ದಲಿತ ಮುಖ್ಯ ಮಂತ್ರಿ ಎಂಬುದು‌ ಪಾರ್ಟಿಯಲ್ಲಿ ಇಲ್ಲ

ಆರೋಗ್ಯ

ದಲಿತ ಮುಖ್ಯಮಂತ್ರಿ ಎಂಬುದು ಪಾರ್ಟಿಯಲ್ಲಿ ಇಲ್ಲ ; ಮಾಜಿ ಸಚಿವ ಅಂಜನೇಯ

ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದರೆ ಜನರು ಮತ ಹಾಕುತ್ತಾರೆನ್ರೀ, ನಾನು 45 ವರ್ಷ ರಾಜಕೀಯ ಮಾಡಿದ್ದೇನೆ. ರಾಜಕೀಯ ಏನು ಎಂಬುದು ನಾನು ಕಂಡಿದ್ದೆನೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದ್ದಾರೆ.

 

 

 

ನಗರದ ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ  ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು 2008 ರಲ್ಲಿ ಮಲ್ಲಿಕಾರ್ಜುನ ಖರ್ಗೆ ಮುಂದಿಟ್ಟುಕೊಂಡು ಚುನಾವಣೆ ನಡೆಸಿದ್ದೆವು. ಆಗ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಬಂದಿದ್ದರೆ ಖರ್ಗೆ ಅವರನ್ನು ಸಿಎಂ ಮಾಡುತ್ತಿದ್ದೆವು.ಚುನಾವಣೆ ನಂತರ ಸಿಎಂ ಆಯ್ಕೆ ಮಾಡುತ್ತೇವೆ ಎಂದಾಗ ಮಾತ್ರ ಜನರು ಮತ ಹಾಕುತ್ತಾರೆ ಎಂದರು.

ಶಾಸಕರ ಅಭಿಪ್ರಾಯದಂತೆ ಸಿಎಂ ದಲಿತ ಮುಖ್ಯಮಂತ್ರಿ ಮಾಡುತ್ತೇವೆ ಎಂದು ನಾನು ಏಕೆ ಹೇಳಲಿ ಶಾಸಕರ ಅಭಿಪ್ರಾಯ ದಂತೆ ಸಿಎಂ ಅಗುತ್ತಾರೆ. ಹಿಂದೆ ಜಗಜೀವನ್ ರಾಂ ಅವರನ್ನು ಪ್ರಧಾನಿ ಮಾಡುತ್ತೇವೆ ಎಂದು ಹೇಳಿದ್ದರು. ಅಂದು ಅವಕಾಶ ಇದ್ದಾಗಲೆ ಮಾಡಲಿಲ್ಲ ದೇಶದ ಜನ. ಅಲ್ಲದೆ ಎಲ್ಲರೂ ಸಹ ಜಗಜೀವನ್ ರಾಂ ಅವರಿಗೆ ಅವಕಾಶ ಇದೆ ಎಂದು ಹೇಳಿದರು, ಆದರೆ ರಾಷ್ಟ್ರಪತಿ ಒಪ್ಪಲಿಲ್ಲ. ಬೇರೆ ಬೇರೆ ಪಕ್ಷದವರು ಕೂಡ ಅದನ್ನು ಕೆಡಸಿದರು ಎಂದು ಹೇಳಿದ ಅವರು, ದಲಿತ ಎಂಬುದು ಕಾಂಗ್ರೇಸ್ ಪಕ್ಷದಲ್ಲಿ ಇಲ್ಲ. ನಮ್ಮಲ್ಲಿ ಜಾತಿ ಮೀರಿ ನಾಯಕರು ಬೆಳೆದಿದ್ದಾರೆ. ದಲಿತ ಮುಖ್ಯಮಂತ್ರಿ ಎಂಬುದು ಪಾರ್ಟಿಯಲ್ಲಿ ಇಲ್ಲ ಎಂದರು

Leave a Reply

Your email address will not be published. Required fields are marked *