಿಗೆ ಮತ್ತು ಬೆಂಗಾವಲು 650 ರೂ, ಉಚಿತ ಫಿಜಿಯೋಥೇರೆಪಿ ಸೇವೆ ಹಾಗೂ ವೈದ್ಯರ ಮತ್ತು ಬಿರ್ಟಿಗಳ ಮೂಲಕ ಮಕ್ಕಳಿಗೆ ಅಪ್ತ ಸಮಾಲೋಚನೆ , ಅಂದ ಮಕ್ಕಳಿಗೆ ಪ್ರತಿ ತಿಂಗಳು 200 ರೂ ಸರ್ಕಾರದಿಂದ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಈ‌  ಸಂದರ್ಭದಲ್ಲಿ  ಎ.ಮಂಜುನಾಥ್, ಡಾ.ಪ್ರದೀಪ್, ಡಾ. ಅಭೀಜಿತ್ ರೆಹಮತ್, ಮಂಜುನಾಥ್, ಅಭಿಷೇಕ, ಕೋಟೆ ಶಾಲೆಯ ಮುಖ್ಯೋಪಾಧ್ಯಾಯಿನಿ ಸೌಮ್ಯ, ತಿಮ್ಮಾರೆಡ್ಡಿ, ಬಿಆರ್ಸಿ ಸಂಪತ್ ಕುಮಾರ್ ಮತ್ತು ಶಿಕ್ಷಣ ಸಿಬ್ಬಂದಿ ಇದ್ದರು.

 

 

 

Leave a Reply

Your email address will not be published. Required fields are marked *